twitter
    For Quick Alerts
    ALLOW NOTIFICATIONS  
    For Daily Alerts

    'ಕಾಂತಾರ' ತುಳು ವರ್ಷನ್ ಕಂಪ್ಲೀಟ್ ಕರ್ನಾಟಕ ಥಿಯೇಟರ್ ಲಿಸ್ಟ್

    |

    60 ದಿನ ಕಳೆದರೂ 'ಕಾಂತಾರ' ಕ್ರೇಜ್ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸದ್ಯ ತುಳು ಭಾಷೆಗೆ ಸಿನಿಮಾ ಡಬ್ ಆಗಿ ರಿಲೀಸ್ ಆಗ್ತಿದೆ. ಈಗಾಗಲೇ ತುಳು ಟ್ರೇಲರ್ ಸಹ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ವಿಶ್ವದಾದ್ಯಂತ ಇರುವ ತುಳುನಾಡಿನ ಪ್ರೇಕ್ಷಕರಿಗೆ ಅವರದ್ದೇ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಸಿಗುತ್ತದೆ.

    ದಸರಾ ಸಂಭ್ರಮದಲ್ಲಿ ಸೆಪ್ಟೆಂಬರ್ 30ಕ್ಕೆ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ 'ಕಾಂತಾರ' ಸಿನಿಮಾ ಮುಂದೆ ಬೇರೆ ಭಾಷೆಗಳಿಗೆ ಡಬ್ ಆಗಿತ್ತು. ತುಳುನಾಡಿನ ಜನ ತಮ್ಮ ಭಾಷೆಯಲ್ಲೇ ಚಿತ್ರವನ್ನು ನೋಡುವ ಅಪೇಕ್ಷೆ ಪಟ್ಟಿದ್ದರು. ಹಾಗಾಗಿ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಚಿತ್ರವನ್ನು ತುಳು ಭಾಷೆಗೆ ಡಬ್ ಮಾಡಿ ಈ ವಾರ ತೆರೆಗೆ ತರುತ್ತಿದ್ದಾರೆ. ಜೊತೆಗೆ ಕನ್ನಡ ವರ್ಷನ್ ಸ್ಕ್ರೀನ್‌ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕಾಡು ಹಾಗೂ ಆ ಕಾಡನ್ನು ನಂವಿ ಬದುಕುವ ಜನರ ಕಥೆಯನ್ನು ಚಿತ್ರದಲ್ಲಿ ಹೇಳಿ ರಿಷಬ್ ಶೆಟ್ಟಿ ಗೆದ್ದಿದ್ದಾರೆ.

    ಇದಪ್ಪಾ ಕಾಡುಬೆಟ್ಟು ಶಿವನ ಕ್ರೇಜ್ ಅಂದ್ರೆ: ನೇರವಾಗಿ ಹಾಲಿವುಡ್‌ಗೆ 'ಕಾಂತಾರ'?ಇದಪ್ಪಾ ಕಾಡುಬೆಟ್ಟು ಶಿವನ ಕ್ರೇಜ್ ಅಂದ್ರೆ: ನೇರವಾಗಿ ಹಾಲಿವುಡ್‌ಗೆ 'ಕಾಂತಾರ'?

    ತುಳುನಾಡಿನ ಸಂಸ್ಕೃತಿ, ಆಚರಣೆಗಳನ್ನು ಸೇರಿಸಿ 'ಕಾಂತಾರ' ಕಥೆಯನ್ನು ಕಟ್ಟಿಕೊಡಲಾಗಿದೆ. ರಿಷಬ್ ಶೆಟ್ಟಿ ಜೊತೆಗೆ ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೊಗಸಾಗಿ ನಟಿಸಿ ಗೆದ್ದಿದ್ದಾರೆ. ಭೂತಕೋಲದ ಆಚರಣೆ ಬಗ್ಗೆ ವಿಶ್ವದಾದ್ಯಂತ ಇರುವ ಜನರಿಗೆ ಈ ಸಿನಿಮಾ ಮೂಲಕ ಗೊತ್ತಾಗುವಂತಾಗಿದೆ.

