ಕಿಚ್ಚ ಕೊಟ್ಟ ಪಂಚ್ ಗೆ ಕ್ಲೀನ್ ಬೌಲ್ಡ್ ಆದ ಕಾಮಿಡಿ ಕಿಂಗ್ ಕಪಿಲ್ ಶರ್ಮ.!
Recommended Video

ಹಿಂದಿಯ ಅತ್ಯಂತ ಜನಪ್ರಿಯ ಕಪಿಲ್ ಶರ್ಮ ಶೋನಲ್ಲಿ ಕನ್ನಡದ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ. ನಿನ್ನೆಯಷ್ಟೇ ಸಂಚಿಕೆಯ ಚಿತ್ರೀಕರಣ ಪೂರ್ಣಗೊಂಡಿದೆ.
ಕಾಮಿಡಿ ಕಿಂಗ್ ಕಪಿಲ್ ಶರ್ಮ ಶೋ ನಲ್ಲಿ ಪಾಲ್ಗೊಂಡಿರುವುದಕ್ಕೆ ಸಂತಸಗೊಂಡ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದರು. "ಕಾರ್ಯಕ್ರಮದಲ್ಲಿ ಸಖತ್ ಎಂಜಾಯ್ ಮಾಡಿದೆ. ನಕ್ಕು ನಕ್ಕು ಸಾಕಾಯ್ತು. ಈ ರೀತಿ ನಗುವ ಅವಕಾಶ ನನಗೆ ಸಿಕ್ಕಿದ್ದೇ ಅಪರೂಪ. ಇಂತಹ ಅವಕಾಶ ಕಲ್ಪಿಸಿಕೊಟ್ಟವರಿಗೆ ಧನ್ಯವಾದಗಳು. ಥ್ಯಾಂಕ್ಯೂ ಕಪಿಲ್ ಶರ್ಮ" ಎಂದು ಸುದೀಪ್ ಟ್ವೀಟಿಸಿದ್ದರು.

ಇದಕ್ಕೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಕಪಿಲ್ ಶರ್ಮ, "ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು ಸರ್. ನಿಮ್ಮ ಒನ್ ಲೈನರ್ ಗಳು ಅದ್ಭುತವಾಗಿತ್ತು. ಜನ ಈ ಸಂಚಿಕೆಯನ್ನು ಎಂದೂ ಮರೆಯಲ್ಲ" ಎಂದಿದ್ದಾರೆ.
ಹೇಳಿ ಕೇಳಿ ಕಿಚ್ಚ ಸುದೀಪ್ ಪಂಚಿಂಗ್ ಡೈಲಾಗ್ ಹೊಡೆಯೋದ್ರಲ್ಲಿ ಫೇಮಸ್ಸು. ಇನ್ನೂ ಕಿಚಾಯಿಸುವುದು, ಕಾಲೆಳೆಯುವುದರಲ್ಲಿ ಸುದೀಪ್ ಎತ್ತಿದ ಕೈ. ಅಂದಮೇಲೆ ಸುದೀಪ್ ಭಾಗವಹಿಸಿರುವ ಕಪಿಲ್ ಶರ್ಮ ಶೋ ನಲ್ಲಿ ವೀಕ್ಷಕರಿಗೆ ಕಾಮಿಡಿ ಕಿಕ್ ಸಿಗುವುದು ಪಕ್ಕಾ ಅಂತ ತಾನೇ ಲೆಕ್ಕ.
ಅಂದ್ಹಾಗೆ ಸುದೀಪ್ ಪಾಲ್ಗೊಂಡಿರುವ ಕಪಿಲ್ ಶರ್ಮ ಶೋ ಸಂಚಿಕೆಯ ಪ್ರಸಾರ ಯಾವಾಗ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.


Click it and Unblock the Notifications











