»   » ದರ್ಶನ್ ಹಾದಿಯಲ್ಲಿ ಹೆಜ್ಜೆ ಇಡ್ತಾರ ಈ ನಟ.?

ದರ್ಶನ್ ಹಾದಿಯಲ್ಲಿ ಹೆಜ್ಜೆ ಇಡ್ತಾರ ಈ ನಟ.?

Posted By:
Subscribe to Filmibeat Kannada
Kariya 2, Kannada Movie will release on October 13th | Filmibeat Kannada

'ಮೆಜೆಸ್ಟಿಕ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಆದ ನಟ ದರ್ಶನ್ ಗೆ ಹೊಸ ರೂಪ ಕೊಟ್ಟ ಸೂಪರ್ ಹಿಟ್ ಸಿನಿಮಾ 'ಕರಿಯ'. ಈ ಚಿತ್ರದ ಯಶಸ್ಸಿನ ನಂತರ ದರ್ಶನ್ ಚಾಲೆಂಜಿಂಗ್ ಸ್ಟಾರ್ ಪಟ್ಟಕ್ಕೇರಿದರು.

ಇಲ್ಲಿಂದ ದರ್ಶನ್ ಅವರ ಇಮೇಜ್ ಪಕ್ಕಾ ಮಾಸ್ ಆಗಿ ಬದಲಾಯಿತು. ಮಾಸ್ ಆಡಿಯೆನ್ಸ್, ಮಾಸ್ ಸಿನಿಮಾಗಳಿಗೆ ದರ್ಶನ್ 'ಬಾಸ್' ಆದರು. ಇದೀಗ, 'ಕರಿಯ' ಸ್ಟೈಲ್ ನಲ್ಲೇ ಮಾಸ್ ಮಹಾರಾಜನಾಗಲು ಮತ್ತೊಬ್ಬ ನಟ ಸಜ್ಜಾಗಿದ್ದಾರೆ.

ಬಹುಶಃ ಈ ಚಿತ್ರದ ನಂತರ ಈ ನಟನ ಇಮೇಜ್ ಕಂಪ್ಲೀಟ್ ಬದಲಾಗುತ್ತೆ ಎಂಬ ವಿಶ್ವಾಸದಲ್ಲಿದೆ ಗಾಂಧಿನಗರ. ಅಷ್ಟಕ್ಕೂ, ಈ ನಟ ಯಾರು? ಅದು ಯಾವ ಸಿನಿಮಾ ಎಂದು ತಿಳಿಯಲು ಮುಂದೆ ಓದಿ......

ದರ್ಶನ್ ಹಾದಿಯಲ್ಲಿ ಸಂತೋಷ್

'ಗಣಪ' ಚಿತ್ರದ ನಂತರ ನಟ ಸಂತೋಷ್ ಮತ್ತೊಂದು ಮಾಸ್ ಸಿನಿಮಾ ಮೂಲಕ ಎಂಟ್ರಿ ಕೊಡ್ತಿದ್ದಾರೆ. ಇದನ್ನ ನೋಡಿದ ಸ್ಯಾಂಡಲ್ ವುಡ್ ಮಂದಿ ಚಾಲೆಂಜಿಂಗ್ ಸ್ಟಾರ್ ಅವರ ಹಾದಿಯಲ್ಲಿ ಸಾಗಲಿದ್ದಾರೆ ಎನ್ನುತ್ತಿದ್ದಾರೆ.

ವಿಡಿಯೋ: ಆ 'ಕರಿಯ'ನಂತಲ್ಲ ಈ ಹೊಸ 'ಕರಿಯ'

ಅಂದು 'ಕರಿಯ' ಇಂದು 'ಕರಿಯ-2'

ಅಂದು ದರ್ಶನ್ ಅಭಿನಯದ 'ಕರಿಯ' ಚಿತ್ರ ಮೂಡಿಬಂದಿತ್ತು. ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ದರ್ಶನ್ ಗೆ ಹೊಸ ಇಮೇಜ್ ನೀಡಿತ್ತು. ಇಂದು 'ಕರಿಯ-2' ಚಿತ್ರ ತಯಾರಾಗಿದೆ. ಸಂತೋಷ್ ಗೆ ಈ ಸಿನಿಮಾ ಹೊಸ ಇಮೇಜ್ ನೀಡುವ ಭರವಸೆಯಲ್ಲಿದೆ.

'ಕರಿಯ-2' ಟ್ರೈಲರ್ ರಿಲೀಸ್ ಮಾಡಿದ್ದ ಡಿ-ಬಾಸ್

ಸಂತೋಷ್ ಅಭಿನಯದ 'ಕರಿಯ-2' ಚಿತ್ರದ ಟ್ರೈಲರ್ ನ್ನ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದರು. ಚಿತ್ರದ ಟ್ರೈಲರ್ ನೋಡಿ ದರ್ಶನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅನೇಕಲ್ ಬಾಲರಾಜ್ ನಿರ್ಮಾಣ

ಅಂದ್ಹಾಗೆ, ಅಂದು ದರ್ಶನ್ ಅಭಿನಯಿಸಿದ್ದ ಕರಿಯ ಚಿತ್ರವನ್ನ ನಿರ್ಮಾಣ ಮಾಡಿದ್ದ ಅನೇಕಲ್ ಬಾಲರಾಜ್ ಅವರೇ, ಇಂದು ಕರಿಯ-2 ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ, ನಟ ಸಂತೋಷ್, ಆನೇಕಲ್ ಬಾಲರಾಜ್ ಅವರ ಪುತ್ರ.

ಅಕ್ಟೋಬರ್ 13ಕ್ಕೆ 'ಕರಿಯ'

ಪ್ರಭು ಶ್ರೀನಿವಾಸ್ ಪ್ರಭು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕರಣ್ ಬಿ ಕೃಪಾ ಸಂಗೀತ ನೀಡಿದ್ದಾರೆ. ನಟಿ ಮಯೂರಿ ನಾಯಕಿ ಸಂತೋಷ್ ಗೆ ಜೋಡಿ ಆಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಅಕ್ಟೋಬರ್ 13ಕ್ಕೆ 'ಕರಿಯ-2' ಸಿನಿಮಾ ತೆರೆಕಾಣಲಿದೆ.

English summary
Kannada Actor Santhosh starrer Kannada Movie 'Kariya 2' will release on october 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada