ಏನ್ ಪ್ರೇಮ್ ಅವರೇ,ದರ್ಶನ್ ಅವತ್ತು ನಿಮಗೆ 'ಪುಡಾಂಗ್' ಅಂದಿದ್ದು ಮರೆತುಹೋಯ್ತಾ...?

By ಫಿಲ್ಮಿಬೀಟ್ ಡೆಸ್ಕ್

ಒಂದು ಕಡೆ ಜೈಲಿನಲ್ಲಿ ದರ್ಶನ್ ನೆಮ್ಮದಿಯಾಗಿದ್ದಾರೆ. ಮತ್ತೊಂದು ಕಡೆ ದರ್ಶನ್ ಪ್ರಭಾವಳಿಯನ್ನು ಬಳಸಿಕೊಂಡು ಅವರ ಗತಕಾಲದ ಸಿನಿಮಾಗಳನ್ನು ಕೆಲವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಈ ವಾರ ಕರುನಾಡಿನ ಚಿತ್ರಮಂದಿರಗಳಲ್ಲಿ ಕರಿಯ ಮರು ಬಿಡುಗಡೆಯಾಗಲಿದೆ. ಆದರೆ ವಿಷಯ ಅದಲ್ಲ. ವಿಷಯ ಇರುವುದು ಪ್ರೇಮ್ ಮತ್ತು ವ್ಯಕ್ತವಾದ ಠೀಕೆಯ ಕುರಿತು.

ಹೌದು, ಸಿನಿಮಾ ರಿಲೀಸ್ ಗೂ ಮುನ್ನವೇ ನಿರೀಕ್ಷೆಗೂ ಮೀರಿ ಮಾರ್ಕೆಟ್ ಮಾಡುವ ಬುದ್ದಿವಂತ ನಿರ್ದೇಶಕರ ಪೈಕಿ ಅಗ್ರಸ್ಥಾನದಲ್ಲಿರುವ ಪ್ರೇಮ್, ತಮ್ಮ ಕರಿಯ ಮರು ಬಿಡುಗಡೆಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಲದಕ್ಕೆ ಶಾಂತಿ ತಾಳ್ಮೆ ಹಾಗೂ ಪ್ರೀತಿ ಇಂದ ಕರಿಯನನ್ನು ಹರಸಿ ಹಾರೈಸಿ, ಯಾವುದೇ ಅತಿರೇಕಗಳನ್ನು ಮಾಡದೇ ಹಾಗೂ ನಿಮ್ಮ online ಬರವಣಿಗೆಗಳು ಬೇರೆಯವರಿಗೆ ನೋವುತರದಿರಲಿ, ದರ್ಶನ್ ತೂಗುದೀಪ ಕಾನೂನು ಮುಕ್ತರಾಗಿ ಆದಷ್ಟು ಬೇಗ ಹೊರಗೆ ಬಂದು ನಿಮ್ಮ ನಮ್ಮ ಜೊತೆ ಬೆರೆಯಲಿ, ಬೆಳಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ ಎಲ್ಲರಿಗೂ ಒಳ್ಳೆಯದಾಗಲಿ ಎಂದೆಲ್ಲ ಬರೆದುಕೊಂಡಿದ್ದರು.

Kariya Re-release Netizens Ask Director Prem Have You Forgotten What Darshan Said to You

ಆದರೆ ಇದು ಹಲವರಿಗೆ ಇಷ್ಟ ಆಗಿಲ್ಲ. ದರ್ಶನ್ ಪುಡಾಂಗ್ ಎಂದು ಕರೆದಿದ್ದನ್ನು ಪ್ರೇಮ್ ಮರೆತರು ಪ್ರೇಕ್ಷಕರು ಮರೆತಿಲ್ಲ. ಹೀಗಾಗಿಯೇ ಕರಿಯ ಚಿತ್ರವನ್ನು ಕಣ್ತುಂಬಿಕೊಳ್ಳಿ ಎಂದು ಪ್ರೇಮ್ ಹೇಳಿದ ಬೆನ್ನಲ್ಲಿಯೇ ಅನೇಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮದು ನಾಲಿಗೆನಾ..? ಎನ್ನುವ ಪ್ರಶ್ನೆಯನ್ನು ಕೂಡ ಪ್ರೇಮ್ ಅವರಿಗೆ ಕೇಳಿದ್ದಾರೆ.

