ಕನ್ನಡ ಸಿನಿಮಾ ತಾರೆಯರು ನಾಳೆ(ಮೇ10) ಎಲ್ಲಿ ಮತ ಚಲಾಯಿಸುತ್ತಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯವಾಗಿದೆ. ಸಿನಿಮಾ ತಾರೆಯರು ಕೂಡ ಈ ಬಾರಿ ಪ್ರಚಾರ ಕಣಕ್ಕೆ ಇಳಿದು ರಂಗೇರಿಸಿದ್ದರು. ಇದೀಗ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಸಿನಿಮಾ ತಾರೆಯರು ಕೂಡ ಪ್ರತಿ ಬಾರಿಯಂತೆ ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಕೆಲವರು ಕಳೆದ ಕೆಲ ದಿನಗಳಿಂದ ಶೂಟಿಂಗ್‌ನಿಂದ ಬ್ರೇಕ್ ಪಡೆದು ಪ್ರಚಾರದಲ್ಲಿ ಭಾಗಿ ಆಗಿದ್ದರು.
ಸಿನಿಮಾ ತಾರೆಯರು ಮತದಾನ ಮಾಡುವುದು ಬಹಳ ಅವಶ್ಯಕ. ವರ್ಷದಿಂದ ವರ್ಷಕ್ಕೆ ಮತದಾನ ಮಾಡುವ ಪ್ರಮಾಣ ಕಡಿಮೆ ಆಗಿತ್ತಿದೆ. ತಾರೆಯರು ಮತ ಚಲಾಯಿಸುವ ಮೂಲಕ ಮತದಾರರ ಮೇಲೆ ಪರಿಣಾಮ ಬೀರಬಲ್ಲರು. ನೆಚ್ಚಿನ ನಟನಟಿಯರನ್ನು ನೋಡಿ ಅಭಿಮಾನಿಗಳು ಮತ ಚಲಾಯಿಸಲು ಮುಂದಾಗುತ್ತಾರೆ. ಮತಗಟ್ಟೆಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುವ ಸಾಧ್ಯತೆ ಇದೆ. ಉಳಿದಂತೆ ತಾರೆಯರು ಪ್ರತಿ ಬಾರಿಯಂತ ತಮ್ಮ ತಮ್ಮ ನಿವಾಸದ ಸಮೀಪ ಇರುವ ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ. ಕೆಲವರು ಹುಟ್ಟೂರಿಗೆ ಹೋಗಿ ಹಕ್ಕು ಚಲಾಯಿಸಲಿದ್ದಾರೆ.

ಹಾಗಾದರೆ ಸ್ಟಾರ್ ಕಲಾವಿದರು ಎಲ್ಲೆಲ್ಲಿ ಮತದಾನ ಮಾಡುತ್ತಾರೆ ಎನ್ನುವುದನ್ನು ನೋಡುವುದಾದರೆ ನಟರಾದ ದರ್ಶನ್, ಗಣೇಶ್, ದಿಗಂತ್, ಪ್ರೇಮ್ ದಂಪತಿಗಳು ಆರ್ ಆರ್ ನಗರದಲ್ಲಿ ಮತ ಚಲಾಯಿಸಲಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸದಾ ಶಿವನಗರದಲ್ಲಿ ಹಕ್ಕು ಚಲಾಯಿಸಲಿದ್ದಾರೆ. ಇನ್ನು ಪುಟ್ಟೇನಹಳ್ಳಿಯಲ್ಲಿ ಸುದೀಪ್, ಕತ್ರಿಗುಪ್ಪೆಯಲ್ಲಿ ಯಶ್, ಉಪೇಂದ್ರ, ಬ್ಯಾಟರಾಯನಪುರಲ್ಲಿ ಶಿವರಾಜ್‌ಕುಮಾರ್ ಮತ ಚಲಾಯಿಸಲಿದ್ದಾರೆ.
ಬಹುತೇಕ ಕಲಾವಿದರು ಬೆಂಗಳೂರಿನಲ್ಲೇ ನೆಲೆಸಿದ್ದು ಇಲ್ಲೇ ಮತ ಚಲಾಯಿಸಲಿದ್ಧಾರೆ. ಇನ್ನು ಕುಂದಾಪುರದಲ್ಲಿ ರಿಷಬ್ ಶೆಟ್ಟಿ, ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ, ಅರಸೀಕೆರೆಯಲ್ಲಿ ಧನಂಜಯ್ ಮತ ಚಲಾಯಿಸಲಿದ್ದಾರೆ.

