For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಚಿತ್ರವನ್ನು 75 ರೂಪಾಯಿಗೆ ವೀಕ್ಷಿಸಿ; ಈ ಒಂದು ಚಿತ್ರಮಂದಿರದಲ್ಲಿ ಮಾತ್ರ!

  |

  ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಿತ್ರ ನಾಳೆ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಹಾಡುಗಳು ಮತ್ತು ಟ್ರೈಲರ್ ಈಗಾಗಲೇ ಸಿನಿರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರತಂಡ ಬಿಡುಗಡೆ ದಿನಕ್ಕೂ ಮುನ್ನಾ ದಿನ ರಾಜ್ಯದ ವಿವಿಧ ಪ್ರಮುಖ ನಗರಗಳು, ಪಟ್ಟಣಗಳು ಹಾಗೂ ಹೊರ ರಾಜ್ಯಗಳ ಕೆಲ ಪ್ರಮುಖ ನಗರಗಳಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಿದೆ.

  ಹೀಗಾಗಿ ಇಂದು ( ಸೆಪ್ಟೆಂಬರ್ 29 ) ಸಂಜೆಯಿಂದಲೇ ಚಿತ್ರದ ಪ್ರೀಮಿಯರ್ ಶೋಗಳು ಆರಂಭವಾಗುತ್ತಿದ್ದು, ರಾಜ್ಯದ ಎಲ್ಲಾ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200ಕ್ಕಿಂತ ಹೆಚ್ಚಿದೆ. ಇನ್ನು ಬೆರಳೆಣಿಕೆಯಷ್ಟು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮಾತ್ರ ಕಾಂತಾರ ಚಿತ್ರದ ಪ್ರೀಮಿಯರ್ ಶೋಗಳನ್ನು ಚಿತ್ರತಂಡ ಆಯೋಜನೆ ಮಾಡಿದ್ದು, ಇಲ್ಲಿ ಮಾತ್ರ ಸಾಮಾನ್ಯ ಪ್ರೇಕ್ಷಕನ ಕೈಗೆಟಕುವ ದರಕ್ಕೆ ಟಿಕೆಟ್‌ಗಳು ಲಭ್ಯವಿವೆ.

  ಹೀಗಿರುವಾಗ ಚಿತ್ರತಂಡ ಕಾಂತಾರ ಚಿತ್ರದ ಪ್ರೀಮಿಯರ್ ಶೋ ಟಿಕೆಟ್ 75 ರೂಪಾಯಿಗೆ ಲಭ್ಯವಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕದ ಸಂಸ್ಕೃತಿ ಹಾಗೂ ಹಿರಿಮೆಯ ಸಿರಿತನವನ್ನು ಪ್ರಚಾರ ಮಾಡಲು 75 ರೂಪಾಯಿಗಳಿಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಅಂದಹಾಗೆ ಈ ಸಿರಿತನದ ಪ್ರಚಾರ ಕಾರ್ಯ ಊರ್ವಶಿ ಚಿತ್ರಮಂದಿರದ 9.45 ಪ್ರೀಮಿಯರ್ ಶೋನ ಸಿಲ್ವರ್ ಕ್ಲಾಸ್ ವಿಭಾಗಕ್ಕೆ ಮಾತ್ರ ಸೀಮಿತವಾಗಿದೆ. ಅಂದರೆ ಇಂದು ( ಸೆಪ್ಟೆಂಬರ್ 30 ) ರಾತ್ರಿ ಊರ್ವಶಿ ಚಿತ್ರಮಂದಿರದ 9.45 ಶೋನ ಸಿಲ್ವರ್ ಕ್ಲಾಸ್ ಟಿಕೆಟ್ ದರ ಮಾತ್ರ 75 ರೂಪಾಯಿಗಳಿರಲಿದ್ದು ಉಳಿದ ಎಲ್ಲ ಚಿತ್ರಮಂದಿರಗಳಲ್ಲಿಯೂ ಟಿಕೆಟ್ ದರ 200ಕ್ಕೂ ಅಧಿಕ.

  English summary
  Kantara movie premiere show tickets to be sold for 75 rupees in Urvashi theatre
  Thursday, September 29, 2022, 17:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X