    ಇಲ್ಲಿದೆ ತುಳು ವರ್ಷನ್ ಥಿಯೇಟರ್ ಲಿಸ್ಟ್

    ಇಲ್ಲಿದೆ ತುಳು ವರ್ಷನ್ ಥಿಯೇಟರ್ ಲಿಸ್ಟ್

    ಮಂಗಳೂರಿನ ಎಸ್‌ಪಿ ಸಿನಿಮಾಸ್, ಉಡುಪಿಯ ಕಲ್ಪನಾ, ಕಾರ್ಕಳದ ಪ್ಲಾನೆಟ್, ಸಕಲೇಶಪುರದ ಜೈ ಮಾರುತಿ, ಕುಂದಾಪುರ‌ದ ಬಿಗ್ ಸಿನಿಮಾಸ್, ಸೂರತ್ಕಲ್‌ನ ಚಿನಿ ಗ್ಯಾಲೆಕ್ಸಿ ಸೇರಿದಂತೆ ಕರಾವಳಿಯ ಹಲವೆಡೆ 'ಕಾಂತಾರ' ತುಳು ವರ್ಷನ್ ತೆರೆಗೆ ಬರ್ತಿದೆ. ಇನ್ನು ಬೆಂಗಳೂರಿನ ಒರಿಯನ್ ಮಾಲ್, ಪಿವಿಆರ್ ವೇಗಾ ಸಿಟಿ ಮಾಲ್, ಗೋಪಾಲನ್ ಆರ್ಕೇಡ್ ಸೇರಿದಂತೆ ಒಟ್ಟು 50 ಸ್ಕ್ರೀನ್‌ಗಳಲ್ಲಿ 'ಕಾಂತಾರ' ತುಳು ಸಿನಿಮಾ ರಿಲೀಸ್ ಆಗಲಿದೆ.

    6 ಭಾಷೆಗೆ ಡಬ್ ಆಗಿ 'ಕಾಂತಾರ' ದಾಖಲೆ

    6 ಭಾಷೆಗೆ ಡಬ್ ಆಗಿ 'ಕಾಂತಾರ' ದಾಖಲೆ

    ಇಷ್ಟು ದಿನ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅಂದರೆ 5 ಭಾಷೆ ಎನ್ನುವಂತಾಗಿತ್ತು. ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸಿನಿಮಾ ಡಬ್ ಆಗ್ತಿತ್ತು. ಆದರೆ 'ಕಾಂತಾರ' ತುಳು ಭಾಷೆಗೆ ಡಬ್ ಆಗಿ ಹೊಸ ಪರ್ವ ಶುರು ಮಾಡಿದೆ. ಆ ಮೂಲಕ ಮತ್ತೊಂದು ಅವಕಾಶದ ಬಾಗಿಲನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿದೆ. ಇನ್ನು ಮುಂದೆ ರಿಷಬ್ ಶೆಟ್ಟಿ ಸಿನಿಮಾಗಳು 6 ಭಾಷೆಗಳಲ್ಲಿ ಡಬ್‌ ಆಗಿ ರಿಲೀಸ್ ಆದರೂ ಅಚ್ಚರಿಪಡಬೇಕಿಲ್ಲ.

    'ಕಾಂತಾರ' 400 ಕೋಟಿ ಕಲೆಕ್ಷನ್

    'ಕಾಂತಾರ' 400 ಕೋಟಿ ಕಲೆಕ್ಷನ್

    ಈಗಾಗಲೇ ಸಿನಿಮಾ ವರ್ಲ್ಡ್‌ವೈಡ್ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಹಿಂದಿ ವರ್ಷನ್ ಇನ್ನು ಓಟಿಟಿಗೆ ಬಂದಿಲ್ಲ. ಬಾಲಿವುಡ್‌ನಲ್ಲಿ ಇನ್ನು ಕೆಲ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಿಂದಿ ಬೆಲ್ಟ್‌ನಲ್ಲಿ 70 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಆ ಮೂಲಕ ಅತಿಹೆಚ್ಚು ಕಲೆಕ್ಷನ್ ಮಾಡಿದ ಕನ್ನಡದ 2ನೇ ಸಿನಿಮಾ, ದಕ್ಷಿಣ ಭಾರತದ 8ನೇ ಸಿನಿಮಾ ಎನಿಸಿಕೊಂಡಿದೆ.

    ಇಂಗ್ಲೀಷ್ ಭಾಷೆಗೂ ಡಬ್?

    ಇಂಗ್ಲೀಷ್ ಭಾಷೆಗೂ ಡಬ್?

    ಸದ್ಯ 6 ಭಾಷೆಗಳಲ್ಲಿ 'ಕಾಂತಾರ' ಸಿನಿಮಾಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿದೆ. ಇದೀಗ ಇಂಗ್ಲೀಷ್ ಭಾಷೆಗೂ ಸಿನಿಮಾ ಡಬ್ ಮಾಡುವ ಪ್ರಯತ್ನಗಳು ನಡೀತಿದೆ. ಆದರೆ ಇಂಗ್ಲೀಷ್ ವರ್ಷನ್ ಥಿಯೇಟರ್‌ಗೂ ಬರುತ್ತಾ ಅಥವಾ ಬರೀ ಓಟಿಟಿಗೆ ಬರುತ್ತಾ ಕಾದು ನೋಡಬೇಕು.

    English summary
    KantaraIn Tulu from Tomorrow Here are the list of theaters in Karnataka. Kantara has earned a whopping 306.32 crores nett in India. Know more.
    Thursday, December 1, 2022, 23:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X