For Quick Alerts
  ALLOW NOTIFICATIONS  
  For Daily Alerts

  KGF Vs 'ಕಾಂತಾರ'.. ತಮಿಳು ಪ್ರೇಕ್ಷಕರು ಏನಂದ್ರು? ಹೊರರಾಜ್ಯಗಳಲ್ಲಿ 'ಕಾಂತಾರ' ಕ್ರೇಜ್ ಹೇಗಿದೆ?

  |

  ವಿಶ್ವದಾದ್ಯಂತ ರಿಷಬ್ ಶೆಟ್ಟಿ 'ಕಾಂತಾರ' ಕಿಚ್ಚು ಹೊತ್ತಿಕೊಂಡಿದೆ. ಸಿನಿಮಾ ನೋಡಿದವರು ಮತ್ತೆ ಮತ್ತೆ ನೋಡುತ್ತಿದ್ದಾರೆ. ಎಲ್ಲರಿಗೂ ನೋಡುವಂತೆ ಹೇಳುತ್ತಿದ್ದಾರೆ. ಅದರಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಹೊರ ರಾಜ್ಯಗಳಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದು, ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲೂ 'ಕಾಂತಾರ' ಕ್ರೇಜ್ ಜೋರಾಗಿದೆ.

  ಒಂದ್ಕಾಲದಲ್ಲಿ ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ಸದ್ದು ಮಾಡುತ್ತಿದ್ದವು. ಆದರೆ ಈಗ ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲೂ ಪ್ರೇಕ್ಷಕರನ್ನು ಸೆಳೀತಿವೆ. KGF ಸೀರಿಸ್ ಸಿನಿಮಾಗಳ ನಂತರ '777 ಚಾರ್ಲಿ', 'ವಿಕ್ರಾಂತ್ ರೋಣ', ಈಗ 'ಕಾಂತಾರ' ಅದೇ ಹಾದಿಯಲ್ಲಿದೆ. ತಮಿಳು, ತೆಲುಗು ಪ್ರೇಕ್ಷಕರು ರಿಷಬ್ ಶೆಟ್ಟಿ ಅಂಡ್ ಟೀಮ್ ಪ್ರಯತ್ನಕ್ಕೆ ಬಹುಪರಾಕ್ ಹೇಳ್ತಿದ್ದಾರೆ. ಬೇರೆ ಭಾಷೆಗಳಿಗೆ ಡಬ್ ಆಗದೇ ಇದ್ದರೂ ಕನ್ನಡದಲ್ಲೇ ಎಲ್ಲರೂ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ.

  ದೈವ ಕೂಗುವುದನ್ನು ಅನುಕರಣೆ ಮಾಡಬೇಡಿ, ನಂಬಿಕೆಗೆ ಬೆಲೆ ಕೊಡಿ: ರಿಷಬ್ ಶೆಟ್ಟಿ ಮನವಿದೈವ ಕೂಗುವುದನ್ನು ಅನುಕರಣೆ ಮಾಡಬೇಡಿ, ನಂಬಿಕೆಗೆ ಬೆಲೆ ಕೊಡಿ: ರಿಷಬ್ ಶೆಟ್ಟಿ ಮನವಿ

  ಸದ್ಯದ ಮಟ್ಟಿಗೆ ಪರಭಾಷಿಕರಿಗೆ ಸ್ಯಾಂಡಲ್‌ವುಡ್ ಅಂದಾಕ್ಷಣ ನೆನಪಾಗುವುದು KGF ಸರಣಿ ಸಿನಿಮಾಗಳು. ಇದೀಗ KGF ಹಾಗೂ 'ಕಾಂತಾರ' ಸಿನಿಮಾಗಳನ್ನು ಹೋಲಿಕೆ ಮಾಡಿ ಕೆಲವರು ಮಾತನಾಡುತ್ತಿದ್ದಾರೆ. ಕೆಲವರು ಟ್ರೈಲರ್ ಮಾತ್ರ ನೋಡಿ 'ಕಾಂತಾರ' ಸಿನಿಮಾ ನೋಡಲು ಬರ್ತಿದ್ದಾರೆ.

  KGF Vs 'ಕಾಂತಾರ'

  KGF Vs 'ಕಾಂತಾರ'

  ಪ್ರಶಾಂತ್ ನೀಲ್ ನಿರ್ದೇಶನದ KGF ಸಿನಿಮಾ ಸೃಷ್ಟಿಸಿದ ಸಂಚಲನ ಹೇಗಿತ್ತು ಎನ್ನುವುದನ್ನು ಬಿಡಿಸಿ ಹೇಳುವುದು ಬೇಕಾಗಿಲ್ಲ. ರಾಕಿಂಗ್ ಸ್ಟಾರ್ ಯಶ್ ರಾಕಿಭಾಯ್ ಆಗಿ ನ್ಯಾಷನಲ್‌ ಸ್ಟಾರ್ ಪಟ್ಟಕ್ಕೇರಿದ್ದು ಗೊತ್ತೇಯಿದೆ. ಹೊರರಾಜ್ಯಗಳಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. KGF Vs 'ಕಾಂತಾರ' ಎನ್ನುವ ಪ್ರಶ್ನೆಗೆ KGF ಕ್ಲಾಸ್, 'ಕಾಂತಾರ' ಕ್ಲಾಸ್ ಜೊತೆಗೆ ಮಾಸ್ ಎನ್ನುವ ಉತ್ತರ ಬರ್ತಿದೆ. 'ಕಾಂತಾರ' ಚಿತ್ರದ ಕಂಟೆಂಟ್ ಹಾಗೂ ಕನ್ನಡ ಕಲ್ಚರ್‌ನ ತೋರಿಸಿರುವ ಪರಿ ಚೆನ್ನಾಗಿದೆ, ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಸೂಪರ್ ಎಂದು ಕೊಂಡಾಡುತ್ತಿದ್ದಾರೆ.

