ಸನ್ನಿ ಲಿಯೋನ್ ವಿರುದ್ಧ ಬೆಂಗಳೂರಿನಲ್ಲಿ ಹೆಚ್ಚಾಯ್ತು ಪ್ರತಿಭಟನೆ

By Pavithra

2018 ಹೊಸ ವರ್ಷದ ಆಚರಣೆಗೆ ಇನ್ನು ಹದಿನೈದು ದಿನಗಳಷ್ಟೇ ಬಾಕಿ ಉಳಿದಿವೆ. ನ್ಯೂ ಇಯರ್ ಸಂಭ್ರಮಾಚರಣೆ ಮಾಡಲು ಬಾಲಿವುಡ್ ಬೆಡಗಿ ನಟಿ ಸನ್ನಿಲಿಯೋನ್ ಬೆಂಗಳೂರಿಗೆ ಆಗಮಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾನ್ಯತಾ ಟೆಕ್ ಪಾರ್ಕ್ ನಲ್ಲಿ 'ಸನ್ನಿ ನೈಟ್ಸ್' ಎನ್ನುವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಡಿಸೆಂಬರ್ 31ರ ರಾತ್ರಿ ನ್ಯೂ ಇಯರ್ ಪಾರ್ಟಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.

'ಸನ್ನಿ ಲಿಯೋನ್' ಕರೆಸಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ. ಇದರಿಂದ ಕರ್ನಾಟಕ ಹಾಗೂ ಭಾರತೀಯ ಸಂಸ್ಕೃತಿಗೆ ದಕ್ಕೆ ಬರುವುದು ಎಂದು 'ಕರವೇ ಯುವಸೇನಾ'ಯಿಂದ ಪ್ರತಿಭಟನೆ ಜೋರಾಗಿದೆ. ಇಂದು (ಡಿ.15) ಮಾನ್ಯತಾ ಟೆಕ್ ಪಾರ್ಕ್ ಬಳಿ 'ಕರವೇ ಯುವಸೇನಾ' ಸಂಘಟನಾಕಾರರು ಹಾಗೂ ಮಹಿಳೆಯರು 'ಸನ್ನಿ ಲಿಯೋನ್' ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಚಪ್ಪಲಿಯಲ್ಲಿ ಹೊಡೆದು ಪ್ರತಿಭಟನೆ ಮಾಡಿದ್ದಾರೆ.

Karave Yuva sena protesting against Sunny Leone

'ಟೈಮ್ಸ್ ಕ್ರಿಯೇಷನ್ಸ್' ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಸನ್ನಿ ಲಿಯೋನ್ ಡ್ಯಾನ್ಸ್ ಜೊತೆಯಲ್ಲಿ ಡಿಜೆ ಪಾರ್ಟಿಯನ್ನೂ ಮಾಡಲಾಗುತ್ತಿದೆ. ಈ ಬಗ್ಗೆ 'ಕರವೇ ಯುವ ಸೇನಾ' 'ಟೈಮ್ಸ್ ಕ್ರಿಯೇಷನ್ಸ್' ಸಿಬ್ಬಂದಿಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ 'ಟೈಮ್ಸ್ ಕ್ರಿಯೇಷನ್ಸ್' ನವರು ಮನವಿ ಪತ್ರವನ್ನು ಕೊರಿಯರ್ ಮೂಲಕ ತಲುಪಿಸಿ ಎಂದು ಹೇಳಿದ್ದಾರಂತೆ. ಸದ್ಯ ಕ'ರವೇ ಯುವಸೇನಾ' ಸಂಘಟನಕಾರರು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಸಿ.ಎಂ.ಸಿದ್ಧರಾಮಯ್ಯ ಅವರಿಗೆ ಪತ್ರ ನೀಡಿ ಸನ್ನಿ ಲಿಯೋನ್ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ ತಡೆಯಲು ಮನವಿ ಮಾಡಲಿದ್ದಾರೆ .

Karave Yuva sena protesting against Sunny Leone

ಇತ್ತ ಪ್ರತಿಭಟನೆಗಳ ಮಧ್ಯೆ ಬುಕ್ ಮೈ ಶೋ ನಲ್ಲಿ ಸನ್ನಿ ನೈಟ್ ಕಾರ್ಯಕ್ರಮಕ್ಕೆ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಡಿಸೆಂಬರ್ 31 ರ ಸಂಜೆ 6 ಗಂಟೆಯಿಂದಲೇ 'ನ್ಯೂ ಇಯರ್ ಪಾರ್ಟಿ' ಪ್ರಾರಂಭವಾಗಲಿದೆ. ಮಾನ್ಯತಾ ಟೆಕ್ ಪಾರ್ಕ್ ನ ವೈಟ್ ಆರ್ಚಿಡ್ ಹಾಲ್ ನಲ್ಲಿ 'ಸನ್ನಿ ನೈಟ್ಸ್' ಇವೆಂಟ್ ನಡೆಯಲಿದೆ. ಪ್ರತಿಭಟನೆ ಕಾವು ಹೀಗೆ ಹೆಚ್ಚಾದರೆ ಕಾರ್ಯಕ್ರಮದ ಆಯೋಜಕರು ಸನ್ನಿ ಲಿಯೋನ್ ಇಲ್ಲದೆ ಆ ಕಾರ್ಯಕ್ರಮವನ್ನ ನಡೆಸುತ್ತಾರಾ ಕಾದು ನೋಡಬೇಕು.

More from Filmibeat

English summary
Karave Yuva sena members protesting against Actress Sunny Leone , sunny leone coming to Bangalore for the New Year's Event,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X