For Quick Alerts
  ALLOW NOTIFICATIONS  
  For Daily Alerts

  ಬಗೆ ಬಗೆ ವೇಷ.. ಆವೇಶ: 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ ರೌದ್ರಾವತಾರ!

  |

  'ಕಾಂತಾರ' ಸಿನಿಮಾ ಟ್ರೈಲರ್‌ ನೋಡಿದವರೆಲ್ಲಾ ಸಿನಿಮಾ ಸೂಪರ್ ಹಿಟ್ ಗ್ಯಾರೆಂಟಿ ಎನ್ನುವ ಸರ್ಟಿಫಿಕೇಟ್ ಕೊಟ್ಟುಬಿಟ್ಟಿದ್ದಾರೆ. ನಿಜಕ್ಕೂ ಸಿನಿಮಾ ಮೇಕಿಂಗ್, ಬಿಜಿಎಂ, ರಿಷಬ್ ಶೆಟ್ಟಿ ಪರ್ಫಾರ್ಮೆನ್ಸ್ ನೆಕ್ಸ್ಟ್ ಲೆವೆಲ್‌ನಲ್ಲಿದೆ. ಈ ಚಿತ್ರದಲ್ಲಿ ನಿಜಕ್ಕೂ ನೀವು ಹೊಸ ರಿಷಬ್ ಶೆಟ್ಟಿಯನ್ನು ನೋಡಬಹುದು ಅನ್ನುವ ಸುಳಿವು ಸಿಕ್ಕಿದೆ.

  ಫನ್ ಎಂಟರ್‌ಟೈನರ್‌ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದವರು ರಿಷಬ್ ಶೆಟ್ಟಿ. ಕೆಲವರು ರಿಷಬ್ ಮತ್ತೊಬ್ಬ ಜಗ್ಗೇಶ್ ಎನ್ನುಲು ಶುರು ಮಾಡಿದ್ದರು. ಅಂದರೆ ಕಾಮಿಡಿ ಹೀರೋ ಆಗಿಯೇ ಅವರು ಚಿತ್ರರಂಗದಲ್ಲಿ ಉಳಿದುಕೊಳ್ಳುತ್ತಾರೆ, ಅಂತಹ ಪಾತ್ರಗಳೇ ಅವರಿಗೆ ಸೂಕ್ತ ಅನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದರು. ಆದರೆ 'ಕಾಂತಾರ' ಸಿನಿಮಾ ಟ್ರೈಲರ್‌ ನೋಡಿದರೆ ನಿಮಗೆ ಆ ರೀತಿ ಅನ್ನಿಸೋಕೆ ಸಾಧ್ಯವೇ ಇಲ್ಲ. ಈ ಚಿತ್ರದಲ್ಲೂ ಫನ್ ಇದೆ. ಆದರೆ ಆಂಗ್ರಿ ಯಂಗ್‌ಮ್ಯಾನ್‌ ಆಗಿ ಇಂಟೆನ್ಸ್ ಅಭಿನಯದಿಂದ 'ಕಾಂತಾರ'ವನ್ನು ರಿಷಬ್ ಹೆಚ್ಚು ಆವರಿಸಿಕೊಂಡಂತೆ ಕಾಣುತ್ತಿದೆ.

  'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?'ಲಕ್ಕಿಮ್ಯಾನ್' ಅಡ್ವಾನ್ಸ್ ಬುಕ್ಕಿಂಗ್ ಚಿಂದಿ: ಶುಕ್ರವಾರ ಎಲ್ಲೆಲ್ಲಿ ಫ್ಯಾನ್ಸ್ ಸೆಲೆಬ್ರೇಷನ್ ಹೇಗಿರುತ್ತೆ ಗೊತ್ತಾ?

  ಸ್ವತಃ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಸಿನಿಮಾ ಇದು. ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಕಂಟೆಂಟ್ ಇರುವ ಸಿನಿಮಾಗಳನ್ನು ಕಟ್ಟಿಕೊಡುತ್ತಾ ಬಂದವರು ರಿಷಬ್. ಆದರೆ ಈ ಬಾರಿ ಅವರ ಬೆನ್ನಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿಂತಿರುವುದರಿಂದ ಸಿನಿಮಾ ಕ್ಯಾನ್ವಾಸ್‌ ದೊಡ್ಡದಾಗಿದೆ. ಯಾವುದಕ್ಕೂ ರಾಜಿಯಾಗದೇ ಬಹಳ ಅದ್ಭುತವಾಗಿ ಅಷ್ಟೇ ರೋಚಕವಾಗಿ ಕಥೆ ಹೇಳುವ ಪ್ರಯತ್ನ ನಡೆದಿದೆ. ಇನ್ನು ಪ್ರತಿಭಾನ್ವಿತ ತಂತ್ರಜ್ಞರ ತಂಡ ಹೆಗಲು ಕೊಟ್ಟಿದೆ.

