For Quick Alerts
  ALLOW NOTIFICATIONS  
  For Daily Alerts

  ಮಾನುಷಿ ಚಿಲ್ಲರ್ ಮೇಲೆ ಕರಣ್ ಜೋಹರ್ ಕಣ್ಣು ಬಿತ್ತು.!

  By Naveen
  |

  ಬಾಲಿವುಡ್ ಚಿತ್ರರಂಗಕ್ಕು ಹಾಗೂ ಮಾಡಲಿಂಗ್ ಜಗತ್ತಿಗು ಒಳ್ಳೆಯ ನಂಟು ಇದೆ. ಗ್ರಾಮರ್ ಲೋಕದಲ್ಲಿ Ramp ವಾಕ್ ಮಾಡಿದ ಅನೇಕ ಹುಡುಗಿಯರು ಮುಂದೆ ಕ್ಯಾಮರಾ ಮುಂದೆ ನಟಿಸುವ ಅವಕಾಶ ಪಡೆದಿದ್ದಾರೆ. ಈಗ ಅದೇ ಈ ರೀತಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಹರಿದಾಡಿದೆ.

  ಈ ಹಿಂದೆಯೇ ಮಾನುಷಿ ಚಿಲ್ಲರ್ ಅವರ ಬಗ್ಗೆ ಈ ರೀತಿಯ ಗುಸು ಗುಸು ಕೇಳಿ ಬಂದಿತ್ತು. ಆದರೆ, ಈಗ ಖ್ಯಾತ ನಿರ್ದೇಶಕ ಕರಣ್ ಜೋಹರ್ ಇವರನ್ನು ಲಾಂಚ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಅಲಿಯಾ ಭಟ್, ಜಾಹ್ನವಿ ಕಪೂರ್ ಸೇರಿದಂತೆ ಸಾಕಷ್ಟು ಸ್ಟಾರ್ ಗಳನ್ನು ಚಿತ್ರರಂಗಕ್ಕೆ ಪರಿಚಯ ಮಾಡಿರುವ ಅವರು ಮಾನುಷಿ ಚಿಲ್ಲರ್ ರನ್ನು ಸಹ ಲಾಂಚ್ ಮಾಡುತ್ತಾರೆ ಎಂಬ ಸುದ್ದಿ ಇದೆ.

  ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.! ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!

  ವಿಶ್ವ ಸುಂದರಿ ಪಟ್ಟ ಪಡೆದ ಮೇಲೆ ಕೆಲವು ಜಾಹಿರಾತುಗಳಲ್ಲಿ ಮಿಂಚಿದ್ದ ಮಾನುಷಿ ಚಿಲ್ಲರ್ ಸಿನಿಮಾ ಯಾವಾಗ ಮಾಡುತ್ತಾರೆ ಎಂದು ಅನೇಕರು ಕಾಯುತ್ತಿದ್ದರು. ಅದೇ ರೀತಿ ಅವರ ಸಿನಿಮಾ ಸುದ್ದಿ ಪದೇ ಪದೇ ಕೇಳಿ ಬರುತ್ತಿದೆ. ಈಗಾಗಲೇ ಅನೇಕ ಕಂಪನಿಗಳಿಗೆ ಮಾನುಷಿ ಚಿಲ್ಲರ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

  ಅಂದಹಾಗೆ, ಕಳೆದ ವರ್ಷ ಚೀನದಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಮಾನುಷಿ ಚಿಲ್ಲರ್ ಮಿಸ್ ವಲ್ಡ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.

  English summary
  Director Karan Johar interested in launching Miss World Manushi Chhillar to bollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X