"ಅವಳ್ಯಾವಳೋ ಹೇಳ್ತಿದ್ಲು, ಬೆಳೆದಿರೋದು ನೋಡಿ ಉರ್ಕೊಂಡ್ ಬಿಟ್ವಿ ಅಂತ"; ಧ್ರುವ ಲೇಡಿ ಫ್ಯಾನ್‌ಗೆ ದರ್ಶನ್ ಫ್ಯಾನ್ ತಿರುಗೇಟು

ನಟ ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಧ್ರುವ ಈ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. ದರ್ಶನ್ ಅವರಲ್ಲಿ ನನಗೆ ಕೆಲ ಪ್ರಶ್ನೆಗಳಿಗೆ ಅದಕ್ಕೆ ಉತ್ತೆ ಬೇಕಿದೆ ಎಂದು ಹೇಳಿದ್ದಾರೆ. ಇತ್ತ ಇಬ್ಬರ ಅಭಿಮಾನಿಗಳ ನಡುವೆ ಕೂಡ ಶೀತಲ ಸಮರ ನಡೆಯುತ್ತಿದೆ.

'ಮಾರ್ಟಿನ್' ಸಿನಿಮಾ ಟ್ರೈಲರ್ ಬಿಡುಗಡೆ ವೇಳೆ ಧ್ರುವ ಸರ್ಜಾ ಅಭಿಮಾನಿಗಳು ಭಾರೀ ರಂಪಾಟ ಮಾಡಿದ್ದರು. ಅದೇ ಸಮಯದಲ್ಲಿ ಒರಿಜಿನಲ್ ಡಿಬಾಸ್ ಯಾರು? ಎನ್ನುವ ಪ್ರಶ್ನೆ ಎತ್ತಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ದರ್ಶನ್ ಅವರನ್ನು ಡಿಬಾಸ್ ಎಂದು ಕರೆಯುತ್ತಾರೆ. ಇದೇ ಟೈಟಲ್‌ಗಾಗಿ ಧ್ರುವ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

Kariya Re-release Darshan Fan Counter to Dhruva sarja Lady Fan

ಒರಿಜಿನಲ್ ಡಿ ಬಾಸ್ ಧ್ರುವ ಸರ್ಜಾ ಎಂದು ಬ್ಯಾನರ್ ಮಾಡಿಸಿ ಜೈಕಾರ ಹಾಕಿದ್ದರು. ಇದಕ್ಕೆ ದರ್ಶನ್ ಫ್ಯಾನ್ಸ್ ಸಹ ತಿರುಗೇಟು ನೀಡಿದ್ದರು. ಗೂಗಲ್ ಮಾಡಿದರೆ ಗೊತ್ತಾಗುತ್ತದೆ ನಿಜವಾದ ಡಿಬಾಸ್ ಯಾರು ಅಂತ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯಿತು. ಪರಸ್ಪರ ಕೆಸರೆರಚಾಟ ಜೋರಾಗಿತ್ತು.

ಅವತ್ತು 'ಮಾರ್ಟಿನ್' ಟ್ರೈಲರ್ ಲಾಂಚ್ ವೇಳೆ ಮಾಧ್ಯಮಗಳ ಮುಂದೆ ಧ್ರುವ ಸರ್ಜಾ ಫ್ಯಾನ್ಸ್ ಆರ್ಭಟಿಸಿದ್ದರು. ಇದೀಗ ದರ್ಶನ್ ನಟನೆಯ 'ಕರಿಯ' ಸಿನಿಮಾ ರೀ-ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ಮಾತನಾಡುತ್ತಾ ಧ್ರುವ ಸರ್ಜಾ ಫ್ಯಾನ್ಸ್‌ಗೆ ತಿರುಗೇಟು ನೀಡಿದ್ದಾರೆ.

Kariya Re-release Darshan Fan Counter to Dhruva sarja Lady Fan

ಕೆಲವರು ಬಹಳ ಕೆಟ್ಟದಾಗಿಯೇ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ. ಧ್ರುವ ಸರ್ಜಾ ಫ್ಯಾನ್ಸ್‌ಗೆ ಕೌಂಟರ್ ಕೊಟ್ಟಿದ್ದಾರೆ. ಅದರಲ್ಲೂ ಒಬ್ಬರ ಅವಾಚ್ಯ ಮಾತುಗಳು ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಮಹಿಳಾ ಅಭಿಮಾನಿ ಬಗ್ಗೆ ಅವಹೇಳಕಾರಿ ಪದಗಳನ್ನು ಬಳಸಿ ನಿಂದಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ಅಭಿಮಾನಿಗಳ ಹುಚ್ಚು ಅಭಿಮಾನ ಯಾವ ಮಟ್ಟಕ್ಕೆ ಇಳಿದುಬಿಡ್ತು ಎನಿಸದೇ ಇರದು. ಆತ ಬಳಸಿರುವ ಕೆಟ್ಟ ಪದಗಳನ್ನು ಬರೆಯೋಕೆ ಸಾಧ್ಯವಾಗುವಂತಿಲ್ಲ.

