ಬೆಂಗಳೂರು ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ: ಜ್ಯೋತಿ ಬೆಳಗಿದ ಕರೀನಾ ಕಪೂರ್

By Bharath Kumar

10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಗುರುವಾರ (ಫೆಬ್ರವರಿ 22) ಅದ್ಧೂರಿ ಚಾಲನೆ ನೀಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಭಾಗಿತ್ವದಲ್ಲಿ ಅಯೋಜಿಸಿರುವ ಬೆಂಗಳೂರು ಚಿತ್ರೋತ್ಸವದ ಉದ್ಘಾಟನ ಕಾರ್ಯಕ್ರಮ ವಿಧಾನಸೌಧದ ಮುಂಭಾಗದಲ್ಲಿ ಅದ್ಧೂರಿಯಾಗಿ ನೆರವೇರಿತು.

ಈ ಬಾರಿಯ ಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಜ್ಯೋತಿ ಬೆಳಗುವುದರ ಮೂಲಕ ಫಿಲ್ಮ್ ಫೆಸ್ಟಿವಲ್ ವನ್ನ ಅಧಿಕೃತವಾಗಿ ಆರಂಭಿಸಿದರು. ಇರಾನ್ ನಟಿ ಫತೇಮೇ ಮೋಟಮೆಡ್ ಆರ್ಯ, ಫ್ರೆಂಚ್‍ ನಿರ್ಮಾಪಕ ಮಾರ್ಕ್‍ ಭಾಷೆಟ್, ಬಾಲಿವುಡ್‍ ನಿರ್ದೇಶಕ ರಾಕೇಶ್ ಓಂಪ್ರಕಾಶ್‍ ಮೆಹ್ರಾ ಅತಿಥಿಗಳಾಗಿ ಭಾಗವಹಿಸಿದ್ದರು.

ಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಕರೀನಾ ಕಪೂರ್ ''ಎಲ್ಲ ಭಾಷೆ, ಧರ್ಮವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾಕ್ಕಿದೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಕೇವಲ ಕನ್ನಡ ಸಿನಿಮಾ ನೋಡಲು ನಾವಿಲ್ಲಿ ಬಂದಿಲ್ಲ. ವಿಶ್ವದ ಸಿನಿಮಾಗಳು ಪ್ರದರ್ಶಿತ ವಾಗುತ್ತವೆ. ಚಲನಚಿತ್ರ ಕ್ಷೇತ್ರಕ್ಕೆ ಕರ್ನಾಟಕದ ಸರ್ಕಾರ ಇಷ್ಟು ಪ್ರೋತ್ಸಾಹ ನಿಡುತ್ತಿರುವುದನ್ನು ಕಂಡು ಒಬ್ಬ ಕಲಾವಿದೆಯಾಗಿ ನಿಜಕ್ಕೂ ಸಂತಸ ತಂದಿದೆ'' ಎಂದರು.

Kareena kapoor Inaugurate the 10th Bengaluru International Film Festival

ಇನ್ನುಳಿದಂತೆ ಸಚಿವ ಆರ್ ರೋಷನ್ ಬೇಗ್, ಡಿ.ಎಚ್ ಶಂಕರಮೂರ್ತಿ, ಬಸವರಾಜ್ ಹೊರಟ್ಟಿ, ಸಂಪತ್ ರಾಜ್, ಬಿ.ಎಸ್ ಹರ್ಷಾ, ವಿದ್ಯಾಶಂಕರ್, ಪ್ರಿಯಾಂಕ್ ಖರ್ಗೆ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇನ್ನೂ 10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದ ಮೊದಲ ಸಿನಿಮಾವಾಗಿ ಸಾಲ್ವಟೋರ್ ಫಿಕಾರಾ ಮತ್ತು ವೆಲೆಂಟಿನೋ ಪಿಕೋನ್ ನಿರ್ದೇಶನದ ಇಟಲಿಯ 'ಇಟ್ಸ್ ದಿ ಲಾ' ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಉದ್ಘಾಟನ ಚಿತ್ರವಾಗಿ ಪ್ರದರ್ಶನ ಕಂಡಿತು. ಫೆಬ್ರವರಿ 23 ರಿಂದ ಮಾರ್ಚ್ 1 ವರೆಗೂ ಬೆಂಗಳೂರಿನ ಒರೆಯನ್ ಮಾಲ್ ನಲ್ಲಿ ವಿಶ್ವದ ವಿವಿಧ ಭಾಷೆಯ ಸಿನಿಮಾಗಳು ಪ್ರದರ್ಶನವಾಗಲಿದೆ.

ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು, ಶಿವರಾಜ್​ಕುಮಾರ್, ಸುದೀಪ್, ದರ್ಶನ್ ಗೈರು ಎದ್ದು ಕಾಣುತ್ತಿತ್ತು. ಇನ್ನುಳಿದಂತೆ ಚಿತ್ರರಂಗದ ಬಹುತೇಕ ಹಿರಿ-ಕಿರಿ ಕಲಾವಿದರ ದಂಡು ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

More from Filmibeat

English summary
Bollywood Actress Kareena kapoor khan Inaugurate the 10th Edition of Bengaluru International Film Festival (BIFFES) on thursday (february 22) In front of vidhana soudha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X