twitter
    For Quick Alerts
    ALLOW NOTIFICATIONS  
    For Daily Alerts

    ಕಾಂತಾರ ಅಬ್ಬರ: ಎರಡನೇ ಶನಿವಾರದ ಮುಂಬೈ ಬುಕ್ಕಿಂಗ್ಸ್ ಅಸಾಮಾನ್ಯ, ಹಿಂದೆಂದೂ ಕಂಡಿಲ್ಲ!

    |

    ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರ ಇಂದು ( ಅಕ್ಟೋಬರ್ 7 ) ಭರ್ಜರಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಕಾಂತಾರ ಚಿತ್ರ ಎಷ್ಟರ ಮಟ್ಟಕ್ಕೆ ಯಶಸ್ಸು ಸಾಧಿಸಿದೆ ಎಂಬುದನ್ನು ನಿಮಗೆ ಹೆಚ್ಚೇನೂ ಬಿಡಿಸಿ ಹೇಳಬೇಕಾಗಿಲ್ಲ. ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಸಹ ಕಾಂತಾರ ಸೂಪರ್, ಕಾಂತಾರ ಅಲ್ಟಿಮೇಟ್ ಚಿತ್ರ ಎಂದು ಹೇಳುತ್ತಿದ್ದಾರೆಯೇ ಹೊರತು ಯಾರೊಬ್ಬರೂ ಸಹ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆ ನೀಡುತ್ತಿಲ್ಲ. ನೆಗೆಟಿವ್ ವಿಮರ್ಶೆ ನೀಡುವುದಿರಲಿ, ಚಿತ್ರದಲ್ಲಿ ಮೈನಸ್ ಪಾಯಿಂಟ್ ಇದೆ ಎನ್ನುವವರು ಕೂಡ ಸಿಕ್ಕಿಲ್ಲ. ಅಷ್ಟರಮಟ್ಟಿಗೆ ಕಾಂತಾರ ಚಿತ್ರವನ್ನು ಸಿನಿಪ್ರೇಕ್ಷಕರು ಒಪ್ಪಿ ಅಪ್ಪಿಕೊಂಡಿದ್ದಾರೆ.

    ಮೊದಲ ದಿನ ನಿಯಮಿತ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಾಮಾನ್ಯ ಬಿಡುಗಡೆ ಕಂಡ ಕಾಂತಾರ ಚಿತ್ರದ ಕುರಿತು ಚಿತ್ರ ನೋಡಿದ ಪ್ರೇಕ್ಷಕರು ದೊಡ್ಡಮಟ್ಟದ ವಿಮರ್ಶೆಗಳನ್ನು ನೀಡಲು ಆರಂಭಿಸಿದ ಬೆನ್ನಲ್ಲೇ ಹೆಚ್ಚು ಹೆಚ್ಚು ಪರದೆಗಳಲ್ಲಿ ಕಾಂತಾರ ಚಿತ್ರವನ್ನು ಪ್ರದರ್ಶಿಸಲು ಆರಂಭಿಸಲಾಯಿತು.

    'ಕಾಂತಾರ' ಸಿನಿಮಾ ನೋಡಿ ರಿಷಬ್ ಶೆಟ್ಟಿ ಎದುರಿಗೆ ಸಿಕ್ಕರೆ ಕಾಲಿಗೆ ಬೀಳ್ತೀನಿ ಎಂದ 'ಧಿಮಾಕಿ'ನ ನಟ!'ಕಾಂತಾರ' ಸಿನಿಮಾ ನೋಡಿ ರಿಷಬ್ ಶೆಟ್ಟಿ ಎದುರಿಗೆ ಸಿಕ್ಕರೆ ಕಾಲಿಗೆ ಬೀಳ್ತೀನಿ ಎಂದ 'ಧಿಮಾಕಿ'ನ ನಟ!

    ಹೀಗೆ ಕಾಂತಾರ ಚಿತ್ರದ ಪ್ರದರ್ಶನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಂತೆ ಚಿತ್ರದ ಕಲೆಕ್ಷನ್ ಕೂಡ ಭರ್ಜರಿ ಏರಿಕೆ ಕಂಡಿತು. ಹೀಗೆ ಕಾಂತಾರ ಚಿತ್ರ ಬಿಡುಗಡೆಯಾದ ಮೂರ್ನಾಲ್ಕು ದಿನಗಳಲ್ಲಿಯೇ ದೇಶಾದ್ಯಂತ ಸದ್ದು ಮಾಡಲಾರಂಭಿಸಿತ್ತು. ಪರಭಾಷೆಯ ಸಿನಿಪ್ರೇಕ್ಷಕರು ಕಾಂತಾರ ಚಿತ್ರದ ವಿಮರ್ಶೆಯನ್ನು ಕಂಡು ನಮ್ಮ ಭಾಷೆಗಳಿಗೂ ಕಾಂತಾರ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಬೇಡಿಕೆಯನ್ನಿಟ್ಟರು. ಅದರಂತೆ ಕಾಂತಾರ ಚಿತ್ರದ ಹಿಂದಿ ಡಬ್ಬಿಂಗ್ ಮಾಡಲು ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಆರಂಭಿಸಿದೆ. ಅತ್ತ ಮುಂಬೈ ಸಿನಿ ಪ್ರೇಮಿಗಳು ಹಿಂದಿ ಬಿಡುಗಡೆವರೆಗೂ ಕಾಯಲು ನಾವು ತಯಾರಿಲ್ಲ ಎಂಬಂತೆ ಕನ್ನಡ ಅವತರಣಿಕೆಯನ್ನೇ ನೋಡಲು ಆರಂಭಿಸಿದ್ದಾರೆ. ಹೀಗಾಗಿ ಕಾಂತಾರ ಕನ್ನಡ ಮುಂಬೈನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ.

