Kantara Tragedy ; ಒಂದು ತಿಂಗಳಿನ ಅಂತರ, ಒಂದೇ ದಿನ, ಒಂದೇ ಕಾರಣ, ಇಬ್ಬರ ಸಾವು, ಮತ್ತೊಬ್ಬ ನೀರು ಪಾಲು..!

ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ, ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿಯ ಕನಸಿನ ಕೂಸು ಕಾಂತಾರ.
ಆದರೆ, ಅದ್ಯಾವ ಘಳಿಗೆಯಲ್ಲಿ ರಿಷಬ್ ಶೆಟ್ಟಿ ಕಾಂತಾರ ಶುರು ಮಾಡಿದರೋ ಗೊತ್ತಿಲ್ಲ. ಚಿತ್ರ ಆರಂಭವಾದ ದಿನದಿಂದ ಇಲ್ಲಿಯವರೆಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಲೇ ಇದೆ. ಸಾವು ನೋವು ಸಂಭವಿಸುತ್ತಾನೇ ಇದೆ.

ಹೌದು, ಕಳೆದ ತಿಂಗಳು ಮೇ 9ರಂದು ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂಎಫ್ ಕಪಿಲ್ ಅವರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ನಿಧನ ಹೊಂದಿದ್ದರು.

Kantara Tragedy Two Artists Dead from Heart Attacks Within a Month Crew Member Drowns

ಆ ನಂತರ ಸಹ ಕಲಾವಿದ ಚಿತ್ರೀಕರಣ ಸ್ಥಳದಲ್ಲಿ ಅಥವಾ ನಡೆಯುವ ವೇಳೆ ಸಾವನ್ನಪ್ಪಿದ್ದಲ್ಲ. ಈ ಘಟನೆಗೆ 'ಕಾಂತಾರ' ಚಿತ್ರ ಅಥವಾ ಸಿಬ್ಬಂದಿಯೊಂದಿಗೆ ಯಾವುದೇ ಸಂಬಂಧ ಕಲ್ಪಿಸಬಾರದು ಎಂದು ಹೊಂಬಾಳೆ ಸಂಸ್ಥೆ ಮನವಿಯನ್ನು ಮಾಡಿಕೊಂಡಿತ್ತು.

ಕಪಿಲ್ ಅಗಲಿ ಎರಡು ದಿನಗಳ ನಂತರ ಮೇ 12 ರಂದು ವೀಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಗಿಸುತ್ತಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಉಸಿರು ಚೆಲ್ಲಿದರು. ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

ಕಾಂತಾರದ ಪ್ರಿಕ್ವೆಲ್‌ನಲ್ಲಿ ತುಂಬಾ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದ ರಾಕೇಶ್ ಪೂಜಾರಿ ಮೇ 11ರಂದು 'ಕಾಂತಾರ ಚಾಪ್ಟರ್ 1'ರ ಶೂಟಿಂಗ್ ಮುಗಿಸಿದ ಬಳಿಕ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದಿದ್ದರು. ಈ ವೇಳೆ ಮೆಹೆಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುವಾಗ ಹಠಾತ್ ಆಗಿ ಕುಸಿದು ಬಿದ್ದಿದ್ದರು.

ಈ ವೇಳೆ ಅವರನ್ನು ಕಾರ್ಕಳದ ಗ್ರಾಜಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ರಾಕೇಶ್ ಪೂಜಾರಿ ನಿಧನರಾಗಿದ್ದರು.

ಈಗ ರಾಕೇಶ್ ಪೂಜಾರಿ ಅಗಲಿ ಸರಿಯಾಗಿ ಒಂದು ತಿಂಗಳ ನಂತರ ಚಿತ್ರದಲ್ಲಿ ನಟಿಸುತ್ತಿದ್ದ ಮತ್ತೊಬ್ಬ ಸಹ ಕಲಾವಿದ ಕೊನೆಯುಸಿರೆಳೆದಿದ್ದಾರೆ. ಕೇರಳದ ತ್ರಿಶೂರ್​ನ ವಿಜು ವಿಕೆ ಎಂಬುವವರು 'ಕಾಂತಾರ' ಸಿನಿಮಾ ಶೂಟ್​ಗಾಗಿ ಕರ್ನಾಟಕಕ್ಕೆ ಬಂದಿದ್ದರು.

ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ವಿಜು ವಿಕೆ ಉಳಿದುಕೊಂಡಿದ್ದರು. ಜೂನ್ 11ರಂದು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಕೇಶ್ ಪೂಜಾರಿ ಮತ್ತು ವಿಜು ವಿಕೆ ಒಂದೇ ತಿಂಗಳಿನ ಅಂತರದಲ್ಲಿ ಹೆಚ್ಚು ಕಡಿಮೆ ಒಂದೇ ದಿನ ಹೃದಯಾಘಾತಕ್ಕೆ ಬಲಿಯಾಗಿದ್ದು ಕಾಕತಾಳೀಯನಾ ಗೊತ್ತಿಲ್ಲ. ಆದರೆ ಈ ಕುರಿತು ಸದ್ಯ ಸಾರ್ವತ್ರಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಇನ್ನೂ ಇದಕ್ಕೂ ಮೊದಲು ಈ ವರ್ಷದ ಜನವರಿ ಮೊದಲ ವಾರದಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆರೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾಗಿದ್ದರು.ಇದೇ ಸಮಯದಲ್ಲಿ ಅರಣ್ಯ ಜಾಗದಲ್ಲಿ ಬೆಂಕಿ ಹಚ್ಚಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಎದುರಿಸಿದ್ದ ರಿಷಬ್ ಶೆಟ್ಟಿ ಮತ್ತು ತಂಡ ಆ ನಂತರ 50,000 ದಂಡ ಕಟ್ಟಿತ್ತು.

ಇನ್ನು ಕಳೆದ ವರ್ಷ ಈ ಚಿತ್ರದ ಚಿತ್ರೀಕರಣಕ್ಕೆ ಜೂನಿಯರ್ ಆರ್ಟಿಸ್ಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕೊಲ್ಲೂರಿನ ಹತ್ತಿರ ಮಿನಿ ಬಸ್ ಪಲ್ಟಿ ಹೊಡೆದಿತ್ತು. ಈ ಘಟನೆಯಲ್ಲಿ ಆರು ಮಂದಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಹೀಗೆ ಒಂದಿಲ್ಲೊಂದು ವಿಘ್ನಗಳನ್ನು ಎದುರಿಸುತ್ತಾನೇ ಬಂದ ಕಾಂತಾರ ಚಿತ್ರದ ಪ್ರಿಕ್ವೆಲ್‌ನಲ್ಲಿ ಕೆಲಸ ಮಾಡಿದ ಮೂವರು ಒಂದೇ ತಿಂಗಳಿನ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ಇದನ್ನು ನೋಡುತ್ತಿದ್ದರೆ ದೈವ ನೀಡಿದ್ದ ಎಚ್ಚರಿಕೆ ನಿಜವಾಗುತ್ತಿದೆಯಾ ಎನ್ನುವ ಪ್ರಶ್ನೆ ಕೂಡ ಈಗ ಅನೇಕರನ್ನು ಕಾಡುತ್ತಿದೆ.

More from Filmibeat

English summary
Unexplained tragedies hit the Kantara: Chapter 1 team. Two artists die from heart attacks within a month, adding to the loss of a crew member who drowned. Is it a cursed production?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X