For Quick Alerts
  ALLOW NOTIFICATIONS  
  For Daily Alerts

  ಓಟಿಟಿಗೆ ಬಂದ 'ಕಾಂತಾರ'ದಲ್ಲಿ 'ವರಾಹ ರೂಪಂ' ಹಾಡು ಬದಲಾವಣೆ; ಸೋತ ಹೊಂಬಾಳೆ, ಅಜನೀಶ್!

  |

  ವಿಶ್ವದಾದ್ಯಂತ ಸದ್ದು ಮಾಡಿದ್ದ ಕಾಂತಾರ ಚಿತ್ರ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ವಿಶ್ವ ಗಲ್ಲಾ ಪೆಟ್ಟಿಗೆಯಲ್ಲಿ 400 ಕೋಟಿಯನ್ನೂ ಗಳಿಸಿ ಅಬ್ಬರಿಸಿತ್ತು. ಚಲನಚಿತ್ರದ ಇತಿಹಾಸದಲ್ಲಿ 400 ಕೋಟಿ ಕ್ಲಬ್ ಸೇರಿದ ಒಂಬತ್ತನೇ ಚಿತ್ರ ಎಂಬ ದಾಖಲೆಯನ್ನೂ ಸಹ ಕಾಂತಾರ ಚಿತ್ರ ತನ್ನ ಹೆಸರಿಗೆ ಬರೆದುಕೊಂಡಿತ್ತು. ಚಿತ್ರ ವೀಕ್ಷಿಸಿದ್ದ ಪ್ರೇಕ್ಷಕರು ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಮೆಚ್ಚಿಕೊಂಡಿದ್ದರು. ಅದರಲ್ಲಿಯೂ ಚಿತ್ರದ ಅಂತಿಮದಲ್ಲಿ ಬರುವ 'ವರಾಹ ರೂಪಂ' ಹಾಡು ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರಿಗೂ ಇಷ್ಟವಾಗಿತ್ತು.

  ಇನ್ನು ಈ ಹಾಡು ಚಿತ್ರಮಂದಿರದಿಂದ ಹೊರಗೂ ಸಹ ಸದ್ದು ಮಾಡಲಾರಂಭಿಸಿತು. ಸಾಮಾಜಿಕ ಜಾಲತಾಣದಲ್ಲಿ ಹಾಡು ವೈರಲ್ ಆಗುತ್ತಿದ್ದಂತೆ ವಿವಾದವೂ ಸಹ ತಲೆದೂರಿತು. ಹೌದು, ವರಾಹ ರೂಪಂ ಹಾಡು ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಂಪೋಸ್ ಮಾಡಿದ್ದ 'ನವರಸಮ್' ಹಾಡಿನ ಕಾಪಿ ಎಂದು ಟ್ರೋಲ್ಸ್ ಶುರುವಾದವು. ಇನ್ನು ಕೆಲವರು ಇದು ಅದೇ ಹಾಡಿನ ಕಾಪಿ ಎಂದರೆ ಇನ್ನೂ ಕೆಲವರು ಎರಡೂ ಹಾಡುಗಳಿಗೂ ವ್ಯತ್ಯಾಸವಿದೆ ಎಂದು ಹೇಳಿದ್ದರು.

  'ಕಾಂತಾರ' ವಿರುದ್ಧ ಹೇಳಿಕೆ: ನಟ ಚೇತನ್ ಎಫ್‌ಐಆರ್ ರದ್ದಿಗೆ ಕೋರ್ಟ್ ನಕಾರ'ಕಾಂತಾರ' ವಿರುದ್ಧ ಹೇಳಿಕೆ: ನಟ ಚೇತನ್ ಎಫ್‌ಐಆರ್ ರದ್ದಿಗೆ ಕೋರ್ಟ್ ನಕಾರ