"ಒರಿಜಿನಲ್ ಡಿಬಾಸ್ ಅಂತ ಓಡಾಡ್ತಾರಲ್ಲ, ಅವರು ಒರಿಜಿನಲ್ ಟ್ಯಾಗ್‌ಲೈನ್ ಬೇಕು. ನಮಗೆ ಯಾವ ಟ್ಯಾಗ್‌ಲೈನ್ ಬೇಡ. ಡಿಬಾಸ್ ಅಂದ್ರೆ ಎಲ್ಲರಿಗೂ ಗೊತ್ತು. ಇಂಟರ್‌ನೆಟ್‌ನಲ್ಲಿ ಹುಡುಕಿದರೆ ಸಿಗುತ್ತದೆ. ಅವಳ್ಯಾವಳೋ ಹೇಳಿದ್ಲು, ಬೆಳೆದಿರೋದು ನೋಡಿ ಉರ್ಕೊಂಡ್ ಬಿಟ್ವಿ ಅಂತ. ಬೆಳೆಸಿದ್ದೇ ನಾವು. 'ಅದ್ಧೂರಿ' ಫಿಲ್ಮ್‌ ಬಂದಾಗ ಚಡ್ಡಿ ಹಾಕೋಕ್ಕೆ ಬರ್ತಿತ್ತೋ ಬರ್ತಿರ್ಲಿಲ್ವೋ ಗೊತ್ತಿಲ್ಲ. ಈಗ ಹೇಳ್ತಾಳೆ" ಅಂತ ಕೆಟ್ಟ ಪದಗಳನ್ನು ಬಳಸಿ ಮಾತನಾಡಿರುವುದು ವೈರಲ್ ಆಗುತ್ತಿದೆ.

ಸ್ಟಾರ್ ನಟರ ಅಭಿಮಾನಿಗಳ ನಡುವೆ ತಿಕ್ಕಾಟ ಇಂದು ನಿನ್ನೆಯದಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ಸ್ ಜಾಸ್ತಿ ಆಗಿದೆ. ತಮ್ಮ ನಟನ ಪರ ವಹಿಸಿ ಮತ್ತೊಬ್ಬ ನಟನನ್ನು ಅಸಭ್ಯವಾಗಿ ನಿಂದಿಸುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಈ ರೀತಿ ಬಹಿರಂಗವಾಗಿ ಬಹಳ ಅವಾಚ್ಯ ಪದಗಳನ್ನು ಬಳಸಿ ಮಾಧ್ಯಮಗಳ ಮುಂದೆ ಮಾತನಾಡುವುದು ಎಷ್ಟು ಸರಿ? ಇದು ನಿಜಕ್ಕೂ ಕೆಟ್ಟ ಬೆಳವಣಿಗೆ.

ನಟರು ತಮ್ಮ ಅಭಿಮಾನಿಗಳಿಗೆ ಈ ಬಗ್ಗೆ ಕಿವಿಮಾತು ಹೇಳಬೇಕಿದೆ. ಕೆಲ ದಿನಗಳ ಹಿಂದೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ವಿಜಯಲಕ್ಷ್ಮಿ ದರ್ಶನ್, ಮೀನಾ ತೂಗುದೀಪ ಅವರ ಬಗ್ಗೆಯೂ ಅವಾಚ್ಯ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿತ್ತು. ಇದೀಗ ಮಾಧ್ಯಮಗಳ ಕ್ಯಾಮರಾ ಮುಂದೆಯೇ ಮಾತನಾಡುತ್ತಿದ್ದಾರೆ.

ಇತ್ತೀಚೆಗೆ ಡಿ ಕಂಪನಿ ಅಭಿಮಾನಿ ಬಳಗದಿಂದ ವಿಶೇಷ ಮನವಿ ಮಾಡಲಾಗಿತ್ತು. "ನಮ್ಮ ಪ್ರೀತಿಯ ಡಿ ಬಾಸ್‌ರವರು ಆರೋಪ ಮುಕ್ತರಾಗಿ ಬರುವವರೆಗೂ ಯಾವುದೇ ಮಾಧ್ಯಮ ಹಾಗೂ ಬೇರೆ ನಟರುಗಳ ಅಭಿಮಾನಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕಾಗಿ ವಿನಂತಿ. ನಮ್ಮಿಂದ ಬಾಸ್‌ಗೆ ಯಾವುದೇ ತೊಂದರೆಯಾಗದಿರಲಿ" ಎಂದು ಪೋಸ್ಟ್ ಮಾಡಿದ್ದರು.

More from Filmibeat

English summary
Darshan Fan disparaging comments on Dhruva sarja Lady Fan goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X