For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ನಟಿ ಸಪ್ತಮಿ ಮೂಗಿನ ಎರಡೂ ಕಡೆ ಬೊಟ್ಟು ಚುಚ್ಚಿಸಿಕೊಂಡಿದ್ದೇಕೆ? ರಿಷಬ್ ಕಣ್ಣಿಗೆ ಬಿದ್ದಿದ್ದೇಗೆ?

  |

  ಇನ್ನೇನು ದಸರಾ ಹಬ್ಬ ಸಮೀಪಿಸುತ್ತಿದೆ. ನಾಡ ಹಬ್ಬಕ್ಕೆ ಸಿನಿಪ್ರಿಯರನ್ನು ರಂಜಿಸುವುದಕ್ಕೆ ಹಲವು ಸಿನಿಮಾಗಳು ಸಜ್ಜಾಗಿ ನಿಂತಿವೆ. ಇಂತಹ ಸಿನಿಮಾಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರೋ 'ಕಾಂತಾರ' ಕೂಡ ಒಂದು.

  'ಕಾಂತಾರ' ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈಗಾಗಲೇ ಸಿನಿಮಾ ಟೀಸರ್ ಹಾಗೂ ಹಾಡುಗಳಿಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಕ್ಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾದಲ್ಲಿ ನೀಲಾ ಪಾತ್ರದಲ್ಲಿ ನಟಿಸಿರೋ ನಟಿ ಕನ್ನಡಿಗರ ಮನಗೆದ್ದಿದ್ದಾರೆ. ಕಾಂತಾರದಲ್ಲಿ ಅವರ ಸ್ಟೈಲ್, ಮ್ಯಾನರಿಸಂ, ಹಳ್ಳಿ ಹುಡುಗಿ ಲುಕ್ ಎಲ್ಲವನ್ನು ಮೆಚ್ಚಿಕೊಂಡಿದ್ದಾರೆ.

  ರಿಷಬ್ ಶೆಟ್ಟಿ 'ಕಾಂತಾರ' ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಕೊರಿಯೋಗ್ರಫಿ!ರಿಷಬ್ ಶೆಟ್ಟಿ 'ಕಾಂತಾರ' ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಕೊರಿಯೋಗ್ರಫಿ!

  ಅಂದ್ಹಾಗೆ ನೀಲಾ ಪಾತ್ರದಲ್ಲಿ ನಟಿಸಿರೋ ಸಪ್ತಮಿ ಗೌಡ ಮೂಗಿನ ಎರಡೂ ಭಾಗಗಳಿಗೆ ಬೊಟ್ಟು ಚುಚ್ಚಿಸಿಕೊಂಡಿದ್ದಾರೆ. ಕೇವಲ ಪಾತ್ರಕ್ಕಾಗಿ ಚುಚ್ಚಿಸಿಕೊಂಡ್ರಾ? ಇಲ್ಲಾ ಮೊದಲೇ ಇತ್ತಾ? ಈ ಪಾತ್ರ ಅವರಿಗೆ ಒಲಿದು ಬಂದಿದ್ದೇಗೆ? ಅನ್ನೋದನ್ನು ಸ್ವತ: ಸಪ್ತಮಿ ಗೌಡ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

  ಎರಡೂ ಕಡೆ ಮೂಗುತಿ ಯಾಕೆ?

  ಎರಡೂ ಕಡೆ ಮೂಗುತಿ ಯಾಕೆ?

  'ಕಾಂತಾರ'ದಲ್ಲಿ ನೀಲಾ ಅನ್ನೋ ಪಾತ್ರದಲ್ಲಿ ನಟಿಸಿರೋ ಸಪ್ತಮಿ ಗೌಡ ಕನ್ನಡಿಗರ ಹೊಸ ಕ್ರಶ್. ಮೂಗಿನ ಎರಡೂ ಬದಿಗಳಲ್ಲೂ ಬೊಟ್ಟು ಚುಚ್ಚಿಸಿಕೊಂಡ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಅಷ್ಟಕ್ಕೂ ಎರಡೂ ಕಡೆ ಬೊಟ್ಟು ಚುಚ್ಚಿಸಿಕೊಂಡಿದ್ದೇಕೆ? ಅನ್ನೋದನ್ನು ಅವರೇ ರಿವೀಲ್ ಮಾಡಿದ್ದಾರೆ. "ಈ ಕ್ಯಾರೆಕ್ಟರ್ ಚೆನ್ನಾಗಿ ಕಾಣಿಸುತ್ತೆ ಅಂತ ರಿಷಬ್ ಸರ್‌ಗೆ ಒಂದು ಆಲೋಚನೆ ಬಂದಿತ್ತು. ಅವರು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಎರಡು ಕಡೆ ಮೂಗುತಿ ಹಾಕಿರೋದನ್ನು ನೋಡಿದ್ದರಂತೆ. ಅದಕ್ಕಾಗಿ ಚುಚ್ಚಿಸೋಣ ಅಂತ ಹೇಳಿದ್ದರು. ಸೋ ರಿಯಲ್ ಆಗಿ ಎರಡೂ ಕಡೆ ಚುಚ್ಚಿಸಿಕೊಂಡಿದ್ದೇನೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉಡುಪಿಯಲ್ಲಿ ಚುಚ್ಚಿಸಿದ್ದೆ." ಎನ್ನುತ್ತಾರೆ ಸಪ್ತಮಿ.

