For Quick Alerts
  ALLOW NOTIFICATIONS  
  For Daily Alerts

  ಗುರುವಾರವೇ 'ಕಾಂತಾರ' 75 ಪ್ರೀಮಿಯರ್‌ ಶೋಗಳು ಫಿಕ್ಸ್: ರಮ್ಯಾ ಎಲ್ಲಿ, ಯಾವಾಗ ಸಿನಿಮಾ ನೋಡ್ತಾರೆ?

  |

  ಮೋಸ್ಟ್ ಎಕ್ಸ್‌ಪೆಕ್ಟೆಡ್ 'ಕಾಂತಾರ' ಸಿನಿಮಾ ಕಣ್ತುಂಬಿಕೊಳ್ಳೋಕೆ ಇನ್ನೊಂದೇ ದಿನ ಬಾಕಿ ಇರೋದು. ಶುಕ್ರವಾರ ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದೆ. ಆದರೆ ಅದಕ್ಕಿಂತ ಒಂದು ದಿನ ಮೊದಲೇ ದೇಶಾದ್ಯಂತ ಪ್ರೀಮಿಯರ್ ಶೋಗಳು ನಡೆಯಲಿದೆ. ನಟಿ ರಮ್ಯಾ ಕೂಡ ಒಂದು ದಿನ ಮೊದಲೇ ರಿಷಬ್ ಶೆಟ್ಟಿ ಸಾರಥ್ಯದ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲೀಗ ಪೇಯ್ಡ್ ಪ್ರೀಮಿಯರ್ ಶೋಗಳ ಟ್ರೆಂಡ್ ನಡೀತಿದೆ. 'ಗಾಳಿಪಟ-2', '777 ಚಾರ್ಲಿ', 'ಲಕ್ಕಿಮ್ಯಾನ್' ಸಿನಿಮಾಗಳ ಪ್ರೀಮಿಯರ್‌ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹೊಂಬಾಳೆ ಸಂಸ್ಥೆ ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ರಿಷಬ್ ಶೆಟ್ಟಿ ಕಟ್ಟಿಕೊಟ್ಟಿರುವ 'ಕಾಂತಾರ' ಪ್ರಪಂಚಕ್ಕೆ ಭೇಟಿ ಕೊಡಲು ಸಿನಿರಸಿಕರು ತುದಿಗಾಗಲಲ್ಲಿ ನಿಂತಿದ್ದಾರೆ.

  ಫ್ಯಾಮಿಲಿ ಸಮೇತ ಕಾಂತಾರ ನೋಡ್ಬೇಕು ಅನ್ಕೊಂಡ್ರೆ ಟಿಕೆಟ್ ದರ ಇಷ್ಟೊಂದಾ? ಹೆಚ್ಚು ದುಡ್ಡಿದ್ರೆ ನೋಡಿ ಎಂದ ಪ್ರೇಕ್ಷಕ!ಫ್ಯಾಮಿಲಿ ಸಮೇತ ಕಾಂತಾರ ನೋಡ್ಬೇಕು ಅನ್ಕೊಂಡ್ರೆ ಟಿಕೆಟ್ ದರ ಇಷ್ಟೊಂದಾ? ಹೆಚ್ಚು ದುಡ್ಡಿದ್ರೆ ನೋಡಿ ಎಂದ ಪ್ರೇಕ್ಷಕ!

  'ಕಾಂತಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿವುದರ ಜೊತೆಗೆ ರಿಷಬ್ ಶೆಟ್ಟಿ ಹೀರೊ ಆಗಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಸಾಥ್ ಕೊಟ್ಟಿದ್ದು ಕಿಶೋರ್, ಅಚ್ಯುತ್ ಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರದ ಮತ್ತೊಂದು ಹೈಲೆಟ್.

  ರಾಜ್ಯಾದ್ಯಂತ 50 ಪ್ರೀಮಿಯರ್‌ ಶೋಗಳು

  ರಾಜ್ಯಾದ್ಯಂತ 50 ಪ್ರೀಮಿಯರ್‌ ಶೋಗಳು

  ಮೊದಲೆಲ್ಲಾ ವಿದೇಶಗಳಲ್ಲಿ ಮಾತ್ರ ಪ್ರೀಮಿಯರ್ ಶೋಗಳನ್ನು ಆಯೋಜಿಸುತ್ತಿದ್ದರು. ರಾಜ್ಯದಲ್ಲಿ ದೊಡ್ಡ ಸಿನಿಮಾಗಳ ಪ್ರದರ್ಶನ ಕೆಲವೊಮ್ಮೆ ಮಧ್ಯರಾತ್ರಿಯಿಂದಲೇ ಶುರುವಾಗುತ್ತಿತ್ತು. ಆದರೆ ಈಗ ಒಂದು ದಿನ ಮೊದಲೇ ಪೇಯ್ಡ್ ಪ್ರೀಮಿಯರ್ ಶೋ ನಡೆಸುವ ಟ್ರೆಂಡ್ ಶುರುವಾಗಿದೆ. ಗುರುವಾರವೇ ರಾಜ್ಯಾದ್ಯಂತ 'ಕಾಂತಾರ' ಚಿತ್ರದ 50 ಪ್ರೀಮಿಯರ್ ಶೋಗಳು ಶೆಡ್ಯೂಲ್ ಆಗಿದೆ.

