ಪ್ರೀಮಿಯರ್ ಶೋ ಟಿಕೆಟ್ ದರದಿಂದ ಬೇಸತ್ರಾ ಸಿನಿಪ್ರೇಮಿಗಳು?; ಸೋಲ್ಡ್ಔಟ್ ಆಗಿಲ್ಲ ಕಾಂತಾರದ ಯಾವುದೇ ಶೋ!

ಪ್ರೀಮಿಯರ್ ಶೋ ಗಾಳಿ ಎಲ್ಲ ಚಿತ್ರತಂಡಗಳಿಗೂ ತಾಕಿದಂತಿದೆ. ಈ ವರ್ಷ ತೆರೆಕಂಡ ಬಹುತೇಕ ಸಿನಿಮಾಗಳು ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದವು. ಬಿಡುಗಡೆಗೂ ಹಿಂದಿನ ದಿನವೇ ಚಿತ್ರಗಳನ್ನು ವೀಕ್ಷಿಸುವುದು ಒಂದು ರೀತಿಯ ಕಿಕ್ ಎಂದು ಮುಗಿಬಿದ್ದು ಟಿಕೆಟ್ ಖರೀದಿಸುತ್ತಿದ್ದರು ಸಿನಿ ಪ್ರೇಕ್ಷಕರು. ಆದರೆ ಅತಿಯಾದರೆ ಅಮೃತವೂ ವಿಷ ಅಂತಾರಲ್ಲ ಹಾಗೆ ಈ ಪ್ರೀಮಿಯರ್ ಶೋ ಕೂಡ ದಿನದಿಂದ ದಿನಕ್ಕೆ ಕ್ರೇಜ್ ಕಳೆದುಕೊಳ್ಳಲಾರಂಭಿಸಿದೆಯಾ ಎಂಬ ಅನುಮಾನ ಮೂಡುವಂತೆ ಮಾಡಿದೆ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಬುಕಿಂಗ್.

ಹೌದು, ಕಾಂತಾರ ಕರ್ನಾಟಕದ ಪ್ರಮುಖ ನಗರ ಹಾಗೂ ಪಟ್ಟಣಗಳ ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಹಾಗೂ ಹೊರ ರಾಜ್ಯದ ಚಿತ್ರಮಂದಿರಗಳಲ್ಲಿಯೂ ಪ್ರೀಮಿಯರ್ ಪ್ರದರ್ಶನಗಳನ್ನು ಕಾಣಲಿದ್ದು, ಮೂರ್ನಾಲ್ಕು ದಿನಗಳ ಹಿಂದೆಯೇ ಈ ಪೇಯ್ಡ್ ಪ್ರೀಮಿಯರ್ ಶೋಗಳ ಮುಂಗಡ ಬುಕಿಂಗ್ ಅನ್ನು ಆರಂಭಿಸಲಾಗಿತ್ತು. ಆದರೆ ಈ ಹಿಂದೆ ಕನ್ನಡ ಚಿತ್ರಗಳ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಸಿಗುತ್ತಿದ್ದಂತಹ ಪ್ರತಿಕ್ರಿಯೆ ಈ ಸಿನಿಮಾಗೆ ಕಂಡು ಬರುತ್ತಿಲ್ಲ. ಈ ಸಮಯದವರೆಗೂ ( ಸೆಪ್ಟೆಂಬರ್ 29ರ ಬೆಳಗ್ಗೆ 8.30ರವರೆಗೆ ) ಕಾಂತಾರ ಚಿತ್ರದ ಯಾವುದೇ ಪ್ರೀಮಿಯರ್ ಪ್ರದರ್ಶನದ ಟಿಕೆಟ್ ಕೂಡ ಸಂಪೂರ್ಣವಾಗಿ ಮಾರಾಟವಾಗಿ ಸೋಲ್ಡ್ ಔಟ್ ಆಗಿಲ್ಲ.

ಬಹುತೇಕ ಕಡೆ ಪ್ರದರ್ಶನಗಳ ಟಿಕೆಟ್ 80 - 90% ಮಾರಾಟವಾಗಿವೆಯಾದರೂ ಪೂರ್ಣ ಪ್ರಮಾಣದಲ್ಲಿ ಟಿಕೆಟ್ ಮಾರಾಟವಾಗಿಲ್ಲ. ಈ ಹಿಂದಿನ ಕನ್ನಡ ಚಿತ್ರಗಳಿಗೆ ಇದೇ ರೀತಿ ಪ್ರೀಮಿಯರ್ ಆಯೋಜಿಸಿದ್ದಾಗ ಬಿಡುಗಡೆಗೆ ಒಂದೆರಡು ದಿನ ಬಾಕಿ ಇರುವಾಗಲೇ ಕೆಲ ಪ್ರದರ್ಶನಗಳ ಟಿಕೆಟ್ ಸೋಲ್ಡ್ ಔಟ್ ಆಗುತ್ತಿದ್ದವು. ಆದರೆ ಕಾಂತಾರ ಚಿತ್ರದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಈ ವೇಗ ಕಾಣುತ್ತಿಲ್ಲ.

Kantara movie premiere show advance bookings are not upto the mark

ಆದರೆ ಪ್ರದರ್ಶನ ಆರಂಭಗೊಳ್ಳುವ ಮುನ್ನ ಈ ಶೋಗಳು ಸೋಲ್ಡ್ ಔಟ್ ಆಗುವ ಸಾಧ್ಯತೆ ಹೆಚ್ಚಿದ್ದು ದಿನದಿಂದ ದಿನಕ್ಕೆ ಪ್ರೀಮಿಯರ್ ಶೋಗಳ ಕ್ರೇಜ್ ಕಡಿಮೆಯಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಇನ್ನು ಶೋಗಳ ಸಂಖ್ಯೆ ಹೆಚ್ಚಾದ ಕಾರಣ ಈ ರೀತಿ ಆಗ್ತಾ ಇದೆಯಾ ಅಥವಾ ಟಿಕೆಟ್ ದರ ದುಬಾರಿಯಾದ ಕಾರಣ ಜನರು ಪ್ರೀಮಿಯರ್ ಶೋಗಳನ್ನು ವೀಕ್ಷಿಸಲು ಮುಂದಾಗ್ತಾ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಅದರಲ್ಲಿಯೂ 90% ಪ್ರೀಮಿಯರ್ ಶೋಗಳನ್ನು ಕೇವಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಆಯೋಜಿಸಲಾಗಿದ್ದು, ಒಬ್ಬ ವ್ಯಕ್ತಿ ಸಿನಿಮಾ ನೋಡೋಕೆ ಕನಿಷ್ಟ 200 ರೂಪಾಯಿ ಜೇಜಲ್ಲಿ ಇರಲೇಬೇಕಿದೆ. ಅದರ ಬದಲು ಸಿಂಗಲ್ ಸ್ಕ್ರೀನ್‌ಗಳಲ್ಲೂ ಈ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದರೆ ಪ್ರತಿಕ್ರಿಯೆ ತುಸು ಉನ್ನತ ಹಂತದಲ್ಲಿರುತ್ತಿತ್ತು ಎನ್ನಬಹುದು.

More from Filmibeat

English summary
Rishab Shetty starrer Kantara movie premiere show bookings are not upto the mark. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X