  'ಕಾಂತಾರ' ಮೇಕಿಂಗ್‌: 'ಕಂಬಳ ಗದ್ದೆಯಲ್ಲಿ ಕ್ಯಾಮೆರಾನೂ ಬಿತ್ತು.. ಮುಖವೂ ಜಜ್ಜಿ ಹೋಯ್ತು''ಕಾಂತಾರ' ಮೇಕಿಂಗ್‌: 'ಕಂಬಳ ಗದ್ದೆಯಲ್ಲಿ ಕ್ಯಾಮೆರಾನೂ ಬಿತ್ತು.. ಮುಖವೂ ಜಜ್ಜಿ ಹೋಯ್ತು'

  ಸಪ್ತಮಿಗೆ ಜನರ ಮೆಚ್ಚುಗೆ ಸಿಕ್ಕಿದ್ಯಾ?

  ಸಪ್ತಮಿಗೆ ಜನರ ಮೆಚ್ಚುಗೆ ಸಿಕ್ಕಿದ್ಯಾ?

  "ಶೂಟಿಂಗ್ ಆಗುತ್ತಿತ್ತು. ಹಾಗಾಗಿ ತೆಗೆದಿಲ್ಲ. ನಮ್ಮ ಅಮ್ಮ ನೀನು ಮೂಗುತಿ ಇಲ್ಲದೆ ಹೇಗೆ ಕಾಣಿಸುತ್ತೀಯಾ ಅಂತಾನೇ ಮರೆತು ಹೋಗಿದೆ ಅಂತಾರೆ. ತುಂಬಾ ಕಡೆ ಕೇಳುತ್ತಾರೆ. ತುಂಬಾ ಚೆನ್ನಾಗಿ ಕಾಣಿಸುತ್ತೆ. ಒಬ್ಬರಿಗೆ ಒಂದು ಕಡೆ ಚೆನ್ನಾಗಿ ಕಾಣಿಸುತ್ತೆ. ಆದರೆ, ನಿಮಗೆ ಎರಡೂ ಕಡೆ ಚೆನ್ನಾಗಿ ಕಾಣಿಸುತ್ತೆ. ನನಗೂ ಅನಿಸುತ್ತೆ ಎರಡೂ ಕಡೆಗೂ ಚುಚ್ಚಿಸಬೇಕು ಅಂತ ಅನಿಸುತ್ತೆ ಅಂತಾರೆ. ಇನ್ನು ಕೆಲವರು ಫ್ಯಾಷನ್ ಸ್ಟೇಟ್‌ಮೆಂಟ್ ಅಂತನೂ ಅಂತಾರೆ. ಆದರೆ, ನೀಲಾ ಅನ್ನೋ ಪಾತ್ರಕ್ಕೋಸರ ಎರಡೂ ಕಡೆ ಬೊಟ್ಟು ಚುಚ್ಚಿಸಿದ್ದು." ಅಂತಾರೆ ಸಪ್ತಮಿ ಗೌಡ.

  ಈ ಪಾತ್ರ ಸಿಕ್ಕಿದ್ದು ಹೇಗೆ?

  ಈ ಪಾತ್ರ ಸಿಕ್ಕಿದ್ದು ಹೇಗೆ?

