For Quick Alerts
  ALLOW NOTIFICATIONS  
  For Daily Alerts

  'ಕಂಠಿ' ಸಿನಿಮಾ ನಿರ್ದೇಶಕ ಎಸ್.ಭರತ್ ಹಠಾತ್ ಸಾವು

  |

  ಕಂಠಿ, ಸಾಹೇಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರತಿಭಾವಂತ ನಿರ್ದೇಶಕ ಎಸ್.ಭರತ್ ಹಠಾತ್ತನೆ ಸಾವಿಗೀಡಾಗಿದ್ದಾರೆ.

  45 ವರ್ಷದ ಭರತ್‌ ಆರೋಗ್ಯ ಸಮಸ್ಯೆಯಿಂದಾಗಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

  ಶ್ರೀಮುರಳಿ, ರಮ್ಯಾ ನಟಿಸಿದ್ದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ಆ ನಂತರ ಬಹು ವರ್ಷಗಳ ಬಿಡುವಿನ ಬಳಿಕ 2017 ರಲ್ಲಿ ಸಾಹೇಬ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾ ಒಂದನ್ನೇ ವೃತ್ತಿ ಮಾಡಿಕೊಂಡಿದ್ದ ಭರತ್, ಹೊಸ ಸಿನಿಮಾದ ತಯಾರಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ.

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಆಸ್ಪತ್ರೆಗೆ ದಾಖಲಾದ ಸೂಪರ್ ಸ್ಟಾರ್ | Filmibeat Kannada

  ಭರತ್ ಗೆ ಮದುವೆಯಾಗಿದ್ದು ಹನ್ನೆರಡು ವರ್ಷದ ಮುದ್ದಾದ ಹೆಣ್ಣುಮಗುವಿದೆ. ರಾಮನಗರ ಚಿಕ್ಕಮುಳುವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರ ಅತ್ತಿಗುಪ್ಪೆ ಯಲ್ಲಿ ನೆಲೆಸಿದ್ದರು. ಕೊರೊನಾ ದಿಂದ ಮೃತರಾದವರ ಅಂತಿಮ ಸಂಸ್ಕಾರ ಮಾಡಲು ನಿಗದಿಪಡಿಸಲಾಗಿರುವ ಕೆಂಗೇರಿಯ ಬಿಜೆಎಸ್ ಆಸ್ಪತ್ರೆಯ ಬಳಿ ಭರತ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

  English summary
  Kannada movie Kanti's director S Bharath died because of Coronavirus yesterday. He was 45 years of age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X