»   » ಸ್ಯಾಂಡಲ್ ವುಡ್ ಆಚೆ ಬೇಡಿಕೆ ಹೆಚ್ಚಿಸಿಕೊಂಡ 'ಕರಿಯ'.!

ಸ್ಯಾಂಡಲ್ ವುಡ್ ಆಚೆ ಬೇಡಿಕೆ ಹೆಚ್ಚಿಸಿಕೊಂಡ 'ಕರಿಯ'.!

Posted By:
Subscribe to Filmibeat Kannada

'ಗಣಪ' ಖ್ಯಾತಿಯ ಸಂತೋಷ್ ಅಭಿನಯದ 'ಕರಿಯ-2' ಚಿತ್ರ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 13 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದ್ದು, ಹೊಸ ಕರಿಯನ ಎಂಟ್ರಿಗೆ ಸ್ಯಾಂಡಲ್ ವುಡ್ ಸಜ್ಜಾಗಿದೆ.

ಸಂತೋಷ್ ಗೆ ನಟಿ ಮಯೂರಿ ಜೋಡಿಯಾಗಿದ್ದು, ಈಗಾಗಲೇ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಗಮನ ಸೆಳೆಯುತ್ತಿದೆ. ಹೀಗಿರುವಾಗ, ಚಿತ್ರದ ರೀಮೇಕ್ ಹಕ್ಕಿಗೆ ಸಖತ್ ಬೇಡಿಕೆ ಬಂದಿದೆ.

ಹೌದು, ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ, ವಿದೇಶದಲ್ಲೂ ಕರಿಯ ಕಮಾಲ್ ಮಾಡಲು ಸಿದ್ದವಾಗಿದೆ. ಹಾಗಿದ್ರೆ, 'ಕರಿಯ'ನ ಬೇಡಿಕೆ ಎಲ್ಲೆಲ್ಲಿದೆ ಎಂದು ತಿಳಿಯಲು ಮುಂದೆ ಓದಿ......

ಕೊರಿಯಾಗೆ ರೀಮೇಕ್ .!

ಪ್ರಭು ಶ್ರೀನಿವಾಸ್ ನಿರ್ದೇಶನದ 'ಕರಿಯ-2' ಚಿತ್ರ ಕೊರಿಯಾ ಭಾಷೆಗೆ ರಿಮೇಕ್ ಆಗಲಿದೆ. ಚಿತ್ರದ ಹಕ್ಕನ್ನ ಮುಂಬಯಿ ಮೂಲದ ಸಂಸ್ಥೆಯೊಂದು ದುಬಾರಿ ಬೆಲೆಗೆ ಕೊಂಡುಕೊಂಡಿದೆ.

ದರ್ಶನ್ ಹಾದಿಯಲ್ಲಿ ಹೆಜ್ಜೆ ಇಡ್ತಾರ ಈ ನಟ.?

ಹಿಂದಿ ಮತ್ತು ಮರಾಠಿಗೆ ಡಬ್.!

ಕೊರಿಯಾಗೆ ರೀಮೇಕ್ ಆಗುತ್ತಿರುವ 'ಕರಿಯ-2' ಚಿತ್ರವನ್ನ ಹಿಂದಿ ಭಾಷೆಯಲ್ಲಿ ಮತ್ತು ಮರಾಠಿ ಭಾಷೆಯಲ್ಲಿ ಡಬ್ ಮಾಡಲು ಚಿಂತಿಸಿದ್ದಾರಂತೆ.

ತಮಿಳು-ತೆಲುಗು ರೀಮೇಕ್!.

ಕೊರಿಯಾಗೆ ರೀಮೇಕ್, ಹಿಂದಿ ಮತ್ತು ಮರಾಠಿಗೆ ಡಬ್ ಆಗುತ್ತಿದೆ. ಮತ್ತೊಂದೆಡೆ ತಮಿಳು ಮತ್ತು ತೆಲುಗಿನಲ್ಲೂ 'ಕರಿಯ-2' ಚಿತ್ರವನ್ನ ರೀಮೇಕ್ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ ಎನ್ನಲಾಗಿದೆ.

ಟ್ರೈಲರ್ ನೋಡಿ ಫಿದಾ

ಕೇವಲ 'ಕರಿಯ-2' ಚಿತ್ರದ ಟ್ರೈಲರ್ ನೋಡಿಯೇ ಮುಂಬೈ ಸಂಸ್ಥೆ ರೀಮೇಕ್ ಮಾಡಲು ಮುಂದಾಗಿದೆ. ನಂತರ ನಿರ್ಮಾಪಕರಿಗೆ ಕರೆ ಮಾತನಾಡಿದ ಮುಂಬೈ ನಿರ್ಮಾಣ ಸಂಸ್ಥೆ ಅಗ್ರಿಮೆಂಟ್ ಕೂಡ ಹಾಕಿಕೊಂಡಿದೆಯಂತೆ.

ಎಷ್ಟು ಮೊತ್ತಕ್ಕೆ ಸೇಲ್ ಆಗಿದೆ

ನಿರ್ಮಾಪಕರು ಹೇಳುವ ಪ್ರಕಾರ ಕನ್ನಡದಲ್ಲಿ ಒಬ್ಬ ನಟ ಪಡೆಯುವ ಸಂಭಾವನೆ ಮೊತ್ತಕ್ಕೆ 'ಕರಿಯ-2' ಚಿತ್ರದ ರೀಮೇಕ್ ಹಕ್ಕು ಖರೀದಿಯಾಗಿದೆಯಂತೆ.

English summary
Ganapa Fame Santhosh Starrer Kannada Movie 'Kariya-2' Remake rights in demand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada