ಕರ್ನಾಟಕ ವಿಧಾನಸಭೆ ಚುನಾವಣೆ: ಮನೆಯಿಂದಲೇ ಮತ ಚಲಾಯಿಸಿದ ಹಿರಿಯ ನಟಿ ಲೀಲಾವತಿ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಂಚೆ ಮತದಾನ ಆರಂಭವಾಗಿದೆ. ಹಿರಿಯ ನಾಗರೀಕರು, ಅಂಗವಿಕಲರಿಗೆ ಚುನಾವಣೆ ಆಯೋಗ ವಿಶೇಷ ಸೌಲಭ್ಯ ಕಲ್ಪಿಸಿರುವುದರಿಂದ ಕೆಲವರು ಈಗಾಗಲೇ ಮತ ಚಲಾಯಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಕೂಡ ಮನೆಯಿಂದಲೇ ತಮ್ಮ ಮತ ಚಲಾಯಿಸಿದ್ದಾರೆ. ಈ ರೀತಿ ಮತ ಚಲಾಯಿಸಿದ ಮೊದಲ ನಟಿ ಎನಿಸಿಕೊಂಡಿದ್ದಾರೆ.

80 ವರ್ಷ ತುಂಬಿದ ನಾಗರೀಕರು, ಅಂಗವಿಕಲರು ಹಾಗೂ ಪತ್ರಕರ್ತರಿಗೆ ಬ್ಯಾಲಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಟಿ ಲೀಲಾವತಿ ಮಗ ವಿನೋದ್ ರಾಜ್ ಸಹಾಯದಿಂದ ಮನೆಯಿಂದಲೇ ಮತ ಚಲಾಯಿಸಿದ್ದಾರೆ. ನೆಲಮಂಗಲ ತಾಲೂಕಿನ ಮೈಲನಹಳ್ಳಿಯ ನಿವಾಸದಿಂದ ಹಿರಿಯ ನಟಿ ಮತದಾನ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ವೈರಲ್ ಆಗ್ತಿದೆ.

Karnataka Assembly election, 2023: Veteran Actress Leelavathi Cast her vote through postal ballot

ವಯಸ್ಸು ಹಾಗೂ ಆರೋಗ್ಯದ ಕಾರಣ ನೀಡಿ ಮತದಾರರು ಮತ ಚಲಾಯಿಸದೇ ಇರಬಾರದು ಎನ್ನುವ ಕಾರಣಕ್ಕೆ ಈ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹಿಂದೆ 2020ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರಯೋಗವನ್ನು ಮೊದಲ ಬಾರಿಗೆ ಮಾಡಲಾಗಿತ್ತು. ಇನ್ನು ಮತಗಟ್ಟೆಯ ರೀತಿಯಲ್ಲೇ ಇಲ್ಲೂ ಗೌಪ್ಯತೆ ಹಾಗೂ ಮತದಾನದ ಪ್ರಕ್ರಿಯೆಗಳನ್ನು ಪಾಲಿಸಲಾಗುತ್ತದೆ.

ಚುನಾವಣೆ ಆಯೋಗದ ವೆಬ್‌ಸೈಟ್ ಅಥವಾ ವೋಟರ್ ಹೆಲ್ಪ್ಲೈನ್ ಅಥವಾ ಆ್ಯಪ್‌ನಲ್ಲಿ ಮತದಾರರು ನೋಂದಣಿ ಮಾಡಿಕೊಳ್ಳಬೇಕು. ನಂತರ ಅಧಿಕಾರಿಗಳು ಮನೆಗೆ ಬಂದು ಮತದಾನದ ಪ್ರಕ್ರಿಯೆ ನಡೆಸಯತ್ತಾರೆ. 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಎಲ್ಲರಿಗೂ ಇದು ಅನ್ವಯವಾಗುವುದಿಲ್ಲ. ಮತಗಟ್ಟೆಗೆ ಬಂದು ಮತ ಚಲಾಯಿಸಬಹುದು. ಕರ್ನಾಟಕದಲ್ಲಿ ಸಾಕಷ್ಟು ಜನ ಈಗಾಗಲೇ ಈ ರೀತಿ ಮತ ಚಲಾಯಿಸಲು ನೋಂದಣಿ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ನಾವು ಮತಗಟ್ಟೆಗೆ ಬಂದು ಮತ ಚಲಾಯಿಸುತ್ತೇವೆ ಎಂದಿದ್ದಾರೆ.

Karnataka Assembly election, 2023: Veteran Actress Leelavathi Cast her vote through postal ballot

ತಮ್ಮ ನಿವಾಸದಿಂದಲೇ ಮತ ಚಲಾಯಿಸಿ ಮಾತನಾಡಿರುವ ನಟಿ ಲೀಲಾವತಿ "ಚುನಾವಣೆ ಆಯೋಗ ಈ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಹಳ ಅನುಕೂಲವಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಎಲ್ಲರೂ ಕೂಡ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮನೆಯಿಂದಲೇ ಮತ ಚಲಾಯಿಸಿದ್ದು ಸಂತಸ ತಂದಿದೆ" ಎಂದಿದ್ದಾರೆ.

More from Filmibeat

English summary
Karnataka Assembly election, 2023: Veteran Actress Leelavathi Cast her vote through postal ballot. Election Commission of India introduces Election Commission of India introduces vote from home option above the age of 80 in the Karnataka. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X