twitter
    For Quick Alerts
    ALLOW NOTIFICATIONS  
    For Daily Alerts

    2 ದಿನಗಳಲ್ಲಿ 'ಕಾಂತಾರ' ತಂಡದಿಂದ ಮತ್ತೊಂದು ಸಿಹಿ ಸುದ್ದಿ: ಪ್ಯಾನ್ ಇಂಡಿಯಾ ರಿಲೀಸ್‌ಗೆ ಸ್ಕೆಚ್!

    |

    ದೇಸಿ ಕಥೆಯನ್ನು ಹೊತ್ತು ಬಂದಿದ್ದ ಅಲ್ಲು ಅರ್ಜುನ್ ಸಿನಿಮಾ 'ಪುಷ್ಪ, ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದು ಬೀಗಿತ್ತು. 'ಪುಷ್ಪ' ಅಂತಹ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿರಬೇಕಾದರೆ, 'ಕಾಂತಾರ' ಯಾಕೆ ಆಗಿಲ್ಲ? ಅನ್ನೋ ಪ್ರಶ್ನೆ ಕಾಡಿತ್ತು.

    ಆದರೆ, ರಿಷಬ್ ಶೆಟ್ಟಿಗೆ ಮನಸ್ಸು ಇರಲಿಲ್ಲವೋ? ಅಥವಾ ಹೊಂಬಾಳೆ ಫಿಲ್ಮ್ಸ್ ಮನಸ್ಸು ಮಾಡಿಲ್ಲವೋ ಗೊತ್ತಿಲ್ಲ. 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ? ಅನ್ನೋದಕ್ಕೆ ಅಸಲಿ ಕಾರಣವನ್ನೂ ಹೊರಬಿದ್ದಿರಲಿಲ್ಲ. ಆದ್ರೀಗ 'ಕಾಂತಾರ'ವನ್ನು ಡಬ್ ಮಾಡಿ ಬಿಡುಗಡೆ ಮಾಡೋಕೆ ಸಿದ್ಧತೆಗಳು ನಡೆಯುತ್ತಿವೆ.

    'ಕಾಂತಾರ' ಸ್ಯಾಟಲೈಟ್‌, ಓಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್: ಎಷ್ಟು ಕೋಟಿಗೆ ಮಾರಾಟ?'ಕಾಂತಾರ' ಸ್ಯಾಟಲೈಟ್‌, ಓಟಿಟಿ ರೈಟ್ಸ್ ಭರ್ಜರಿ ಮೊತ್ತಕ್ಕೆ ಸೇಲ್: ಎಷ್ಟು ಕೋಟಿಗೆ ಮಾರಾಟ?

    'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿದ್ದಂತೆ ಬೇರೆ ಬೇರೆ ಭಾಷೆಯಲ್ಲಿ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಲು ಮುಂದೆ ಬರುತ್ತಿದ್ದಾರಂತೆ. ಅದಕ್ಕೆ ಇನ್ನು ಎರಡು ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಕನ್ನಡಿಗರಿಗೆ ಸಿಹಿ ಸುದ್ದಿಯನ್ನು ನೀಡಲಿದೆಯಂತೆ. ಈ ಮಾತನ್ನು ಸ್ವತ: ರಿಷಬ್ ಶೆಟ್ಟಿನೇ ಹೇಳಿಕೊಂಡಿದ್ದಾರೆ. ಅದರ ಸಾರಾಂಶ ಹೀಗಿದೆ.

