'ನೀರ್ ದೋಸೆ'ಗೆ ಬಂಪರ್ ಹೊಡೆದ್ಹಾಗೆ 'ಮುಂಗಾರು ಮಳೆ-2'ಗಾಗೋದು ಡೌಟು!

By Harshitha

ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕಳೆದ ಶುಕ್ರವಾರ 'ಭಾರತ್ ಬಂದ್'ಗೆ ಕರೆ ನೀಡಿತ್ತು. 'ಭಾರತ್ ಬಂದ್'ಗೆ ಸಾರಿಗೆ ಸಂಸ್ಥೆ ಕೈ ಜೋಡಿಸಿದ್ದರಿಂದ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ ಬಸ್ ಗಳು ಬೀದಿಗೆ ಇಳಿಯಲಿಲ್ಲ.

'ಭಾರತ್ ಬಂದ್' ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ ನೀಡಿರ್ಲಿಲ್ಲ. ಇದರಿಂದ ಶುಕ್ರವಾರ ರಿಲೀಸ್ ಆಗಲು ನಿಗದಿ ಆಗಿದ್ದ ಬರೋಬ್ಬರಿ ಎಂಟು ಚಿತ್ರಗಳು ತೆರೆಗೆ ಬಂದವು. ಅದರಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ 'ನೀರ್ ದೋಸೆ' ಚಿತ್ರ ಕೂಡ ಒಂದು.

ಸಾರಿಗೆ ಇಲ್ಲದ ಕಾರಣ, ಪ್ರೇಕ್ಷಕರು ಮನೆಯಿಂದ ಹೊರಗೆ ಬಾರದೆ, 'ನೀರ್ ದೋಸೆ' ಚಿತ್ರಕ್ಕೆ ನಷ್ಟ ಆಗಬಹುದು ಎಂಬ ಆತಂಕ ಚಿತ್ರತಂಡಕ್ಕೆ ಇತ್ತು. ಆದರೂ, 'ನೀರ್ ದೋಸೆ' ರುಚಿ ಸವಿಯಲು ಪ್ರೇಕ್ಷಕರು ಥಿಯೇಟರ್ ಗೆ ನುಗ್ಗಿದ್ರು. ಒಂದು ರೀತಿಯಲ್ಲಿ 'ನೀರ್ ದೋಸೆ' ಸಿನಿಮಾಗೆ ಭಾರತ್ ಬಂದ್ ವರದಾನ ಆಯ್ತು. [ಭಾರತ್ ಬಂದ್ ಪರಿಣಾಮ : 'ನೀರ್ ದೋಸೆ' ಚಿತ್ರಕ್ಕೆ ಲಾಭ.!]

ಈಗ ಈ ಶುಕ್ರವಾರ (ಸೆಪ್ಟೆಂಬರ್ 9) ಇಡೀ ಕರ್ನಾಟಕ 'ಬಂದ್' ಆಗಲಿದೆ. ವಿವಿಧ ಕನ್ನಡ ಪರ ಸಂಘಟನೆಗಳು 'ಕರ್ನಾಟಕ ಬಂದ್'ಗೆ ಕರೆ ನೀಡಿವೆ. ಬಂದ್ ನಿಂದಾಗಿ ಕಳೆದ ವಾರ ಕನ್ನಡ ಚಿತ್ರಕ್ಕೆ ಲಾಭ ಆದ ಹಾಗೆ ಈ ವಾರ ಆಗೋದು ಅಸಾಧ್ಯ. ಮುಂದೆ ಓದಿ....

'ಕರ್ನಾಟಕ ಬಂದ್' ಯಾಕೆ?

'ಕರ್ನಾಟಕ ಬಂದ್' ಯಾಕೆ?

ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 9 ರಂದು (ಶುಕ್ರವಾರ) ಕರ್ನಾಟಕ ಬಂದ್ ಗೆ ಕರೆ ನೀಡಿವೆ. [ಕಾವೇರಿ ವಿವಾದ : ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್]

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಂಬಲ

ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಸಂಘಟನೆಗಳು ಕರೆ ನೀಡಿರುವ 'ಕರ್ನಾಟಕ ಬಂದ್'ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಕೂಡ ಬೆಂಬಲ ನೀಡಿದ್ದಾರೆ.

ಸೆಪ್ಟೆಂಬರ್ 9 ರಂದು ಚಿತ್ರೋದ್ಯಮ ಬಂದ್?

ಸೆಪ್ಟೆಂಬರ್ 9 ರಂದು ಚಿತ್ರೋದ್ಯಮ ಬಂದ್?

ಕರ್ನಾಟಕ ಬಂದ್ ಪರಿಣಾಮ ಸೆಪ್ಟೆಂಬರ್ 9 ರಂದು ಕನ್ನಡ ಚಿತ್ರೋದ್ಯಮದ ಎಲ್ಲಾ ಕಾರ್ಯ ಚಟುವಟಿಕೆಗಳು ಬಂದ್ ಆಗುವ ಸಾಧ್ಯತೆ ಇದೆ.

ಶೂಟಿಂಗ್ ಇಲ್ಲ, ರಿಲೀಸ್ ಕೂಡ ಇಲ್ಲ.!

ಶೂಟಿಂಗ್ ಇಲ್ಲ, ರಿಲೀಸ್ ಕೂಡ ಇಲ್ಲ.!

