Rishab Shetty: ತನ್ನೂರಿನ, ತಾನು ಓದಿದ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಶಾಲೆ ದತ್ತು ಪಡೆದ ನಟ ರಿಷಬ್‌ ಶೆಟ್ಟಿ

ನಟ ರಿಷಬ್ ಶೆಟ್ಟಿ ಈ ಹಿಂದೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಮಾಡಿ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದ್ದರು. ಇದಾದ ಬಳಿಕ ಸಿನಿಮಾಗಳ ಮೂಲಕ ಕನ್ನಡ ಪ್ರೇಮವನ್ನು ಹರಡುತ್ತಿದ್ದಾರೆ. ಇದರ ನಡುವೆ ಮತ್ತೊಂದು ಕೆಲಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರೂ ಕೂಡ ನಟ ರಿಷಬ್​ ಶೆಟ್ಟಿ ತಮ್ಮ ಮೂಲವನ್ನು ಮರೆಯಿಲ್ಲ. ಸಿನಿಮಾ ಮಾತ್ರವಲ್ಲದೇ 'ರಿಷಬ್ ಶೆಟ್ಟಿ ಫೌಂಡೇಶನ್' ಮೂಲಕ ಸಾಮಾಜಿಕ ಕೆಲಸಗಳನ್ನು ಮೂಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕನ್ನಡ ಶಾಲೆಗಳ ಉಳಿವಿಗಾಗಿ ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 Kantara Star Rishab Shetty Adopts Keradi Government School In His Native

ಶಾಲೆ ದತ್ತು ಪಡೆದ ರಿಷಬ್​ ಶೆಟ್ಟಿ

ಸದ್ಯ ಕಾಂತಾರ ಅಧ್ಯಾಯ ಒಂದು ಸಿನಿಮಾದಲ್ಲಿ ಬ್ಯುಸಿ ಆಗಿರುವ ನಟ ರಿಷಬ್ ಶೆಟ್ಟಿ, ತಮ್ಮ ಊರಿಗೆ ಭೇಟಿ ನೀಡಿದ್ದಾರೆ. ತಾವು ಓದಿದ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿದ್ದಾರೆ. 'ರಿಷಬ್ ಶೆಟ್ಟಿ ಫೌಂಡೇಶನ್' ಅಡಿಯಲ್ಲಿ ತಾವು ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ದಾರೆ.

ಶಾಲೆಗೆ ಭೇಟಿ ನೀಡಿದ್ದ ನಟ ರಿಷಬ್ ಶೆಟ್ಟಿ, ಅಧಿಕಾರಿಗಳು, ಊರಿನ ಪ್ರಮುಖರು , ಹಿರಿಯರು ಸೇರಿ ಊರಿನ ಜನರ ಜೊತೆಗೆ ಶಾಲೆಯನ್ನು ದತ್ತು ಪಡೆಯುವ ವಿಷಯ ತಿಳಿಸಿದ್ದಾರೆ. ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಜೊತೆ ರಿಷಬ್ ಶೆಟ್ಟಿ ಮಾತುಕತೆ ಮಾಡಿದ್ದಾರೆ. ಟನ ನಿರ್ಧಾರಕ್ಕೆ ಎಲ್ಲರೂ ಅಭಿನಂದಿಸಿದ್ದಾರೆ. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಶಾಲೆ ಭೇಟಿಯ ಫೋಟೋಗಳು ವೈರಲ್ ಆಗುತ್ತಿವೆ.

 Kantara Star Rishab Shetty Adopts Keradi Government School In His Native

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು

ರಿಷಬ್ ಶೆಟ್ಟಿ ನಟ, ನಿರ್ದೇಶಕ ಮತ್ತು ನಿರ್ಮಾಪಕನಾಗಿ ಸ್ಯಾಂಡಲ್‌ವುಡ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಮೂಲಕ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ಕಾಂತಾರ ಅಧ್ಯಾಯ 1ಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಈ ಹಿಂದೆ ನಟ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಎಂಬ ಸಿನಿಮಾ ಮಾಡಿ ಕನ್ನಡ ಶಾಲೆಗಳ ಬಗ್ಗೆ ಜಾಗೃತಿ ಮೂಡಿಸಿದ್ದರು. ಕನ್ನಡ ಶಾಲೆಗಳ ಉಳಿವಿನ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದರು.

More from Filmibeat

English summary
Rishab Shetty adopts keradi govt school in his native.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X