  'ಕಾಂತಾರ' ಚಿತ್ರದಲ್ಲಿ ಹಾಲಿವುಡ್ ನಟ ರಾಕ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ'ಕಾಂತಾರ' ಚಿತ್ರದಲ್ಲಿ ಹಾಲಿವುಡ್ ನಟ ರಾಕ್: ಸೀಕ್ರೆಟ್ ರಿವೀಲ್ ಮಾಡಿದ ರಿಷಬ್ ಶೆಟ್ಟಿ

  ಹೊರರಾಜ್ಯಗಳಲ್ಲೂ ಗುರುವಾರ ಚಿತ್ರ ತೆರೆಗೆ

  ಹೊರರಾಜ್ಯಗಳಲ್ಲೂ ಗುರುವಾರ ಚಿತ್ರ ತೆರೆಗೆ

  ಕರ್ನಾಟಕ ಮಾತ್ರವಲ್ಲದೇ ಚೆನ್ನೈ, ಮುಂಬೈ, ಹೈದರಾಬಾದ್ ಸೇರಿದಂತೆ ಹಲವೆಡೆ ಗುರುವಾರವೇ 25ಕ್ಕೂ ಪ್ರೀಮಿಯರ್‌ ಶೋಗಳು ಕನ್ಫರ್ಮ್‌ ಆಗಿದೆ. ಕನ್ನಡ ಸಿನಿಮಾ ಒಂದು ದಿನ ಮೊದಲೇ ಹೊರ ರಾಜ್ಯಗಳಲ್ಲಿ ಇಷ್ಟು ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಹೊರ ರಾಜ್ಯಗಳಲ್ಲೂ ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಟಿಕೆಟ್ ಬುಕ್ ಮಾಡಲು ಶುರುಮಾಡಿದ್ದಾರೆ.

  ಗುರುವಾರ ಸಿನಿಮಾ ನೋಡ್ತಾರೆ ರಮ್ಯಾ

  ಗುರುವಾರ ಸಿನಿಮಾ ನೋಡ್ತಾರೆ ರಮ್ಯಾ

  ನಟಿ ರಮ್ಯಾ ಕೂಡ 'ಕಾಂತಾರ' ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಗುರುವಾರ ಸಂಜೆ ಒರಾಯನ್ ಮಾಲ್‌ನಲ್ಲಿ ಸಂಜೆ 6.30ಕ್ಕೆ ಸಿನಿಮಾ ವೀಕ್ಷಿಸುವುದಾಗಿ ಟ್ವೀಟ್ ಮಾಡಿದ್ದಾರೆ. ರಮ್ಯಾ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸದೇ ಇದ್ದರೂ ಇತ್ತೀಚೆಗೆ ಸ್ಯಾಂಡಲ್‌ವುಡ್ ಮಂದಿ ಜೊತೆಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ಧಾರೆ. '777 ಚಾರ್ಲಿ' ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು.

  ಓವರ್‌ಸೀಸ್‌ನಲ್ಲೂ ಸಿನಿಮಾ ಗ್ರ್ಯಾಂಡ್ ರಿಲೀಸ್

  ಓವರ್‌ಸೀಸ್‌ನಲ್ಲೂ ಸಿನಿಮಾ ಗ್ರ್ಯಾಂಡ್ ರಿಲೀಸ್

  ಕಾಂತಾರ ಸಿನಿಮಾ ರಾಜ್ಯಾದ್ಯಂತ ಸುಮಾರು 250 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಯುರೋಪ್, ಯುಎಸ್, ಯುಕೆ, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ಧತೆ ನಡೆದಿದೆ. ಕರಾವಳಿಯ ಸಂಸ್ಕೃತಿ ಜೊತೆಗೆ ಕಾಡಿನ ಜೊತೆಗೆ ಬದುಕುವ ಜನರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ. ಕರಾವಳಿಯ ಕಂಬಳ ಕ್ರೀಡೆ, ಭೂತಕೋಲ, ಆಚಾರ, ವಿಚಾರಗಳನ್ನು ಕಣ್ಣಿಗೆ ಕಟ್ಟಿದಂತೆ ಹೇಳಲಾಗಿದೆ.

  English summary
  Kantara to have 75 premiere shows across India Before The Release. Actress Ramya Like to Watcha Kantara Movie One Day Before.
  Tuesday, September 27, 2022, 22:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X