ರಾಷ್ಟ್ರಪ್ರಶಸ್ತಿ ಗೆದ್ದ ಚಿತ್ರಗಳು ಯಾವ್ಯಾವ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಣೆಗೆ ಲಭ್ಯವಿದೆ?

2022ರಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ. 'ಕಾಂತಾರ' ಚಿತ್ರದ ನಟನೆಗಾಗಿ ನಟ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡು ಹಿಗ್ಗಿದ್ದಾರೆ. ಇನ್ನು ಅತ್ಯುತ್ತಮ ಮನರಂಜನಾತ್ಮಕ ಪ್ರಶಸ್ತಿ ಕೂಡ 'ಕಾಂತಾರ' ಚಿತ್ರಕ್ಕೆ ಸಿಕ್ಕಿದೆ. 'KGF'-2 ಚಿತ್ರಕ್ಕೆ 2 ಪ್ರಶಸ್ತಿ ಲಭಿಸಿದೆ.

ತಮಿಳಿನ ಪೊನ್ನಿಯಿನ್ ಸೆಲ್ವನ್ ಸಿನಿಮಾ- 4 ವಿಭಾಗಳಲ್ಲಿ ಪ್ರಶಸ್ತಿ ಪಡೆದಿದೆ. ಅಚ್ಚರಿ ಎನ್ನುವಂತೆ ಬಾಲಿವುಡ್‌ನ 'ಬ್ರಹ್ಮಾಸ್ತ್ರ' ಹಾಗೂ ಮಲಯಾಳಂನ 'ಆಟ್ಟಂ' ಸಿನಿಮಾಗಳು ಕೂಡ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಎಲ್ಲರ ಗಮನ ಸೆಳೆದಿವೆ.

Kantara to aattam where to watch 70th National Film Awards winning movies

ಫೀಚರ್ ಫಿಲ್ಮ್ ವಿಭಾಗದಲ್ಲಿ 32 ಭಾಷೆಗಳ 309 ಚಿತ್ರಗಳು ಸ್ಪರ್ಧಿಸಿದ್ದವು. ಫೀಚರ್ ಸಿನಿಮಾ ಕ್ಯಾಟಗರಿಯಲ್ಲಿ ಒಟ್ಟು 27 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಹೀಗೆ ಪ್ರಶಸ್ತಿ ಪಡೆದ ಸಿನಿಮಾಗಳನ್ನು ಓಟಿಟಿಯಲ್ಲಿ ವೀಕ್ಷಿಸಬಹುದು. ಯಾವ ಸಿನಿಮಾ ಯಾವ ಪ್ಲಾಟ್‌ಫಾರ್ಮ್‌ನಲ್ಲಿ ಸಿಗುತ್ತದೆ ಬನ್ನಿ ನೋಡೋಣ.

ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಚಿತ್ರಕಥೆ ಹೀಗೆ 3 ಪ್ರಶಸ್ತಿಗಳನ್ನು ಮಲಯಾಳಂನ 'ಆಟ್ಟಂ' ಸಿನಿಮಾ ಪಡೆದಿದೆ. ಈ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಅತ್ಯುತ್ತಮ ಪ್ರಶಸ್ತಿ ನೀಡುವಂಥದ್ದು ಈ ಚಿತ್ರದಲ್ಲಿ ಏನಿದೆ ನೋಡಬೇಕು ಎಂದು ಕೆಲವರು ಈಗಾಗಲೇ ಹುಡುತ್ತಿದ್ದಾರೆ.

Kantara to aattam where to watch 70th National Film Awards winning movies

ಕನ್ನಡದ 'ಕಾಂತಾರ' ಸಿನಿಮಾ ಅಮೇಜಾನ್ ಪ್ರೈಂನಲ್ಲಿದೆ. ಬಹಳ ತಡವಾಗಿ ಈ ಸಿನಿಮಾ ಓಟಿಟಿಗೆ ಬಂದಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸಿ ದಾಖಲೆ ಬರೆದಿತ್ತು. ಇನ್ನು ಅತ್ಯುತ್ತಮ ಸಾಹಸ ಸಂಯೋಜನೆ ಹಾಗೂ ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗದಲ್ಲಿ 'ಕೆಜಿಎಫ್-2' ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಈ ಸಿನಿಮಾ ಕೂಡ ಪ್ರೈಂ ವೀಡಿಯೋದಲ್ಲಿದೆ.