    'ಕಾಂತಾರ' ಶೋ ಹೆಚ್ಚಾಗ್ತಿದೆ

    'ಕಾಂತಾರ' ಶೋ ಹೆಚ್ಚಾಗ್ತಿದೆ

    "ಟೀಸರ್ ರಿಲೀಸ್ ಆದಾಗ ಎಲ್ಲರೂ ಕೇಳಿದ್ರು. ಪ್ಯಾನ್ ಇಂಡಿಯಾ ಮಾಡೋದಿಲ್ವಾ ಅಂತ. ವಿಜಯ್ ಕಿರಗಂದೂರು ಪ್ಯಾನ್ ಇಂಡಿಯಾ ರಿಲೀಸ್ ಮಾಡುವುದರಲ್ಲಿ ಶಕ್ತರು. ಆದರೆ, ಕನ್ನಡದಲ್ಲೇ ಪ್ರಪಂಚದಾದ್ಯಂತ ಹೋಗಬೇಕು. ಎಲ್ಲಾ ಕಡೆ ಒಟ್ಟಿಗೆ ರಿಲೀಸ್ ಆಗಬೇಕು ಅಂತ ಒಂದು ಯೋಚನೆ ಇದ್ದಾಗ, ಅದನ್ನು ಶಕ್ತವಾಗಿ ಎಲ್ಲರಿಗೂ ತಲುಪಿಸಿದ್ದಾರೆ. ಇವತ್ತು ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ಪ್ರತಿದಿನ ಶೋಗಳ ಸಂಖ್ಯೆ ಹೆಚ್ಚಾಗುತ್ತಿವೆ." ಎಂದು ಸಿನಿಮಾ ಸಕ್ಸಸ್ ಬಗ್ಗೆ ಹೇಳಿಕೊಂಡಿದ್ದಾರೆ.

    ನಾಲ್ಕೈದು ಭಾಷೆಯಲ್ಲಿ ಚಿತ್ರ ಮಾಡಿದ್ರೆ ಪ್ಯಾನ್ ಇಂಡಿಯಾ ಆಗ್ಬಿಡಲ್ಲ; ದೊಡ್ಡ ಚಿತ್ರಕ್ಕೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ!ನಾಲ್ಕೈದು ಭಾಷೆಯಲ್ಲಿ ಚಿತ್ರ ಮಾಡಿದ್ರೆ ಪ್ಯಾನ್ ಇಂಡಿಯಾ ಆಗ್ಬಿಡಲ್ಲ; ದೊಡ್ಡ ಚಿತ್ರಕ್ಕೆ ಟಾಂಗ್ ಕೊಟ್ಟ ರಿಷಬ್ ಶೆಟ್ಟಿ!

    ಇದು ಪಂಜುರ್ಲಿ ದೈವದ ಆಶೀರ್ವಾದ

    ಇದು ಪಂಜುರ್ಲಿ ದೈವದ ಆಶೀರ್ವಾದ

    "ಒಂದು ಮಂಗಳೂರು ಭಾಗ. ಇಡೀ ಕೋಸ್ಟಲ್ ಏರಿಯಾ ಅಂತ ತೆಗೆದುಕೊಂಡರೆ, ನಮ್ಮ ಆಚರಣೆ ಇದು. ಆದರೆ ಹೊರಗಡೆಯವರೂ ಕೂಡ ನಾವು ಒಂದು ಸಾರಿ ಹೋಗಬೇಕು. ಅವರ ನಿಯಮಕ್ಕೆ ಹೋಗಬೇಕು. ಪಂಜುರ್ಲಿ ದೈವದ್ದು, ಗುಳಿಗ ದೈವದ್ದು ಆಶೀರ್ವಾದ ತೆಗೆದುಕೊಳ್ಳಬೇಕು. ದೈವಿಕವಾಗಿ ನಮಗೆ ಫೀಲ್ ಆಗುತ್ತಿದೆ ಅಂತ ಹೇಳುತ್ತಿದ್ದಾರೆ. ಇದು ನಾವು ಮಾಡಿದ್ದಲ್ಲ. ಪಂಜುರ್ಲಿ, ಗುಳಿಗ ದೈವಗಳು ಆಶೀರ್ವಾದದಿಂದಲೇ ಸಿನಿಮಾ ಆಗಿತ್ತು ಅಂದುಕೊಳ್ಳುತ್ತೇನೆ." ಎನ್ನುತ್ತಾರೆ ರಿಷಬ್ ಶೆಟ್ಟಿ.