  ಕರಾವಳಿಯ ದೃಶ್ಯಕಾವ್ಯ

  ಕರಾವಳಿಯ ದೃಶ್ಯಕಾವ್ಯ

  ಕರಾವಳಿ ಮಣ್ಣಿನ ಸೊಗಡು ಪ್ರತಿಫ್ರೇಮ್‌ನಲ್ಲೂ ರಾಚುತ್ತಿದೆ. ದಟ್ಟ ಕಾಡು, ಭೂತಕೋಲ, ಕಂಬಳ ಕ್ರೀಡೆ ಸೇರಿದಂತೆ ಅಲ್ಲಿನ ಸಂಪ್ರದಾಯಗಳು, ಆಚಾರ ವಿಚಾರಗಳನ್ನು 'ಕಾಂತಾರ' ಚಿತ್ರದಲ್ಲಿ ಹಾಸು ಹೊಕ್ಕಾಗಿದೆ. ಕರಾವಳಿ ಮೂಲದ ರಿಷಬ್ ಶೆಟ್ಟಿ ತಮ್ಮ ಮಣ್ಣಿನ ಕಥೆಯನ್ನು ಬಹಳ ಅದ್ಭುತವಾಗಿ ಹೇಳಲು ಹೊರಟಿದ್ದಾರೆ. ಕಿಶೋರ್, ಅಚ್ಯುತ್‌ಕುಮಾರ್‌ರಂತಹ ಮಾಗಿದ ಕಲಾವಿದರು ಚಿತ್ರದಲ್ಲಿದ್ದಾರೆ. ಟ್ರೈಲರ್‌ನಲ್ಲಿ ಸಿನಿಮಾ ಟೈಟಲ್ ಬರುವ ರೀತಿಯೇ ಸಖತ್ ಮಜವಾಗಿದೆ.

  ಇನ್ಮುಂದೆ 6 ತಿಂಗಳಿಗೊಂದು ಸುದೀಪ್ ಸಿನಿಮಾ ರಿಲೀಸ್ ಆಗೋದು ಫಿಕ್ಸ್!ಇನ್ಮುಂದೆ 6 ತಿಂಗಳಿಗೊಂದು ಸುದೀಪ್ ಸಿನಿಮಾ ರಿಲೀಸ್ ಆಗೋದು ಫಿಕ್ಸ್!

  ರಿಷಬ್‌ - ಕಿಶೋರ್ ಮುಖಾಮುಖಿ

  ರಿಷಬ್‌ - ಕಿಶೋರ್ ಮುಖಾಮುಖಿ

  ಕಾಡನ್ನು ನಂಬಿ ಬದುಕುವ ಜನ ಹಾಗೂ ಅರಣ್ಯ ಇಲಾಖೆಯ ನಡುವಿನ ಸಂಘರ್ಷವೇ ಚಿತ್ರದ ಕೇಂದ್ರಬಿಂದು. ಫಾರೆಸ್ಟ್ ಆಫೀಸರ್‌ ರೋಲ್‌ನಲ್ಲಿ ಕಿಶೋರ್ ಬಣ್ಣ ಹಚ್ಚಿದ್ದಾರೆ. ಕಿಶೋರ್ ಪ್ರಕೃತಿಯ ರಕ್ಷಣೆಗೆ ಹೊರಟರೆ ರಿಷಬ್ ಅಲ್ಲಿನ ಜನರ ಬದುಕನ್ನು ಉಳಿಸಲು ಮುಂದಾಗುವುದನ್ನು ಟ್ರೈಲರ್‌ನಲ್ಲಿ ನೋಡಬಹುದು. ಇನ್ನು ಫಾರೆಸ್ಟ್ ಆಫೀಸರ್ ಅಹಂಗೆ ಪೆಟ್ಟು ಕೊಟ್ಟ ನಾಯಕನ ಕಥೆ ಏನಾಗುತ್ತದೆ. 'ಧೈರ್ಯ ಬರುವುದು ನಿನ್ನೊಳಗಿನ ಕಿಚ್ಚಿನಿಂದ. ಆದರೆ ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿ' ಎನ್ನುವ ಸಾಲು ಮತ್ತಷ್ಟು ಕುತೂಹಲ ಕೆರಳಿಸಿದೆ.