  "ರಿಷಬ್ ಶೆಟ್ಟಿ ಹುಡುಕುತ್ತಿದ್ದರು. ಈ ಕ್ಯಾರೆಕ್ಟರ್ ಬಗ್ಗೆ ಸರ್‌ಗೊಂದು ಇಮ್ಯಾಜಿನೇಷನ್ ಇತ್ತು. ಈ ತರ ಕಾಣಿಸಬೇಕು ಅಂತ. ಅದಕ್ಕೆ ಸರ್ ಹುಡುಕುತ್ತಿದ್ದರಂತೆ. ತುಂಬಾನೇ ಹುಡುಕಿದ್ದಾರೆ. ನೀಲಾ ಪಾತ್ರಕ್ಕೆ ಫಾರೆಸ್ಟ್ ಗಾರ್ಡ್ ಟ್ರೈನಿಂಗ್ ಆಗಿರುತ್ತೆ. ಜೊತೆ ಹಳ್ಳಿ ಹುಡುಗಿ ಎಷ್ಟು ಫಿಟ್ ಆಗಿರುತ್ತಾರೋ ಅಂತಹ ಪಾತ್ರ ಬೇಕಿತ್ತು. ಬೇರೆ ಭಾಷೆಯವ್ರನ್ನು ಹುಡುಕೋಕೆ ಹೊರಟಿದ್ದರು. ಬಳಿಕ ಕನ್ನಡದವರೇ ಬೇಕು ಅಂತ ಡಿಸೈಡ್ ಮಾಡಿದ್ರು. ಆ ವೇಳೆ ನಾನು ಇನ್‌ಸ್ಟಾಗ್ರಾಂನಲ್ಲಿ ಚಾಮುಂಡೇಶ್ವರಿ ಬೆಟ್ಟದಲ್ಲಿ ಸೀರೆಯುಟ್ಟಿದ್ದ ಫೋಟೊ ಹಾಕಿದ್ದೆ. ಈ ಫೀಚರ್ ಚೆನ್ನಾಗಿರುತ್ತೆ ಅಂತ ಡಿಸೈಡ್ ಮಾಡಿದ್ದರು. ಅಷ್ಟರಲ್ಲಿ ಪಾಪ್‌ಕಾರ್ನ್ ರಿಲೀಸ್ ಆಗಿತ್ತು. ಹಾಗೆ ಸೆಲೆಕ್ಟ್ ಆಗಿದ್ದು." ಅಂತಾರೆ ಸಪ್ತಮಿ.

  ಕಾಂತಾರಗೆ ಮೊದಲ ಆಯ್ಕೆ ಅಪ್ಪು ಅಲ್ಲ! ನಡೆದಿದ್ದೇನು ಎಂಬ ಸತ್ಯಾಂಶ ಬಿಚ್ಚಿಟ್ಟ ರಿಷಬ್ ಶೆಟ್ಟಿಕಾಂತಾರಗೆ ಮೊದಲ ಆಯ್ಕೆ ಅಪ್ಪು ಅಲ್ಲ! ನಡೆದಿದ್ದೇನು ಎಂಬ ಸತ್ಯಾಂಶ ಬಿಚ್ಚಿಟ್ಟ ರಿಷಬ್ ಶೆಟ್ಟಿ

  ಪಾಪ್ ಕಾರ್ನ್ ಸಿನಿಮಾದಲ್ಲೂ ನಟನೆ

  ಪಾಪ್ ಕಾರ್ನ್ ಸಿನಿಮಾದಲ್ಲೂ ನಟನೆ

  "ಪಾಪ್‌ ಕಾರ್ನ್ ಆದ್ಮೇಲೆ ಆ ಕ್ಯಾರೆಕ್ಟರ್ ಶೇಡ್ ಅನ್ನು ಬ್ರೇಕ್ ಮಾಡೋಕೆ ತುಂಬಾನೇ ಪ್ರಯತ್ನ ಪಟ್ಟಿದ್ದೆ. ಗಿರಿಜಾ ಅನ್ನೋ ಕ್ಯಾರೆಕ್ಟರ್ ತುಂಬಾ ಜನಕ್ಕೆ ಇಷ್ಟ ಆಗಿತ್ತು. ಒಬ್ಬ ನಟಿಯಾಗಿ ಅದನ್ನು ಬ್ರೇಕ್ ಮಾಡಬೇಕಿತ್ತು. ಹಾಗಾಗಿ ಈ ಪಾತ್ರವನ್ನು ಪಡೆದುಕೊಳ್ಳಬೇಕು ಅಂತಾನೇ ಇದ್ದೆ." ಅಂತ 'ಕಾಂತಾರ' ತಮ್ಮ ವೃತ್ತಿ ಬದುಕಿಗೆ ಯಾಕೆ ಅಷ್ಟು ಸ್ಪೆಷಲ್ ಅನ್ನುತ್ತಾರೆ ಸಪ್ತಮಿ.

  English summary
  Kanthara Actress Sapthami Gowda Reveals About Her Character Selection And Nose Pin, Know More.
  Saturday, September 24, 2022, 14:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X