For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಜೊತೆ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್

  |

  ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಕನ್ನಡ ನಟ, ರಾಕಿಂಗ್ ಸ್ಟಾರ್ ಯಶ್ ರನ್ನು ಭೇಟಿ ಮಾಡಿದ್ದಾರೆ. ಮುಂಬೈನಲ್ಲಿ ಈ ಇಬ್ಬರು ದಿಗ್ಗಜರು ಮುಖಾಮುಖಿ ಆಗಿದ್ದಾರೆ.

  ಮುಂಬೈನಲ್ಲಿ GQ ಪವರ್ ಲಿಸ್ಟ್ ಕಾರ್ಯಕ್ರಮದಲ್ಲಿ ನಟ ಯಶ್ ಭಾಗಿಯಾಗಿದ್ದರು. ಈ ವೇಳೆ ಯಶ್ ರೊಂದಿಗೆ ಕರಣ್ ಜೋಹರ್ ಮಾತುಕತೆ ನಡೆಸಿದ್ದಾರೆ. 'ಕೆಜಿಎಫ್' ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಬಾಲಿವುಡ್ ನಲ್ಲಿಯೂ ಹವಾ ಇಟ್ಟಿದ್ದಾರೆ.

  ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್ರಾಕಿ ಭಾಯ್ ಭೇಟಿ ಮಾಡಿದ 'ರಾಬರ್ಟ್' ಕ್ವೀನ್ ಆಶಾ ಭಟ್

  ಕರಣ್ ಜೋಹರ್ ಸೌತ್ ಸಿನಿಮಾ ಸ್ಟಾರ್ ಗಳ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಇದೀಗ ಯಶ್ ಜೊತೆಗೆ ಸಹ ಕರಣ್ ಮಾತು ಶುರುವಾಗಿದೆ. ಕಾರ್ಯಕ್ರಮದಲ್ಲಿ ಯಶ್ ಭೇಟಿ ಮಾಡಿದ ಕರಣ್ 'ಕೆಜಿಎಫ್ 2' ಚಿತ್ರದ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತದ ತಾರೆಯರನ್ನು ಬಾಲಿವುಡ್ ನಲ್ಲಿ ಲಾಂಚ್ ಮಾಡುವ ಕರಣ್, ಮುಂದೆ ಯಶ್ ಜೊತೆಗೆ ಸಿನಿಮಾ ಮಾಡಿದರೂ ಅಚ್ಚರಿ ಇಲ್ಲ.

  ಅಂದಹಾಗೆ, GQ ಪವರ್ ಲಿಸ್ಟ್ ಕಾರ್ಯಕ್ರಮ ಮುಂಬೈನಲ್ಲಿ ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ, 'ರಾಬರ್ಟ್' ಚಿತ್ರದ ನಾಯಕಿ ಆಶಾ ಭಟ್ ಕೂಡ ಭಾಗಿಯಾಗಿದ್ದಾರೆ. ಯಶ್ ಜೊತೆಗಿನ ಫೋಟೋವನ್ನು ತಮ್ಮ ಸೋ‍ಷಿಯಲ್ ಮೀಡಿಯಾ ಖಾತೆಯಲ್ಲಿ ಅವರು ಹಂಚಿಕೊಂಡಿದ್ದರು.

  English summary
  Bollywood director Karan Johar met Yash in GQ powerlist program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X