  ವಿಭಿನ್ನ ಅವತಾರಗಳಲ್ಲಿ ರಿಷಬ್ ಶೆಟ್ಟಿ

  ವಿಭಿನ್ನ ಅವತಾರಗಳಲ್ಲಿ ರಿಷಬ್ ಶೆಟ್ಟಿ

  ಗಡ್ಡ ಮೀಸೆ ಬಿಟ್ಟು ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಪಕ್ಕಾ ಕರಾವಳಿಯ ಹೈದನಾಗಿ ರಿಷಬ್ ಶೆಟ್ಟಿ ಮಿಂಚಿದ್ದಾರೆ. ಅರಣ್ಯ ಉತ್ಪನ್ನಗಳ ಸಾಗಾಣಿಕೆ, ಶಿಕಾರಿ, ಕಂಬಳ ಕ್ರೀಡೆ, ಭೂತಕೋಲದ ಸುತ್ತಾ 'ಕಾಂತಾರ' ಕಥೆ ಸುತ್ತುತ್ತದೆ. ಬೇರೆ ಬೇರೆ ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ರಿಷಬ್ ಭೂತ ಕೋಲ ಆಚರಣೆಯ ದೈವದ ವೇಷವನ್ನು ಹಾಕಿ ಹುಬ್ಬೇರಿಸಿದ್ದಾರೆ. ಜಬರ್‌ದಸ್ತ್ ಆಕ್ಷನ್ ಸೀಕ್ವೆನ್ಸ್‌ನಲ್ಲೂ ಅಬ್ಬರಿಸಿದ್ದಾರೆ. ಕಾಮಿಡಿ ಹೀರೊ ಇಮೇಜ್ ಬಿಟ್ಟು ಮಾಸ್ ಹೀರೊ ಆಗಿ ರಿಷಬ್ ದರ್ಬಾರ್ ನಡೆಸೋಕೆ ಬರ್ತಿದ್ದಾರೆ. ಕಂಬಳ ಓಟ ಕಲಿತು ಓಟದ ಸ್ಪರ್ಧೆ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಧೂಳೆಬ್ಬಿಸಿದ 'ಕಾಂತಾರ' ಟ್ರೈಲರ್

  ಧೂಳೆಬ್ಬಿಸಿದ 'ಕಾಂತಾರ' ಟ್ರೈಲರ್

  'ಕಾಂತಾರ' ಟ್ರೈಲರ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಟ್ರೈಲರ್ ನೋಡಿದವರೆಲ್ಲಾ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಿ ಎನ್ನುತ್ತಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಚಿತ್ರದ ಗತ್ತು ಬದಲಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ 3 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ಟ್ರೈಲರ್ ಸೂಪರ್ ಹಿಟ್ ಆಗಿದೆ.

  ನಾಡಹಬ್ಬದ ಸಂಭ್ರಮ ಹೆಚ್ಚಿಸಲಿರುವ ಚಿತ್ರ

  ನಾಡಹಬ್ಬದ ಸಂಭ್ರಮ ಹೆಚ್ಚಿಸಲಿರುವ ಚಿತ್ರ

  ದಸರಾ ಹಬ್ಬದ ಸಂಭ್ರಮದಲ್ಲಿ ಸೆಪ್ಟೆಂಬರ್ 30ಕ್ಕೆ 'ಕಾಂತಾರ' ಸಿನಿಮಾ ಬಹಳ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ತಿಂಗಳಿಗೂ ಮೊದಲೇ ಟ್ರೈಲರ್ ರಿಲೀಸ್ ಮಾಡಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಪ್ರಮೋಷನ್‌ಗೆ ಚಾಲನೆ ಕೊಟ್ಟಿದೆ. ಈಗಾಗಲೇ ಒಂದು ವಿಡಿಯೋ ಸಾಂಗ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಉಳಿದ ಸಾಂಗ್ಸ್ ಜೊತೆಗೆ ಮೇಕಿಂಗ್ ವಿಡಿಯೋ ಶೇರ್ ಮಾಡಿ ಹೈಪ್ ಕ್ರಿಯೇಟ್ ಮಾಡಲು ರಿಷಬ್ ಶೆಟ್ಟಿ ಸಿದ್ಧತೆ ನಡೆಸಿದ್ದಾರೆ.

  English summary
  Kantara Trailer is Out Rishab Shetty Impresses In His Mass Hero Avatar. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X