ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಖರಾಬು ಹಾಡು
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಹಾಡು ಹಾಗೂ ಡೈಲಾಗ್ ಟ್ರೈಲರ್ ಮೂಲಕ ಸಖತ್ ಸದ್ದು ಮಾಡ್ತಿದೆ.
Recommended Video

ಅದರಲ್ಲೂ ಪೊಗರು ಸಿನಿಮಾದ ಖರಾಬು ಹಾಡು ಸ್ಯಾಂಡಲ್‌ವುಡ್ ಮಟ್ಟಿಗೆ ದಾಖಲೆ ಹಾಗೂ ಇತಿಹಾಸ ಅಂತಾನೇ ಹೇಳಬಹುದು. ಏಕಂದ್ರೆ, ಯ್ಯೂಟ್ಯೂಬ್‌ನಲ್ಲಿ ಇದುವರೆಗೂ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಕನ್ನಡ ಹಾಡು ಇದಾಗಿದೆ.
ದಾಖಲೆಗಳ ಪ್ರಕಾರ ಖರಾಬು ಹಾಡು ಯ್ಯೂಟ್ಯೂಬ್ನಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದ್ರೆ ಬರೋಬ್ಬರಿ 15 ಕೋಟಿ (151,309,740) ಬಾರಿ ಈ ಹಾಡನ್ನು ವೀಕ್ಷಕರು ನೋಡಿದ್ದಾರೆ. 1.1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದ್ರೆ, 152K ಡಿಸ್‌ಲೈಕ್ಸ್ ಪಡೆದಿದೆ. 76670 ಕಾಮೆಂಟ್ ಸಿಕ್ಕಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ 150 ಮಿಲಿಯನ್ ವೀಕ್ಷಣೆ ಕಂಡಿರುವ ಮೊಟ್ಟ ಮೊದಲ ಹಾಡು ಇದಾಗಿದೆ. ಇದಕ್ಕೂ ಮುಂಚೆ ಶರಣ್ ನಟಿಸಿದ್ದ 'Rambo-2' ಚಿತ್ರದ 'ಚುಟು ಚುಟು' ಹಾಡು ಅತಿ ಹೆಚ್ಚು ವೀಕ್ಷಣೆ ಕಂಡಿತ್ತು.
ಇದೀಗ, ಈ ಹಾಡಿನ ದಾಖಲೆಯನ್ನು ಖರಾಬು ಹಾಡು ಮುರಿದಿದೆ. ಇನ್ನು ಪೊಗರು ಸಿನಿಮಾ ರಿಲೀಸ್ ಆಗಿಲ್ಲ. ರಿಲೀಸ್ ಆದ್ಮೇಲೂ ಅಥವಾ ರಿಲೀಸ್ ವೇಳೆ ಈ ಹಾಡು ಮತ್ತೆ ಮತ್ತೆ ವೀಕ್ಷಣೆ ಹೆಚ್ಚಾಗುವ ಸಾಧ್ಯತೆ ಇದೆ.
ಅಂದ್ಹಾಗೆ, ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಸ್ವತಃ ಚಂದನ್ ಶೆಟ್ಟಿ ಸಾಹಿತ್ಯ ರಚಿಸಿದ್ದು, ಖುದ್ದು ಚಂದನ್ ಅವರೇ ಹಾಡಿದ್ದಾರೆ.


Click it and Unblock the Notifications