    ಬೇರೆ ಬೇರೆ ಭಾಷೆಯಲ್ಲಿ ಭಾರೀ ಡಿಮ್ಯಾಂಡ್

    ಬೇರೆ ಬೇರೆ ಭಾಷೆಯಲ್ಲಿ ಭಾರೀ ಡಿಮ್ಯಾಂಡ್

    "ನಾವು ಕನ್ನಡದಲ್ಲಿಯೇ ಮೊದಲು ರಿಲೀಸ್ ಆಗಬೇಕು ಅಂತ ರಿಲೀಸ್ ಮಾಡಿದ್ವಿ. ಬೇರೆ ಭಾಷೆಗಳಲ್ಲಿ ತುಂಬಾನೇ ಡಿಮ್ಯಾಂಡ್ ಬರುತ್ತಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಬೇರೆ ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಿ, ಅಲ್ಲಿನ ಜನರಿಗೆ ಸಬ್ ಟೈಟಲ್ ನೋಡುವುದಕ್ಕಿಂತ ಆ ಭಾಷೆಯಲ್ಲೇ ನಮಗೆ ಇನ್ನೂ ಚೆನ್ನಾಗಿ ಅರ್ಧ ಆಗುತ್ತೆ ಎನ್ನುತ್ತಿದ್ದಾರೆ. ಬಹಳಷ್ಟು ಮಂದಿ ಡಿಸ್ಟ್ರಿಬ್ಯೂಟರ್‌ಗಳು ನಿರ್ಮಾಪಕರನ್ನು ಸಂಪರ್ಕ ಮಾಡಿದ್ದು, ಬೇರೆ ಭಾಷೆಯಲ್ಲಿ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ." ಎಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.

    ಎಲ್ಲರ ಬಾಯಲ್ಲೂ 'ಕಾಂತಾರ': ಮೂರು ದಿನ ಈ ಸಿನಿಮಾ ದೋಚಿದ್ದೆಷ್ಟು?ಎಲ್ಲರ ಬಾಯಲ್ಲೂ 'ಕಾಂತಾರ': ಮೂರು ದಿನ ಈ ಸಿನಿಮಾ ದೋಚಿದ್ದೆಷ್ಟು?

    ಇನ್ನು 2 ದಿನಗಳಲ್ಲಿ ಸಿಹಿ ಸುದ್ದಿ

    ಇನ್ನು 2 ದಿನಗಳಲ್ಲಿ ಸಿಹಿ ಸುದ್ದಿ

    'ಕಾಂತಾರ' ಸಿನಿಮಾಗೆ ಬೇರೆ ಬೇರೆ ಭಾಷೆಯಿಂದ ಬೇಡಿಕೆ ಬರುತ್ತಿದ್ದು, ಇನ್ನೆರಡು ದಿನಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಸಿಹಿ ಸುದ್ದಿಯನ್ನು ನೀಡಲಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಮಾಹಿತಿಯನ್ನು ನೀಡಲಿದೆ. "ಇನ್ನು ಎರಡು ದಿನಗಳಲ್ಲಿ ಅದು ಹೇಗೆ? ಯಾವಾಗ? ಅಂತ ನಮ್ಮ ಪ್ರೊಡಕ್ಷನ್ ಹೌಸ್ ಅನೌನ್ಸ್ ಮಾಡುತ್ತಾರೆ. ಇದು ಒಂದು ಸಂತೋಷದ ಸುದ್ದಿ. ಸದ್ಯಕ್ಕೆ ಅಷ್ಟು ಹೇಳಬಹುದು ನಾನು" ಎಂದು ಸುಳಿವು ನೀಡಿದ್ದಾರೆ.

    English summary
    Kantara Will Be Releasing Pan India: In Two Days Hombale Films Will Announce, Know More.
    Tuesday, October 4, 2022, 19:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X