ಬಂದ್ ನಿಂದಾಗಿ ಸೆಪ್ಟೆಂಬರ್ 9 ರಂದು ಯಾವುದೇ ಚಿತ್ರದ ಶೂಟಿಂಗ್ ನಡೆಯುವುದಿಲ್ಲ. ಹಾಗೆ, ಯಾವ ಚಿತ್ರ ಕೂಡ ಬಿಡುಗಡೆ ಆಗಲ್ಲ ಅಂತ ಹೇಳಲಾಗಿದೆ.

'ಮುಂಗಾರು ಮಳೆ-2' ಗತಿ ಏನು?

'ಮುಂಗಾರು ಮಳೆ-2' ಗತಿ ಏನು?

ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರಿ ಕುತೂಹಲ ಮೂಡಿಸಿರುವ 'ಮುಂಗಾರು ಮಳೆ-2' ಚಿತ್ರದ ಬಿಡುಗಡೆ ದಿನಾಂಕ ಸೆಪ್ಟೆಂಬರ್ 9 ರಂದು ನಿಗದಿ ಆಗಿದೆ. ಆದ್ರೀಗ, 'ಮುಂಗಾರು ಮಳೆ-2' ಈ ಶುಕ್ರವಾರ ಬಿಡುಗಡೆ ಆಗುವುದು ಬಹುತೇಕ ಅನುಮಾನ.

ನಾಡು, ನುಡಿ, ಜಲ ಅಂದ್ರೆ ಎಲ್ಲರೂ ಒಂದಾಗ್ತಾರೆ.!

ನಾಡು, ನುಡಿ, ಜಲ ಅಂದ್ರೆ ಎಲ್ಲರೂ ಒಂದಾಗ್ತಾರೆ.!

ನಾಡು, ನುಡಿ, ಜಲ ವಿಷಯದಲ್ಲಿ ಕನ್ನಡ ಚಿತ್ರರಂಗ ಎಂದೂ ನಿರ್ಲಕ್ಷ್ಯ ತೋರಿಲ್ಲ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ಬಂದ್'ಗೆ ಕರೆ ನೀಡಿರುವುದರಿಂದ 'ಮುಂಗಾರು ಮಳೆ-2' ಚಿತ್ರತಂಡ ಕೂಡ ಬಂದ್ ಗೆ ಕೈ ಜೋಡಿಸುವುದರಲ್ಲಿ ಡೌಟ್ ಬೇಡ.

ಹಾಗಾದ್ರೆ ಚಿತ್ರ ಬಿಡುಗಡೆ ಯಾವಾಗ?

ಹಾಗಾದ್ರೆ ಚಿತ್ರ ಬಿಡುಗಡೆ ಯಾವಾಗ?

ಸಾಮಾನ್ಯವಾಗಿ ಚಿತ್ರಗಳು ತೆರೆ ಕಾಣುವುದು ಶುಕ್ರವಾರ ಅಥವಾ ಗುರುವಾರ. ಈಗಾಗಲೇ 'ಮುಂಗಾರು ಮಳೆ-2' ಚಿತ್ರ ಬಿಡುಗಡೆ ಶುಕ್ರವಾರ ಅಂತ ಅನೌನ್ಸ್ ಆಗಿರುವ ಕಾರಣ ಗುರುವಾರ ಥಿಯೇಟರ್ ಸಿಗಲ್ಲ. ಹೀಗಾಗಿ ಶನಿವಾರ ಬಿಡುಗಡೆ ಆಗುವ ಸಾಧ್ಯತೆ ಇದೆ.

'ಗೋಲಿಸೋಡ' ಚಿತ್ರ ಕೂಡ ಲಿಸ್ಟ್ ನಲ್ಲಿದೆ.!

'ಗೋಲಿಸೋಡ' ಚಿತ್ರ ಕೂಡ ಲಿಸ್ಟ್ ನಲ್ಲಿದೆ.!

ಗಾಂಧಿನಗರದ ಅಂಗಳದಲ್ಲಿ ಸದ್ದು ಮಾಡಿರುವ ಹೊಸಬರ ಸಿನಿಮಾ 'ಗೋಲಿಸೋಡ' ಚಿತ್ರ ಕೂಡ ಸೆಪ್ಟೆಂಬರ್ 9 ರಂದು ರಿಲೀಸ್ ಆಗ್ಬೇಕಿತ್ತು. ಈಗ ಆ ಚಿತ್ರ ಕೂಡ ಶನಿವಾರ ಬಿಡುಗಡೆ ಆಗ್ಬಹುದು.

ಸಂಜೆ ವೇಳೆ ಸಂಪೂರ್ಣ ಚಿತ್ರಣ

ಸಂಜೆ ವೇಳೆ ಸಂಪೂರ್ಣ ಚಿತ್ರಣ

ಸೆಪ್ಟೆಂಬರ್ 9 ರಂದು ನಡೆಸಲು ಕರೆ ನೀಡಿರುವ 'ಕರ್ನಾಟಕ ಬಂದ್'ನಲ್ಲಿ ಕನ್ನಡ ಚಿತ್ರೋದ್ಯಮದ ಕಾರ್ಯ ಚಟುವಟಿಕೆಗಳ ಕುರಿತು ಇಂದು (ಸೆಪ್ಟೆಂಬರ್ 6) ಸಂಜೆ ಹೊತ್ತಿಗೆ ಕ್ಲಾರಿಟಿ ಸಿಗಲಿದೆ.

More from Filmibeat

English summary
Kannada Film Industry is supporting Karnataka Bandh on September 9th to protest against the Supreme Court order to release 15,000 cusecs Cauvery water to Tamil Nadu for 10 days. Hence, Ganesh starrer 'Mungaru Male-2' movie release which is scheduled on Sept 9th, might get postponed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X