'ಕಾಂತಾರ' ಸೃಷ್ಟಿಸಿರುವ ಈ ದಾಖಲೆಯನ್ನು ಬೇರೆ ಚಿತ್ರಗಳು ಮುರಿಯುವುದು ಕನಸು!

ರಿಷಬ್ ಶೆಟ್ಟಿ ನಿರ್ದೇಶನದ ಹಾಗೂ ನಟನೆಯ ಕಾಂತಾರ ಚಿತ್ರ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮೊದಲಿಗೆ ಏಕಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಕಾಂತಾರ ಅಭೂತಪೂರ್ವ ವಿಮರ್ಶೆಗಳನ್ನು ಪಡೆದುಕೊಂಡು ಈಗ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪರಿವರ್ತನೆಗೊಂಡಿದೆ. ಈಗಾಗಲೇ ಕಾಂತಾರ ನೂರು ಕೋಟಿ ಗಳಿಸಿ ಇನ್ನೂರು ಕೋಟಿ ಕ್ಲಬ್ ಸೇರುವತ್ತ ದಾಪುಗಾಲಿಟಿದೆ.

ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಕಾಂತಾರ ಚಿತ್ರ ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೊಂಡು ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿತು. ಈ ಪೈಕಿ ಕಾಂತಾರ ಅವತರಣಿಕೆ 25 ದಿನಗಳ ಸಮೀಪದಲ್ಲಿದ್ದು ಬುಕ್ ಮೈ ಶೋನಲ್ಲಿ ಒಂದು ವೋಟ್‌ಗಳನ್ನೂ ಸಹ ಪಡೆದುಕೊಂಡಿದೆ. ಇನ್ನು ಆರಂಭದಿಂದಲೂ ಬುಕ್ ಮೈ ಶೋನಲ್ಲಿ 9.9% ರೇಟಿಂಗ್ ಹೊಂದಿರುವ ಕಾಂತಾರ ಒಂದು ಲಕ್ಷ ವೋಟಿಂಗ್ ಅನ್ನು ದಾಟಿದ ನಂತರವೂ 9.9% ರೇಟಿಂಗ್ ಹೊಂದಿದೆ.

ಇನ್ನು 18 ಸಾವಿರ ವೋಟ್‌ಗಳಿಗೆ 9.9% ರೇಟಿಂಗ್ ಪಡೆದುಕೊಂಡಾಗಲೇ ಬುಕ್ ಮೈ ಶೋನಲ್ಲಿ ವಿಶ್ವ ದಾಖಲೆ ಬರೆದಿದ್ದ ಕಾಂತಾರ ಇನ್ನೂ ಸಹ ಅದೇ ರೇಟಿಂಗ್ ಹೊಂದಿದೆ. ಕಾಂತಾರ ಹೊಂದಿರುವ ಈ ರೇಟಿಂಗ್ ದಾಖಲೆಯನ್ನು ಮುಂಬರುವ ಯಾವ ಚಿತ್ರವೂ ಸಹ ಮುರಿಯುವುದಿಲ್ಲ ಎಂದು ಹೇಳಬಹುದು. ಏಕೆಂದರೆ ಕಾಂತಾರ ರೀತಿ ಲಕ್ಷ ವೋಟಿಂಗ್ ಪಡೆದುಕೊಂಡು 9.9% ರೇಟಿಂಗ್ ಹೊಂದುವುದು ಅಷ್ಟು ಸುಲಭದ ಮಾತಲ್ಲ.

Kantara sets a record by hitting 100k votes on bookmyshow with 9.9 rating

ಅಕ್ಟೋಬರ್ 23ರ ಭಾನುವಾರಕ್ಕೆ ಕಾಂತಾರ ವಿವಿಧ ಅವತರಣಿಕೆಗಳ ಬುಕ್ ಮೈ ಶೋ ವೋಟಿಂಗ್ ಹಾಗೂ ರೇಟಿಂಗ್ ಈ ಕೆಳಕಂಡಂತಿದೆ.

ಕಾಂತಾರ ( ಕನ್ನಡ ) : 106000 ವೋಟ್‌ಗಳು ಹಾಗೂ 9.9 ರೇಟಿಂಗ್

ಕಾಂತಾರ ( ತೆಲುಗು ) : 44000 ವೋಟ್‌ಗಳು ಹಾಗೂ 9.4 ರೇಟಿಂಗ್

ಕಾಂತಾರ ( ಹಿಂದಿ ) : 42000 ವೋಟ್‌ಗಳು ಹಾಗೂ 9.4 ರೇಟಿಂಗ್

ಕಾಂತಾರ ( ತಮಿಳು ) : 9000 ವೋಟ್‌ಗಳು ಹಾಗೂ 9.2 ರೇಟಿಂಗ್

ಕಾಂತಾರ ( ಮಲಯಾಳಂ ) : 1500 ವೋಟ್‌ಗಳು ಹಾಗೂ 9.5 ರೇಟಿಂಗ್

More from Filmibeat

English summary
Kantara sets a record by hitting 100k votes on bookmyshow with 9.9 rating . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X