  ಇನ್ನು ಈ ವಿಷಯಕ್ಕೆ ಸ್ವತಃ ಎಂಟ್ರಿ ಕೊಟ್ಟಿದ್ದ ಥೈಕ್ಕುಡಂ ಬ್ರಿಡ್ಜ್‌ನ ವಿಯಾನ್ ಫೆರ್ನಾಂಡಿಸ್ ಕಾಂತಾರ ಚಿತ್ರದ ವರಾಹ ರೂಪಂ ಹಾಡು ತಮ್ಮ ನವರಸಮ್ ಹಾಡಿನ ಕಾಪಿ ಎಂದು ಹೇಳಿದ್ದರು ಹಾಗೂ ಕೇರಳದ ಸ್ಥಳೀಯ ನ್ಯಾಯಾಲಯದಲ್ಲಿ ಹಾಡಿನ ವಿರುದ್ಧ ದೂರು ಕೂಡ ದಾಖಲಾಗಿತ್ತು ಮತ್ತು ಹಾಡನ್ನು ಉಪಯೋಗಿಸದಂತೆ ನ್ಯಾಯಾಲಯ ತೀರ್ಪನ್ನೂ ಸಹ ನೀಡಿತ್ತು. ಆದರೆ ಇದಕ್ಕೆಲ್ಲಾ ಸ್ಪಂದಿಸದ ಕಾಂತಾರ ಚಿತ್ರತಂಡ ಚಿತ್ರಮಂದಿರದಲ್ಲಿ ಹಾಡಿಗೆ ಕತ್ತರಿ ಹಾಕದೆಯೇ ಪ್ರದರ್ಶನ ಮಾಡಿತ್ತು. ಆದರೆ ಇದೀಗ ಓಟಿಟಿಗೆ ಕಾಂತಾರ ಲಗ್ಗೆ ಇಟ್ಟಿದ್ದು ವರಾಹ ರೂಪಂ ಹಾಡೇ ಬದಲಾಗಿಬಿಟ್ಟಿದೆ!

  ಅದೇ ಸಾಹಿತ್ಯ, ರಾಗ ಬೇರೆ!

  ಅದೇ ಸಾಹಿತ್ಯ, ರಾಗ ಬೇರೆ!

  ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೊ ಓಟಿಟಿಯಲ್ಲಿ ಇಂದಿನಿಂದ ( ನವೆಂಬರ್ 24 ) ಪ್ರಸಾರವಾಗುತ್ತಿದ್ದು, ಮತ್ತೊಮ್ಮೆ ಕಾಂತಾರ ಚಿತ್ರವನ್ನು ನೋಡಲು ಮುಂದಾದ ಪ್ರೇಕ್ಷಕನಿಗೆ ನಿರಾಸೆಯಾಗಿದೆ. ಚಿತ್ರದ ಕೊನೆಯಲ್ಲಿ ಇದ್ದ ವರಾಹ ರೂಪಂ ಹಾಡಿನ ರಾಗ ಸಂಪೂರ್ಣ ಬದಲಾಗಿ ಹೋಗಿದೆ. ಇನ್ನು ಹಾಡಿನ ಸಾಹಿತ್ಯ ಹಾಗೇ ಉಳಿದಿದ್ದು ಹಾಡಿಗೆ ಬಳಸಲಾಗಿದ್ದ ರೋಮಾಂಚನಕಾರಿ ಸಂಗೀತವನ್ನೂ ಸಹ ಬದಲಾವಣೆ ಮಾಡಲಾಗಿದೆ. ಈ ಹಿಂದಿನ ಹಾಡಿನಲ್ಲಿ ಇದ್ದಷ್ಟು ಗಮ್ಮತ್ತು ಈ ಹಾಡಿನಲ್ಲಿ ಇಲ್ಲ ಹಾಗೂ ಹಳೆಯ ಹಾಡನ್ನು ಕೇಳಿದ್ದ ಕೇಳುಗರಿಗೆ ಈ ಹಾಡು ಕೊಂಚವೂ ಕಿಕ್ ನೀಡುವುದಿಲ್ಲ.

  ಸೋತ ಹೊಂಬಾಳೆ, ಅಜನೀಶ್!

