For Quick Alerts
  ALLOW NOTIFICATIONS  
  For Daily Alerts

  ವರಹ ರೂಪಂ ಮಾತ್ರವಲ್ಲ ಕಾಂತಾರದ 'ಸಿಂಗಾರ ಸಿರಿಯೇ' ಕೂಡ ಕದ್ದ ಮಾಲು ಎಂದ ನೆಟ್ಟಿಗರು!

  |

  ಸದ್ಯ ಭಾರತದಾದ್ಯಂತ ಅತಿದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರವೆಂದರೆ ಅದು ಕಾಂತಾರ. ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆ ಇರುವ ಕಾಂತಾರ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಕರಾವಳಿ ಜನರ ಬಹುಮುಖ್ಯ ದೈವ ಆಚರಣೆಯಾದ ಭೂತ ಕೋಲದ ಜತೆ ಸಾಗುವ ಕಾಡು ಜನರ ಕತೆಯನ್ನು ಹೆಣೆದ ರಿಷಬ್ ಶೆಟ್ಟಿಗೆ ಸಿನಿ ಪ್ರೇಕ್ಷಕರು ಬಹುಪರಾಕ್ ಎಂದಿದ್ದರು.

  ಕೇವಲ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಸಿನಿ ಪ್ರೇಕ್ಷಕರೂ ಸಹ ಕಾಂತಾರ ಚಿತ್ರಕ್ಕೆ ಮನಸೋತಿದ್ದಾರೆ. ಮುಂಬೈನಲ್ಲಿ ಪ್ರತಿದಿನ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಂತಾರ ಕನ್ನಡ ಚಿತ್ರ ಪಡೆದುಕೊಳ್ಳುತ್ತಿದ್ದು, ಹೈದರಾಬಾದ್, ಚೆನ್ನೈನಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿಯೇ ಚಿತ್ರವನ್ನು ನಮ್ಮ ಭಾಷೆಗಳಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಿ ಎಂದು ಪರ ಭಾಷಾ ಪ್ರೇಕ್ಷಕರು ಒತ್ತಾಯಿಸಿದ್ದರು. ಅದರಂತೆ ಇದೀಗ ಕಾಂತಾರ ಪ್ಯಾನ್ ಇಂಡಿಯಾ ಬಿಡುಗಡೆಗೆ ತಯಾರಾಗಿದ್ದು, ದೊಡ್ಡ ಸಕ್ಸಸ್ ಅಲೆಯಲ್ಲಿರುವಾಗ ಟ್ರೋಲ್‌ಗೂ ಒಳಗಾಗುತ್ತಿದೆ.

  ಹೌದು, ಕಾಂತಾರ ಚಿತ್ರ ತನ್ನ ಹಾಡುಗಳಿಂದಾಗಿ ಸಾಕಷ್ಟು ಟ್ರೋಲ್‌ಗಳಿಗೆ ಒಳಗಾಗಿದೆ. ಮೊದಲಿಗೆ 'ವರಹ ರೂಪಂ' ಹಾಡು ಮಲಯಾಳಂನ ಹಾಡಿನ ಕಾಪಿ ಎಂದು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು. ಇದೀಗ ಅದೇ ರೀತಿ ಚಿತ್ರದ ಚಾರ್ಟ್‌ಬಸ್ಟರ್ ಹಾಡಾದ 'ಸಿಂಗಾರ ಸಿರಿಯೇ' ಕೂಡ ಮರಾಠಿಯ ಹಾಡೊಂದರ ಕಾಪಿ ಎಂದು ದೂಡುತ್ತಿದ್ದಾರೆ ನೆಟ್ಟಿಗರು.