ಇನ್ನು ತಮಿಳಿನ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ತಮಿಳು ಸಿನಿಮಾ, ಅತ್ಯುತ್ತಮ ಶಬ್ಧ ವಿನ್ಯಾಸ ಹಾಗೂ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮಣಿರತ್ನಂ ನಿರ್ದೇಶನದ ಈ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಈ ಚಿತ್ರ ಪ್ರೈಂ ವೀಡಿಯೋದಲ್ಲಿದೆ.

ಅತ್ಯುತ್ತಮ ಮೇಕಪ್ ಹಾಗೂ ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ಬೆಂಗಾಲಿಯ 'ಅಪರಾಜಿತೋ' ಸಿನಿಮಾ ಪ್ರಶಸ್ತಿ ಪಡೆಯಿತು. ಈ ಸಿನಿಮಾ ಜೀ-5ನಲ್ಲಿದೆ. ಇನ್ನು ವಿಷ್ಯುವಲ್ ಎಫೆಕ್ಟ್ಸ್, ಹಿನ್ನೆಲೆ ಗಾಯನ, ಸಂಗೀತಕ್ಕಾಗಿ 'ಬ್ರಹ್ಮಾಸ್ತ್ರ' ಸಿನಿಮಾ ಪ್ರಶಸ್ತಿಗೆ ಭಾಜನವಾಗಿದೆ. ಈ ಸಿನಿಮಾ ಹಾಟ್‌ಸ್ಟರ್‌ನಲ್ಲಿ ಸಿಗುತ್ತದೆ.

ಅದೇ ರೀತಿ ಅತ್ಯುತ್ತಮ ಪೋಷಕ ನಟಿ, ಅತ್ಯುತ್ತಮ ನಿರ್ದೇಶಕ ವಿಭಾಗಗಳಲ್ಲಿ 'ಉಂಚೈ' ಸಿನಿಮಾ ಗೆಲುವಿನ ನಗೆಬೀರಿದೆ. ಈ ಸಿನಿಮಾ ಜೀ-5ನಲ್ಲಿದೆ. ಅತ್ಯುತ್ತಮ ಹಿಂದಿ ಸಿನಿಮಾ, ಅತ್ಯುತ್ತಮ ಸಂಭಾಷಣೆ ಪ್ರಶಸ್ತಿ ಪಡೆದ 'ಗುಲ್‌ಮೊಹರ್' ಹಾಟ್‌ಸ್ಟರ್‌ನಲ್ಲಿದೆ.

ನಿತ್ಯಾ ಮೆನನ್ ಹಾಗೂ ಮರಾಠಿ ನಟಿ ಮಾನಸಿ ಪರೇಖ್ ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಹಂಚಿಕೊಂಡಿದ್ದಾರೆ. ನಿತ್ಯಾ ಮೆನನ್ ನಟನೆಯ 'ತಿರುಚಿತ್ರಾಂಬಲಂ' ಸಿನಿಮಾ ಸನ್‌ ನೆಕ್ಸ್ಟ್‌ನಲ್ಲಿದೆ. ಇನ್ನು ಮಾನಸಿ ನಟನೆಯ 'ಕಚ್ ಎಕ್ಸ್‌ಪ್ರೆಸ್' ಮೀ ಎನ್ನುವ ಓಟಿಟಿಯಲ್ಲಿ ಸಿಗುತ್ತದೆ.

More from Filmibeat

English summary
National Film Awards winning movies on OTT: Where to watch Kantara, kgf-2, aattam and more;
Read more about: rishab shetty award ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X