  ಸೋತ ಹೊಂಬಾಳೆ, ಅಜನೀಶ್!

  ಇನ್ನು ಥೈಕ್ಕುಡಂ ಬ್ರಿಡ್ಜ್ ಎರಡೆರಡು ಕೇಸ್ ಹಾಕಿದ್ದರೂ ಪ್ರತಿಕ್ರಿಯಿಸದೇ ಇದ್ದ ಹೊಂಬಾಳೆ ಸಂಸ್ಥೆ ಈಗ ಓಟಿಟಿಯಲ್ಲಿ ಹಾಡನ್ನು ಬದಲಾಯಿಸಿ ಬಿಡುಗಡೆ ಮಾಡುವ ಮೂಲಕ ಪರೋಕ್ಷವಾಗಿ ಸೋಲೊಪ್ಪಿಕೊಂಡಂತಿದೆ. ಅತ್ತ ತಾನು ಯಾವ ಹಾಡನ್ನೂ ಕದ್ದಿಲ್ಲ ಎಂದು ಖಡಕ್ ಆಗಿ ಹೇಳಿದ್ದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೂ ಸಹ ಇದು ದೊಡ್ಡ ಹಿನ್ನಡೆಯಾಗಿದೆ.

  ಯುಟ್ಯೂಬ್‌ನಿಂದಲೂ ಹಾಡು ಡಿಲಿಟ್!

  ಯುಟ್ಯೂಬ್‌ನಿಂದಲೂ ಹಾಡು ಡಿಲಿಟ್!

  ಇದಕ್ಕೂ ಮುನ್ನವೇ ಯುಟ್ಯೂಬ್‌ನಿಂದ ವರಾಹ ರೂಪಂ ಹಾಡು ಡಿಲಿಟ್ ಆಗಿತ್ತು. ಥೈಕ್ಕುಡಂ ಬ್ರಿಡ್ಸ್ ಸಲ್ಲಿಸಿದ್ದ ಕಾಪಿರೈಟ್ ಕ್ಲೈಮ್‌ನಿಂದಾಗಿ ವರಾಹ ರೂಪಂ ಹಾಡನ್ನು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿತ್ತು. ಅಷ್ಟೇ ಅಲ್ಲದೇ ಆಡಿಯೊ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳಿಂದಲೂ ಸಹ ಹಾಡನ್ನು ತೆಗೆದು ಹಾಕಲಾಗಿತ್ತು.

  ಶುರುವಾಯಿತು ಟ್ರೋಲ್

  ಶುರುವಾಯಿತು ಟ್ರೋಲ್

  ಇನ್ನು ಈ ಹಿಂದೆ ಹಾಡನ್ನು ಕದಿಯಲಾಗಿದೆ ಎಂದು ಕಾಂತಾರ ತಂಡ ಹಾಗೂ ಅಜನೀಶ್ ಲೋಕನಾಥ್ ಅವರನ್ನು ಟ್ರೋಲ್ ಮಾಡಿದ್ದ ನೆಟ್ಟಿಗರು ಈಗ ಹಾಡಿನ ಬದಲಾವಣೆ ಮಾಡಿರುವುದರಿಂದ ಮತ್ತೊಮ್ಮೆ ಟ್ರೋಲ್ ಆರಂಭಿಸಿಕೊಂಡಿದ್ದಾರೆ. ತನ್ನದಲ್ಲದ ಕೆಲಸವನ್ನು ತಾನೇ ಮಾಡಿದ್ದು ಎಂದು ಹೇಳಿಕೊಳ್ಳುವುದರಲ್ಲಿ ಏನು ಪ್ರಯೋಜನ ಎಂದು ಅಜನೀಶ್ ವಿರುದ್ಧ ಕಿಡಿಕಾರಿದ್ದಾರೆ.

  English summary
  Kantara movie streaming in prime video with new version of Varaha Roopam Song. Taka a look
  Thursday, November 24, 2022, 8:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X