ಇನ್ನುಳಿದಂತೆ ಚಂದನವನದ ತಾರೆಯರು ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ ನೋಡಿ
ರಚಿತಾ ರಾಮ್: ಆರ್ ಆರ್ ನಗರ
ಅಮೂಲ್ಯ: ಆರ್ ಆರ್ ನಗರ
ಅವಿನಾಶ್: ಆರ್ ಆರ್ ನಗರ
ಮಾಳವಿಕಾ: ಆರ್ ಆರ್ ನಗರ
ವಸಿಷ್ಠ ಸಿಂಹ: ಆರ್ ಆರ್ ನಗರ
ಹರಿಪ್ರಿಯಾ: ಆರ್ ಆರ್ ನಗರ
ಯುವರಾಜ್‌ಕುಮಾರ್: ಸದಾಶಿವ ನಗರ
ವಿನಯ್ ರಾಜ್‌ಕುಮಾರ್: ಸದಾಶಿವ ನಗರ
ಕತ್ರಿಗುಪ್ಪೆ ಕ್ಷೇತ್ರದ ಸ್ಟಾರ್ ವೋಟರ್ಸ್
ಸೃಜನ್ ಲೋಕೇಶ್: ಕತ್ರಿಗುಪ್ಪೆ
ಪೂಜಾ ಗಾಂಧಿ: ಕತ್ರಿಗುಪ್ಪೆ
ದುನಿಯಾ ವಿಜಯ್: ಕತ್ರಿಗುಪ್ಪೆ
ಮೇಘನಾ ರಾಜ್: ಜೆಪಿ ನಗರ
ಸುಂದರ್ ರಾಜ್: ಜೆಪಿ ನಗರ
ತಾರಾ ಅನುರಾಧ: ಜೆಪಿ ನಗರ
ಸಪ್ತಮಿಗೌಡ: ಜೆಪಿ ನಗರ
ರಮೇಶ್ ಅರವಿಂದ್: ಜೆಪಿ ನಗರ
ಜಗ್ಗೇಶ್: ಮಲ್ಲೇಶ್ವರಂ
ಕೋಮಲ್: ಮಲ್ಲೇಶ್ವರಂ
ಸುಧಾರಾಣಿ: ಮಲ್ಲೇಶ್ವರಂ
ಬಿ. ಸರೋಜದೇವಿ: ಮಲ್ಲೇಶ್ವರಂ
ಅನಂತ್ ನಾಗ್: ಮಲ್ಲೇಶ್ವರಂ
ಧ್ರುವ ಸರ್ಜಾ: ತ್ಯಾಗರಾಜನಗರ
(ಕೆಆರ್.ರೋಡ್, ಶಾಸ್ತ್ರಿ ನಗರ)
ಶ್ರೀಮುರುಳಿ: ವಸಂತ ನಗರ
ಪ್ರಶಾಂತ್ ನೀಲ್: ವಸಂತ ನಗರ
ಪ್ರೇಮ್: ಚಂದ್ರ ಲೇಔಟ್
ರಕ್ಷಿತಾ ಪ್ರೇಮ್: ಚಂದ್ರ ಲೇಔಟ್
ಭಾರತಿ ವಿಷ್ಣುವರ್ಧನ್: ಜಯನಗರ
ಅನಿರುದ್ದ್: ಜಯನಗರ
ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)
ಚಂದನ್ ಶೆಟ್ಟಿ: ನಾಗರಬಾವಿ
ಸಾಧುಕೋಕಿಲ: ನಾಗರಬಾವಿ
ಶರಣ್: ಹೊಸಕೆರೆಹಳ್ಳಿ
ಶೃತಿ: ಹೊಸಕೆರೆ ಹಳ್ಳಿ
ರವಿಚಂದ್ರನ್: ರಾಜಾಜಿನಗರ
ವಿಕ್ರಂ ರವಿಚಂದ್ರನ್: ರಾಜಾಜಿನಗರ
ಮನೋರಂಜನ್: ರಾಜಾಜಿನಗರ
ಅಜೇಯ್ ರಾವ್: ರಾಜಾಜಿನಗರ
ದ್ವಾರಕೀಶ್: ಹೆಚ್‌ಎಸ್ ಆರ್ ಲೇಔಟ್
ಹರ್ಷಿಕಾ ಪೂಣಚ್ಚ: ಕೆ.ಆರ್.ಪುರ
ಯೋಗರಾಜ್ ಭಟ್: ಗಿರಿ ನಗರ
ಅರ್ಜುನ್ ಜನ್ಯ: ಹೆಬ್ಬಾಳ
ವಿಜಯ್ ರಾಘವೇಂದ್ರ: ಯಲಹಂಕ
ಮಾಲಾಶ್ರೀ: ಶಿವಾಜಿನಗರ
ಬೇರೆ ಜಿಲ್ಲೆಗಳಿಗೆ ಹೋಗಿ ಮತ ಚಲಾಯಿಸುವವರು
ರಾಜ್ .ಬಿ.ಶೆಟ್ಟಿ: ಉಡುಪಿ
ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)
ಆಶಿಕಾ ರಂಗನಾಥ್: ತುಮಕೂರು
ಚಿಕ್ಕಣ್ಣ: ಮೈಸೂರು
ಲೀಲಾವತಿ: ಸೋಲದೇವನಹಳ್ಳಿ
ವಿನೋದ್ ರಾಜ್: ಸೋಲದೇವನ ಹಳ್ಳಿ
ದೊಡ್ಡಣ್ಣ: ಬಿದರುಕಲ್ಲು


Click it and Unblock the Notifications