    ಎರಡನೇ ಶನಿವಾರದ ಮುಂಬೈ ಬುಕಿಂಗ್ ಭಯಂಕರ!

    ಎರಡನೇ ಶನಿವಾರದ ಮುಂಬೈ ಬುಕಿಂಗ್ ಭಯಂಕರ!

    ನಾಳೆ ( ಅಕ್ಟೋಬರ್ 8 ) ಕಾಂತಾರ ಚಿತ್ರದ ಎರಡನೇ ಶನಿವಾರದ ಪ್ರದರ್ಶನಗಳು ನಡೆಯಲಿವೆ. ಇನ್ನು ಶುಕ್ರವಾರ ( ಅಕ್ಟೋಬರ್ 7 ) ರಾತ್ರಿ 9ರ ವೇಳೆಗೆ ಮುಂಬೈ ನಗರದಲ್ಲಿ ಕಾಂತಾರ ಕನ್ನಡ ಚಿತ್ರಕ್ಕೆ ಶನಿವಾರದ ಒಟ್ಟು 55 ಪ್ರದರ್ಶನಗಳ ಬುಕ್ಕಿಂಗ್ ತೆರೆಯಲಾಗಿದೆ. ಮುಂಬೈ ನಗರದಲ್ಲಿ ಕನ್ನಡ ಭಾಷೆಯ ಚಿತ್ರವೊಂದಕ್ಕೆ ಈ ಪರಿ ಬುಕ್ಕಿಂಗ್ ಓಪನ್ ಆಗಿರುವುದನ್ನು ಕಂಡು ಸಿನಿಪ್ರೇಕ್ಷಕರು ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿಶೇಷವೆಂದರೆ ಈ ಸಮಯಕ್ಕೆ ಇಷ್ಟು ಪ್ರದರ್ಶನಗಳ ಪೈಕಿ 26 ಪ್ರದರ್ಶನದ ಟಿಕೆಟ್‌ಗಳು ವೇಗವಾಗಿ ಮಾರಾಟವಾಗ್ತಿವೆ.

    ಇದು ಒಳ್ಳೆಯ ಕಂಟೆಂಟ್ ಇರುವ ಚಿತ್ರದ ಪವರ್

    ಇದು ಒಳ್ಳೆಯ ಕಂಟೆಂಟ್ ಇರುವ ಚಿತ್ರದ ಪವರ್

    ಇನ್ನು ಕನ್ನಡ ಸಿನಿಮಾಗಳನ್ನು ಕನ್ನಡ ಭಾಷೆಯಲ್ಲಿಯೇ ಮುಂಬೈ ಮತ್ತು ಇತರೆ ಉತ್ತರ ಭಾರತದ ನಗರಗಳಲ್ಲಿ ಬಿಡುಗಡೆ ಮಾಡಿದರೆ ಯಾರೂ ನೋಡುವುದಿಲ್ಲ ಎಂಬ ಮಾತಿತ್ತು. ಆದರೆ ಒಳ್ಳೆಯ ಕಂಟೆಂಟ್ ಇರುವ ಚಿತ್ರಗಳನ್ನು ಮಾಡಿದರೆ ಸಿನಿಪ್ರೇಕ್ಷಕರು ಯಾವುದೇ ಭಾಷೆಯ ಚಿತ್ರವನ್ನಾದರೂ ಸರಿ ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ ಎಂಬುದನ್ನು ಕಾಂತಾರ ಸಾಬೀತುಪಡಿಸಿದೆ.

    ಇತರೆ ನಗರಗಳಲ್ಲಿಯೂ ಕಾಂತಾರ ಅಬ್ಬರ

    ಇತರೆ ನಗರಗಳಲ್ಲಿಯೂ ಕಾಂತಾರ ಅಬ್ಬರ

    ಇತರೆ ನಗರಗಳಲ್ಲಿಯೂ ಕಾಂತಾರ ಅಬ್ಬರ ಇನ್ನು ಎರಡನೇ ಶನಿವಾರದಂದು ಮುಂಬೈ ನಗರ ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್ ಸೇರಿದಂತೆ ಉಳಿದ ಪ್ರಮುಖ ನಗರಗಳಲ್ಲಿಯೂ ಕಾಂತಾರ ದೊಡ್ಡ ಸಂಖ್ಯೆಯಲ್ಲಿಯೇ ಪರದೆಗಳನ್ನು ಪಡೆದುಕೊಂಡಿದೆ. ಸದ್ಯ ಕಾಂತಾರ ಕನ್ನಡ ಭಾಷೆಯಲ್ಲಿಯೇ ಪರರಾಜ್ಯಗಳಲ್ಲಿ ಇಷ್ಟು ಸದ್ದನ್ನು ಮಾಡುತ್ತಿದ್ದರೆ ಡಬ್ಬಿಂಗ್ ಆದ ಮೇಲೆ ಎಷ್ಟರಮಟ್ಟಿಗೆ ಅಬ್ಬರಿಸಲಿದೆ ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.

    English summary
    Kantara movie got more than 55 shows on second Saturday in Mumbai city . Read on
    Friday, October 7, 2022, 21:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X