ಶಿಕ್ಷಣ ವ್ಯವಸ್ಥೆ ಸುತ್ತ 'SCAM (1770)': ದಡ್ಡ ಪ್ರವೀಣ ಜಾಣ ಆಗ್ಬಿಟ್ನಾ?
ಸ್ಯಾಂಡಲ್‌ವುಡ್‌ನಲ್ಲಿ ಕಂಟೆಂಟ್ ಓರಿಯೆಂಟೆಡ್ ಸಿನಿಮಾ ಸಂಖ್ಯೆ ಹೆಚ್ಚಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಕಥೆಯೇ ಮುಖ್ಯ ಅನ್ನುವಂತಹ ಸಿನಿಮಾಗಳು ಸದ್ದು ಮಾಡುತ್ತಿವೆ. ಈಗ ಮತ್ತೊಂದು ಸಿನಿಮಾ ಶಿಕ್ಷಣ ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದೆ. ಅದುವೇ 'SCAM (1770)'.
ಇಂದಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಕುರಿತಾದ ಸಿನಿಮಾವೇ 'SCAM (1770)'. ಈ ಸಿನಿಮಾದ ಟೀಸರ್ ರಿಲೀಸ್ ಆಗಿ ಜನಪ್ರಿಯಗೊಳ್ಳುತ್ತಿದೆ. ಈ ಸಿನಿಮಾದ ಟೀಸರ್ ಅನ್ನು ಹಿರಿಯ ನಟ ದತ್ತಣ್ಣ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದ್ಹಾಗೆ ಈ ಸಿನಿಮಾ ಕಥೆ ಹುಟ್ಟುಕೊಂಡಿದ್ದು, ಲಾಕ್ ಡೌನ್ ಸಮಯದಲ್ಲಿ. ಈ ಸಿನಿಮಾದಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಸಿನಿಮಾ ದಡ್ಡ ಪ್ರವೀಣ ಖ್ಯಾತಿಯ ರಂಜನ್ ನಟಿಸಿದ್ದಾರೆ. ಸದ್ಯ ರಿಲೀಸ್ ಆಗಿರೋ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿದೆ.
"ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ SCAM (1770). ಯಾವ ಅಭ್ಯಾಸ ತಪ್ಪಿದರೂ ಬದುಕಬಹುದು. ಆದರೆ ವಿದ್ಯಾಭ್ಯಾಸ ತಪ್ಪಿದ್ದರೆ ಬದುಕುವುದು ಕಷ್ಟ. ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರತಿಯೊಬ್ಬರು ನೋಡಲೇಬೇಕಾದ ಚಿತ್ರವಿದು. ಟೀಸರ್ ಬಿಡುಗಡೆ ಮಾಡಿಕೊಟ್ಟ ದತ್ತಣ್ಣ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದ" ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ಹೇಳಿದ್ದಾರೆ.
ಇಂದು ನಟೇಶ್ ಹಾಗೂ ನೇತ್ರಾವತಿ ಕಥೆ ಹೆಣೆದಿದ್ದಾರೆ. "ನಾನು ಕೂಡ ಶಿಕ್ಷಣ ವ್ಯವಸ್ಥೆ ಕುರಿತಾದ ಎಷ್ಟೋ ಕೇಸ್ ಗಳನ್ನು ತೆಗೆದುಕೊಂಡಿದ್ದೇನೆ. ನಾವಿಬ್ಬರು ಸೇರಿ ಬರೆದ ಕಥೆ ನಿರ್ಮಾಪಕರಿಗೆ ಇಷ್ಟವಾಯಿತು" ಎಂದು ಇಂದು ನಟೇಶ್(ವೈದ್ಯೆ) ಹಾಗೂ ನೇತ್ರಾವತಿ (ಅಡ್ವೊಕೇಟ್) ಹರ್ಷ ವ್ಯಕ್ತಪಡಿಸಿದ್ದಾರೆ.
'SCAM (1770)' ಸಿನಿಮಾವನ್ನು ದೇವರಾಜ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ'ಯ ದಡ್ಡ ಪ್ರವೀಣ ಖ್ಯಾತಿಯ ನಾಯಕ ರಂಜನ್, ನಿಶ್ಚಿತಾ, ಹರಿಣಿ, ನಾರಾಯಣಸ್ವಾಮಿ ನಟಿಸಿದ್ದಾರೆ. ಸತೀಶ್ ಆರ್ಯನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











