ಬೆಂಗಳೂರಿಗೆ ಬಂದಿದ್ದ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ
Recommended Video

10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಸಂಪ್ರದಾಯವಾಗಿ ಚಾಲನೆ ದೊರೆಯಿತು. ಬಾಲಿವುಡ್ ನಟಿ ಬೆಂಗಳೂರು ಚಿತ್ರೋತ್ಸವವನ್ನ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ನಿನ್ನೆಯ ಈ ಕಾರ್ಯಕ್ರಮಕ್ಕೆ ಕರೀನಾ ಕಪೂರ್ ಆಗಮಿಸಿದ್ದು ಬೆಂಗಳೂರಿನ ಜನಕ್ಕೆ ಹೆಚ್ಚು ಸಂತಸ ನೀಡಿರುವುದಂತೂ ಸುಳ್ಳಲ್ಲ. ಇನ್ನು ಬೆಂಗಳೂರಿನ ಬಗ್ಗೆ ಹಾಗೂ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಬಗ್ಗೆ ಮಾತನಾಡಿದ ಕರೀನಾ ಕನ್ನಡ ಕಲಾಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು.
ವಿಧಾನಸೌಧದ ಮುಂಭಾಗದ ವೇದಿಕೆಯಲ್ಲಿ ನಿಂತು ಮಾತು ಆರಂಭಿಸಿದ ಕರೀನಾ ಅದ್ಭುತವಾದ ಭಾಷಣ ಮಾಡಿದರು. ನೆರಿದಿದ್ದ ಅಭಿಮಾನಿಗಳಿಗೆ ಇದು ಖುಷಿ ನೀಡಿತು. ಹಾಗಿದ್ರೆ, ಕರೀನಾ ಭಾಷಣ ಹೇಗಿತ್ತು? ಬಾಲಿವುಡ್ ನಟಿ ಸ್ಯಾಂಡಲ್ ವುಡ್ ಗೆ ಕೊಟ್ಟ ಸಿಹಿ ಸುದ್ದಿ ಏನು.? ಮುಂದೆ ಓದಿ.....

ಬೆಂಗಳೂರು ಡೈನಾಮಿಕ್ ಸಿಟಿ
''ಬೆಂಗಳೂರು ಡೈನಾಮಿಕ್ ಸಿಟಿ'' ಎಂದು ಮಾತು ಆರಂಭಿಸಿದ ಕರೀನಾ ಬೆಂಗಳೂರು ಸಿನಿಮೋತ್ಸವಕ್ಕೆ ನೆರೆದಿದ್ದ ಜನಸ್ತೋಮ ಹಾಗೂ ಸರ್ಕಾರದಿಂದ ದೊರಕುತ್ತಿರುವ ಸಹಕಾರವನ್ನ ಕರೀನಾ ತುಂಬುಹೃದಯದ ಶ್ಲಾಘಿಸಿದರು. ''ಎಲ್ಲ ಭಾಷೆ, ಧರ್ಮವನ್ನೂ ಮೀರಿ ಜನರನ್ನು ಒಂದುಗೂಡಿಸುವ ಶಕ್ತಿ ಸಿನಿಮಾಕ್ಕಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

ಕನ್ನಡ ಸಿನಿಮಾದಲ್ಲಿ ಅಭಿನಯಿಸ್ತಾರಂತೆ
''ಕನ್ನಡ ಭಾಷೆ ಗೊತ್ತಿಲ್ಲ. ಆದ್ರೆ, ಮುಂದಿನ ದಿನಗಳಲ್ಲಿ ಖಂಡಿತಾ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತೇನೆ'' ಎಂದು ಹೇಳುವ ಮೂಲಕ ಚಂದನವನದ ಕಲಾರಸಿಕರಿಗೆ ಸಿಹಿ ಸುದ್ದಿ ನೀಡಿದರು.

ಮೈಸೂರು ಅಚ್ಚು ಮೆಚ್ಚು
ಕಪೂರ್ ಕುಟುಂಬಕ್ಕೆ ಕರ್ನಾಟಕ ತುಂಬಾನೇ ಸ್ಪೆಷಲ್. ಅದರಲ್ಲೂ ಮೈಸೂರು ಅಂದರೆ ಅಚ್ಚು ಮೆಚ್ಚು. ಅನೇಕ ಉತ್ತಮ ಚಿತ್ರಗಳಿಗೆ ಮೈಸೂರು ಪ್ರೇರಣೆ ನೀಡಿದೆ'' ಎಂದು ಸಾಂಸ್ಕೃತಿಕ ನಗರಿಯ ಬಗ್ಗೆ ನೆನಪು ಮಾಡಿಕೊಂಡರು.

ಬೆಂಗಳೂರು ಚಿತ್ರೋತ್ಸವವನ್ನ ಮೆಚ್ಚಿದ ಕರೀನಾ
ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ ಕೇವಲ ಕನ್ನಡ ಸಿನಿಮಾ ನೋಡಲು ನಾವಿಲ್ಲಿ ಬಂದಿಲ್ಲ. ವಿಶ್ವದ ಸಿನಿಮಾಗಳು ಪ್ರದರ್ಶಿತವಾಗುತ್ತವೆ. ಚಲನಚಿತ್ರ ಕ್ಷೇತ್ರಕ್ಕೆ ಕರ್ನಾಟಕದ ಸರ್ಕಾರ ಇಷ್ಟು ಪ್ರೋತ್ಸಾಹ ನಿಡುತ್ತಿರುವುದನ್ನು ಕಂಡು ಒಬ್ಬ ಕಲಾವಿದೆಯಾಗಿ ನಿಜಕ್ಕೂ ಸಂತಸ ತಂದಿದೆ ಬೆಂಗಳೂರು ಚಿತ್ರೊತ್ಸವವನ್ನ ಮೆಚ್ಚಿಕೊಂಡರು.


Click it and Unblock the Notifications











