For Quick Alerts
  ALLOW NOTIFICATIONS  
  For Daily Alerts

  ರಸ್ತೆ ಅಪಘಾತದಲ್ಲಿ 'ಕರಿಯ' ಸಿನಿಮಾದ ನಿರ್ಮಾಪಕ ಅನೇಕಲ್ ಬಾಲರಾಜ್ ನಿಧನ!

  |

  ಭಾನುವಾರ ( ಮೇ 15) ಬೆಳ್ಳಂಬೆಳಗ್ಗೆ ಸ್ಯಾಂಡಲ್‌ವುಡ್‌ಗೆ ಶಾಕಿಂಗ್ ಸುದ್ದಿಯೊಂದು ಮುಟ್ಟಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕರಿಯಾ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದರು.

  'ಕರಿಯ' ಸಿನಿಮಾ ಬಳಿಕ ಆನೇಕಲ್ ಬಾಲರಾಜ್ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡ ಪ್ರಮುಖ ನಿರ್ಮಾಪಕರಲ್ಲಿ ಆನೇಕಲ್ ಬಾಲರಾಜ್‌ ಕೂಡ ಒಬ್ಬರಾಗಿದ್ದರು. ಇತ್ತೀಚೆಗೆ ತಮ್ಮ ಪುತ್ರನ ಸಿನಿಮಾಗಳನ್ನೇ ಹೆಚ್ಚು ನಿರ್ಮಾಣ ಮಾಡಿದ್ದಾರೆ.

  ಬೆಂಗಳೂರಿನ ಜೆಪಿ ನಗರದಲ್ಲಿ ಅಪಘಾತ

  ಇಂದು (ಮೇ 15) ಜೆಪಿ ನಗರದಲ್ಲಿ ಬೆಳಗ್ಗೆ ಆನೇಕಲ್ ಬಾಲರಾಜ್ ವಾಕಿಂಗ್ ಹೋಗಿದ್ದರು. ವಾಕ್ ಮಾಡುವಾಗ, ಆನೇಕಲ್ ಬಾಲರಾಜ್ ಅವರಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಪುಟ್‌ಪಾತ್ ತಲೆ ಹೊಡೆದು ಗಂಭೀರ ಗಾಯಗೊಂಡಿದ್ದರು ಎನ್ನಲಾಗುತ್ತಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿರ್ಮಾಪಕ ಆನೇಕಲ್ ಬಾಲರಾಜ್ ಕೊನೆಯುಸಿರೆಳೆದಿದ್ದಾರೆ.

  ಹಲವು ಸಿನಿಮಾ ನಿರ್ಮಾಣಗಳ ಮೂಲಕ ಸಿನಿಮಾರಂಗ ಚಿರಪರಿಚಿತರಾಗಿದ್ದ ಆನೇಕಲ್ ಬಾಲರಾಜ್ ಅವರಿಗೆ 58 ವರ್ಷ ವಯಸ್ಸಾಗಿತ್ತು. ದಿಢೀರನೇ ಇಂತಹದ್ದೊ ಶೋಕದ ಸುದ್ದಿ ಸ್ಯಾಂಡಲ್‌ವುಡ್‌ಗೆ ಆಘಾತವನ್ನುಂಟು ಮಾಡಿದೆ. ತಂದೆಯ ಅನಿರೀಕ್ಷಿತ ಸಾವು ನಟ ಸಂತೋಷ್ ಮತ್ತು ಅವರ ಕುಟುಂಬಕ್ಕೂ ಆಘಾತವಾಗಿದೆ. ಆನೇಕಲ್ ಬಾಲರಾಜ್ ಅವರ ಅಪಘಾತದ ಪ್ರಕರಣ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  ಆನೇಕಲ್ ಬಾಲರಾಜ್ ನಿರ್ಮಾಣದ ಸಿನಿಮಾಗಳು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕರಿಯ', ಪುತ್ರ ಸಂತೋಷ್ ಅಭಿನಯದ 'ಕರಿಯ 2', 'ಗಣಪ', 'ಬರ್ಕ್ಲಿ' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಪುತ್ರ ಸಂತೋಷ್‌ರನ್ನು ಸಿನಿಮಾ ನಟನನ್ನಾಗಿ ಮಾಡಲು ಸಾಕಷ್ಟು ಶ್ರಮಿಸಿದ್ದರು. ಇತ್ತೀಚೆಗೆ ಪುತ್ರನಿಗಾಗಿಯೇ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದರು.

  English summary
  Kariya Movie Producer Anekal Balaraj Died In An Accident in Bengaluru, Know More.
  Monday, May 16, 2022, 8:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X