  2 ದಿನಗಳಲ್ಲಿ 'ಕಾಂತಾರ' ತಂಡದಿಂದ ಮತ್ತೊಂದು ಸಿಹಿ ಸುದ್ದಿ: ಪ್ಯಾನ್ ಇಂಡಿಯಾ ರಿಲೀಸ್‌ಗೆ ಸ್ಕೆಚ್!2 ದಿನಗಳಲ್ಲಿ 'ಕಾಂತಾರ' ತಂಡದಿಂದ ಮತ್ತೊಂದು ಸಿಹಿ ಸುದ್ದಿ: ಪ್ಯಾನ್ ಇಂಡಿಯಾ ರಿಲೀಸ್‌ಗೆ ಸ್ಕೆಚ್!

  ಟ್ರೈಲರ್ ನೋಡಿ ಸಿನಿಮಾ ನೋಡಲು ಬಂದೆ!

  ಟ್ರೈಲರ್ ನೋಡಿ ಸಿನಿಮಾ ನೋಡಲು ಬಂದೆ!

  ಸೆಪ್ಟೆಂಬರ್ 5ಕ್ಕೆ ರಿಲೀಸ್ ಆಗಿದ್ದ 'ಕಾಂತಾರ' ಟ್ರೈಲರ್ ಧೂಳೆಬ್ಬಿಸಿತ್ತು. ಎರಡೂವರೆ ನಿಮಿಷದ ಸ್ಯಾಂಪಲ್ ನೋಡಿದವರು ಥ್ರಿಲ್ಲಾಗಿದ್ದರು. ಪರಭಾಷಿಕರು ಕೂಡ ಟ್ರೈಲರ್‌ಗೆ ಮೆಚ್ಚುಗೆ ಸೂಚಿಸಿದರು. ಬರೀ ಟ್ರೈಲರ್ ನೋಡಿ 'ಕಾಂತಾರ' ಸಿನಿಮಾ ನೋಡಲು ಥಿಯೇಟರ್‌ಗೆ ಬಂದಿದ್ದಾಗಿ ಕೆಲ ತಮಿಳು ಪ್ರೇಕ್ಷಕರು ಹೇಳುತ್ತಿದ್ದಾರೆ. ಒಂದು ಚಿತ್ರದ ನಿಜವಾದ ಸಕ್ಸಸ್ ಇದೇ ಅಲ್ಲವೇ.

  ಹೊರರಾಜ್ಯಗಳಲ್ಲೂ ಹೆಚ್ಚಾಯ್ತು ಶೋಗಳು

  ಹೊರರಾಜ್ಯಗಳಲ್ಲೂ ಹೆಚ್ಚಾಯ್ತು ಶೋಗಳು

  ಡಿಮ್ಯಾಂಡ್ ನೋಡಿ ಎರಡನೇ ದಿನಕ್ಕೆ 'ಕಾಂತಾರ' ಚಿತ್ರದ 100 ಶೋಗಳನ್ನು ಹೆಚ್ಚಿಸಲಾಗಿತ್ತು. ಬರೀ ಕರ್ನಾಟಕ ಅಲ್ಲ, ಹೊರ ರಾಜ್ಯಗಳಲ್ಲೂ ಶೋಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಶೋ ಹೆಚ್ಚಿಸಲು ಬೇಡಿಕೆ ಶುರುವಾಗಿದೆ. ಹೈದರಾಬಾದ್‌ನಲ್ಲಿ ರಿಲೀಸ್‌ ಆದ ದಿನ ಒಂದು ಶೋ ಇದ್ದ ಕಡೆ ಈಗ 4 ಶೋಗಳು ಪ್ರದರ್ಶನವಾಗುತ್ತಿದೆ. ಮತ್ತೊಂದ್ಕಡೆ ಪರಭಾಷಾ ವಿತರಕರು ಸಿನಿಮಾ ಡಬ್ ಮಾಡಿ ಕೊಡುವಂತೆ ಕೇಳುತ್ತಿರುವುದಾಗಿ ಸ್ವತಃ ರಿಷಬ್ ಶೆಟ್ಟಿ ಹೇಳಿದ್ದಾರೆ. ಈ ಬಗ್ಗೆ ಚಿತ್ರತಂಡ ಚಿಂತನೆ ನಡೆಸ್ತಿದೆ.

  25 ಕೋಟಿ ಗಡಿ ದಾಟಿದ ಕಲೆಕ್ಷನ್

  25 ಕೋಟಿ ಗಡಿ ದಾಟಿದ ಕಲೆಕ್ಷನ್

  ಸತತ 5 ದಿನಗಳಿಂದ 'ಕಾಂತಾರ' ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಶನಿವಾರಕ್ಕೆ ಹೋಲಿಸಿದರೆ ಸೋಮವಾರ, ಮಂಗಳವಾರ ಕಲೆಕ್ಷನ್ ಹೆಚ್ಚಾಗಿದೆ. ಅಂದಾಜು 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಈಗ 25 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರತಂಡ ಮಂಗಳೂರಿಗೆ ಭೇಟಿ ಕೊಟ್ಟು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ. ಈ ವರ್ಷದ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಆಗಿ 'ಕಾಂತಾರ' ಹೊರಹೊಮ್ಮಿದೆ.

  English summary
  Kantara Vs Kgf tamil audience Honest Review. Kantara is getting ready in Telugu, Tamil, Hindi and Malyalam language, will be released very soon.
  Wednesday, October 5, 2022, 8:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X