  ಅಪ್ಸರ ಆಲಿಯ ಕಾಪಿಯೇ ಸಿಂಗಾರ ಸಿರಿಯೇ ಎಂದ ನೆಟ್ಟಿಗರು

  ಅಪ್ಸರ ಆಲಿಯ ಕಾಪಿಯೇ ಸಿಂಗಾರ ಸಿರಿಯೇ ಎಂದ ನೆಟ್ಟಿಗರು

  ಕೆಲ ನೆಟ್ಟಿಗರು ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಟ್ಯೂನ್ ಅಪ್ಸರ್ ಆಲಿ ಹಾಡಿನ ಕಾಪಿ ಎನ್ನುತ್ತಿದ್ದಾರೆ. ಈ ಹಾಡಿನಲ್ಲಿ ಬರುವ ಮುದ್ದಾದ ಮಾಯಾವಿ ಸಾಲಿನ ಟ್ಯೂನ್ ಅನ್ನು ಮರಾಠಿಯ ನಟರಂಗ್ ಚಿತ್ರದ ಹಿಟ್ ಹಾಡು 'ಅಪ್ಸರ ಆಲಿ'ಯಿಂದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕದ್ದಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಅಪ್ಸರ ಆಲಿ ಹಾಡು 2010ರಲ್ಲಿ ತೆರೆಕಂಡ ನಟರಂಗ್ ಚಿತ್ರದ ಹಾಡಾಗಿದ್ದು, ಈ ಹಾಡಿಗೆ ಅಜಯ್-ಅಟುಲ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಸಾಮ್ಯತೆ ಕಡಿಮೆ!

  ಸಾಮ್ಯತೆ ಕಡಿಮೆ!

  ಇನ್ನು ನೆಟ್ಟಿಗರು ಆರೋಪಿಸುತ್ತಿರುವ ಹಾಗೆ ಸಿಂಗಾರ ಸಿರಿಯೇ ಹಾಡನ್ನು ಅಪ್ಸರ ಆಲಿ ಹಾಡಿನಿಂದ ಕದ್ದು ಮಾಡಲಾಗಿದೆ ಎಂದು ಹೇಳುವುದು ಕಷ್ಟ. ಏಕೆಂದರೆ ಎರಡೂ ಹಾಡುಗಳ ಟ್ಯೂನ್‌ಗೂ ದೊಡ್ಡ ಮಟ್ಟದ ವ್ಯತ್ಯಾಸವಿದೆ. ಆದರೆ ಹಾಡಿನ 'ಮುದ್ದಾದ ಮಾಯಾವಿ' ಸಾಲಿನ ಟ್ಯೂನ್ ಅಪ್ಸರ ಆಲಿಯ ಹಾಡಿನ ಟ್ಯೂನ್‌ಗೂ ಸಾಮ್ಯತೆ ಇದ್ದು ಈ ಒಂದು ಕಾರಣದಿಂದ ನೆಟ್ಟಿಗರು ಹಾಡು ಕಾಪಿ ಎನ್ನುತ್ತಿದ್ದಾರೆ.

  ವರಹ ರೂಪಂ ಕಾಪಿ ಎಂಬ ಆರೋಪ ತಳ್ಳಿ ಹಾಕಿದ ಅಜನೀಶ್

  ವರಹ ರೂಪಂ ಕಾಪಿ ಎಂಬ ಆರೋಪ ತಳ್ಳಿ ಹಾಕಿದ ಅಜನೀಶ್

  ಇನ್ನು ಕನ್ನಡ ಫಿಲ್ಮಿಬೀಟ್ ಜತೆ ಮಾತನಾಡಿದ ಕಾಂತಾರ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ "ವರಹ ರೂಪಂ ಹಾಗೂ ನವರಸಂ. ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ. ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ. ಆದರೆ ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆ. ಸ್ಟೈಲ್ ವಿಚಾರದಲ್ಲಿ 'ವರಹ ರೂಪಂ' ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧ ಇಲ್ಲ." ಎಂದು ಹೇಳಿಕೆ ನೀಡುವ ಮೂಲಕ ವರಹ ರೂಪಂ ಕಾಪಿ ಎನ್ನುವ ಆರೋಪವನ್ನು ತಳ್ಳಿಹಾಕಿದ್ದರು.

  English summary
  Kantara movie's Singara Siriye song is copy of Apsara Aali says netizens. Read on
  Tuesday, October 11, 2022, 16:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X