ಒಬ್ಬರು ನಿಮಗಂತು ಮಾನ ಮರ್ಯಾದೆ ಇಲ್ಲ, ಪುಡಂಗ್ ಅಂದ್ರೂ ಫ್ಲಾಪ್ ದಾಸ ಕಾಲಿಗ್ ಬಿದ್ದ ಅಂತ ಎಲ್ಲ ಮರಿತಿರ ಎಂದರೆ ಮತ್ತೊಬ್ಬರು ಗತ್ತು, ಮರ್ಯಾದೆ ಪ್ರಶ್ನೆ ಬಂದರೆ ಉಮಾಪತಿ ಶ್ರೀನಿವಾಸ್ ಗೌಡ ಯಾರಿಗೂ ಕೇರ್ ಮಾಡಲ್ಲ ಅಂದಿದ್ದಾರೆ. ಉಮಾಪತಿ ಅವರಿಂದ ಚೂರು ಪಾರು ಕಲಿರಿ ಎಂದಿದ್ದಾರೆ. ಇನ್ನೊಬ್ಬರು ದರ್ಶನ್ ಜೊತೆ ಸಿನಿಮಾ ಮಾಡಲ್ಲ ಅಂತ ಹಿಂದೆ ಹೇಳಿದವರು ನೀವೇ, ಮಾಡ್ತಿರೋದು ಕೂಡ ನೀವೇ, ಇವಾಗ ನಾಲಿಗೆ ಚಪ್ಪಲಿ ಆಯಿತಾ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರೆ, ಮತ್ತೂ ಒಬ್ಬರು ನಿನ್ನಂತ ಪುಡಾಂಗ್ ಗಳಿಂದ ಅವ್ನು ಇವತ್ತು ಕಂಬಿ ಎಣಿಸ್ತಾ ಇದಾನೆ ಎಂದಿದ್ದಾರೆ. ಥ್ಯಾಂಕ್ಯೂ ಪುಡಾಂಗ್ ಸರ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಅವತ್ತು ಪ್ರೇಮ್ ಅವರಿಗೆ ದರ್ಶನ್ ಪುಡಾಂಗ್ ಎಂದು ಕರೆದಿದ್ದ ವಿಡಿಯೋವನ್ನು ಕೂಡ ಅನೇಕರು ಶೇರ್ ಮಾಡಿದ್ದಾರೆ.

ಅಂದ್ಹಾಗೇ 2021ರಲ್ಲಿ ಪ್ರೇಮ್ ಅವರನ್ನು ದರ್ಶನ್ ಪುಡಾಂಗ್ ಎಂದು ಕರೆದಾಗ, ನೊಂದು ಬೆಂದು ಹೋಗಿದ್ದ ಪ್ರೇಮ್ ನಾನು ಕರಿಯ ಸಿನಿಮಾ ಮಾಡಬೇಕಾದರೆ ಯಾವ ಪುಡಾಂಗನೂ ಅಲ್ಲ, ನಂಗೆ ಕೊಂಬು ಇರಲಿಲ್ಲ ಅಂದಿದ್ದರು. ನಾನೊಬ್ಬ ಸಾಮಾನ್ಯ ನಿರ್ದೇಶಕ ರಾಜ್ ಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜಿನಿಕಾಂತ್ ನನಗೆ ಒಬ್ಬ ಒಳ್ಳೇಯ ನಿರ್ದೇಶಕ ಅಂತ ಬೆನ್ನು ತಟ್ಟಿದರು. ಇಡೀ ಕರ್ನಾಟಕದ ಜನತೆ ಹರಸಿ ಹಾರೈಸಿ ನನಗೆ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟರು. ಆದರೂ ಆಗಲೂ ನನಗೆ ಕೊಂಬು ಬರಲಿಲ್ಲ. ನಾನು ನನ್ನದೇ ಆದ ಸ್ಟೈಲ್‌ನಲ್ಲಿ ಸಿನಿಮಾ ಮಾಡ್ಕೊಂಡು ಬಂದವನು ಎಂದು ಪ್ರೇಮ್ಸ್ ಹೇಳಿದ್ದರು. ದರ್ಶನ್ ಅವ್ರೆ ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗೆ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು, ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ಬರ ಬಗ್ಗೆ ಮಾತನಾಡಬೇಕಾದರೆ ಯೋಚಿಸಿ ಮಾತಾಡಿ ದರ್ಶನ್ ಅವರೇ... ಎಂದು ಹೇಳಿದ್ದರು. ಈಗ ಅವರೇ ತಾವು ಆಡಿದ ಮಾತುಗಳನ್ನು ಮರೆತಿರುವುದು ಮಾತ್ರ ದುರದೃಷ್ಟಕರ.

More from Filmibeat

Read more about: prem darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X