For Quick Alerts
  ALLOW NOTIFICATIONS  
  For Daily Alerts

  ''ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥ್ ಅನ್ನು ಕಾಪಾಡಿದ್ದಾರೆ ಯಶ್''

  By ಮೈಸೂರು ಪ್ರತಿನಿಧಿ
  |

  ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗುರುವಾರ ನಡೆದ ಯುವಜನ ಮಹೋತ್ಸವ ಕಾರ್ಯಕ್ರಮಕ್ಕೆ ನಟ ಯಶ್ ಬಾರದಿದ್ದರೆ ಯುವಕರು ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಅವರಿಗೆ ಕಲ್ಲಿನಿಂದ ಹೊಡೆಯುತ್ತಿದ್ದರು. ಯಶ್ ಬಂದಿದ್ದಕ್ಕೆ ಅವರ ಮಾನ ಮರ್ಯಾದೆ ಉಳಿದಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ.

  ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ನಟ ಯಶ್ ಅವರ ವರ್ಚಸ್ಸನ್ನು ಬಿಜೆಪಿ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

  ಮೈಸೂರಿನಲ್ಲಿ ಯಶ್ ಹವಾ! ಭಾರತದ ರಾಕಿಂಗ್ ಸ್ಟಾರ್ ಎಂದ ಸಿಎಂ ಬೊಮ್ಮಾಯಿಮೈಸೂರಿನಲ್ಲಿ ಯಶ್ ಹವಾ! ಭಾರತದ ರಾಕಿಂಗ್ ಸ್ಟಾರ್ ಎಂದ ಸಿಎಂ ಬೊಮ್ಮಾಯಿ

  ಯುವಜನ ಮಹೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾವುದೇ ವ್ಯಕ್ತಿಗಳನ್ನು ನೆನಪಿಸಿಕೊಳ್ಳಲಿಲ್ಲ. ರಾಷ್ಟ್ರ ಧ್ವಜವನ್ನು ಬಳಸಿಕೊಂಡು ಯುವ ಸಮುದಾಯವನ್ನು ಬಿಜೆಪಿಗೆ ಸೆಳೆಯುವ ತಂತ್ರವಾಗಿದೆ. ಯುವಜನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಯುವಕರಿಗಾಗಿ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಲಿಲ್ಲ ಎಂದು ಕುಟುಕಿದರು.

  ಮುಖಭಂಗ ತಪ್ಪಿಸಿಕೊಳ್ಳಲು ಯಶ್ ಬಳಕೆ: ಆರೋಪ

  ಮುಖಭಂಗ ತಪ್ಪಿಸಿಕೊಳ್ಳಲು ಯಶ್ ಬಳಕೆ: ಆರೋಪ

  ಯುವಜನ ಮಹೋತ್ಸವದಲ್ಲಿ ಯುವಕರು ನೆನೆಯುವಂತಹ ಯಾವುದೇ ಕಾರ್ಯಕ್ರಮವನ್ನು ರೂಪಿಸಿರಲಿಲ್ಲ. ಅನಗತ್ಯವಾಗಿ ಮೈಸೂರಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ, ಯಶ್ ಅವರನ್ನು ಬಿಂಬಿಸಿ ಕಾರ್ಯಕ್ರಮ ನಡೆಸಲಾಯಿತು. ಯಶ್ ಬಾರದಿದ್ದರೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಬರುತ್ತಿರಲಿಲ್ಲ. ಇದರಿಂದ ಬಿಜೆಪಿಗೆ ಮುಖಭಂಗವಾಗುತ್ತಿತ್ತು. ಮುಖಭಂಗ ತಪ್ಪಿಸಿಕೊಳ್ಳಲು ಯಶ್ ಅವರನ್ನು ಕಾರ್ಯಕ್ರಮಕ್ಕೆ ಕರೆಸಿದ್ದಾರೆ ಎಂದು ವ್ಯಂಗ್ಯವಾಡಿದರು.

  ''ಸಿಎಂ ಅನ್ನು ಹುದ್ದೆಯಿಂದ ಕೆಳಗಿಳಿಸುವುದು ಪಕ್ಕಾ''

  ''ಸಿಎಂ ಅನ್ನು ಹುದ್ದೆಯಿಂದ ಕೆಳಗಿಳಿಸುವುದು ಪಕ್ಕಾ''

  ಬಸವರಾಜ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವುದು ನೂರಕ್ಕೆ ನೂರರಷ್ಟು ಸತ್ಯ. ಬಿಜೆಪಿ ಮುಖಂಡರಿಗೆ ತಮ್ಮ ಹೇಳಿಕೆಗೆ ತದ್ವಿರುದ್ಧ ನಡೆಯುವುದು ವಾಡಿಕೆಯಾಗಿದೆ. ಈ ಹಿಂದೆ ಜೆ.ಪಿ.ನಡ್ಡಾ ಹಾಗೂ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿ ಬಿಎಸ್‌ವೈ ಅವರನ್ನು ಸಿಎಂ ಹುದ್ದೆಯಿಂದ ಇಳಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಹೇಳಿಕೆ ನೀಡಿದ 20 ನಿಮಿಷಗಳ ನಂತರ ಬಿಎಸ್‌ವೈ ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೊಯ್ಯಲಾಯಿತು. ಬೊಮ್ಮಾಯಿ ಅವರಿಗೂ ಇದೇ ಸ್ಥಿತಿ ಬರಲಿದೆ ಎಂದು ಹೇಳಿದರು.

  ''ಕುಮಾರಸ್ವಾಮಿ ಮೈಮೇಲೆ ಚೇಳು ಬಿದ್ದಂತಾಗಿದೆ''

  ''ಕುಮಾರಸ್ವಾಮಿ ಮೈಮೇಲೆ ಚೇಳು ಬಿದ್ದಂತಾಗಿದೆ''

  ಸಿದ್ದರಾಮೋತ್ಸವದಲ್ಲಿ ಸೇರಿದ ಜನ ನೋಡಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಮೇಲೆ ಚೇಳುಬಿದ್ದವರಂತೆ ಆಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲ ಭಾಷೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು. ಸಿದ್ದರಾಮಯ್ಯ ನಿಮ್ಮಗೆ ಬೈದರೆ, ಒಕ್ಕಲಿಗ ವೋಟು ಚದರುತ್ತದೆ ಎಂಬ ಭ್ರಮೆ ಬೇಡ ಎಂದು ಹೇಳಿದರು.

  ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ರಾಮು, ಶಿವಣ್ಣಘಿ, ಮಹೇಶ್ ಇದ್ದರು.

  ಕಾರ್ಯಕ್ರಮದ ಕೇಂದ್ರಬಿಂದು ಯಶ್

  ಕಾರ್ಯಕ್ರಮದ ಕೇಂದ್ರಬಿಂದು ಯಶ್

  ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶ್ ಕೇಂದ್ರ ಬಿಂದು ಆಗಿದ್ದರು. ಕಾರ್ಯಕ್ರಮದಲ್ಲಿ ಸಿಎಂ ಇದ್ದರೂ ಸಹ ವಿದ್ಯಾರ್ಥಿಗಳು 'ರಾಕಿ' 'ರಾಕಿ' ಎಂದು ಜಯಘೋಷ ಹಾಕುತ್ತಿದ್ದರು. ಸಿಎಂ ಸಹ ಯಶ್ ಅನ್ನು ಭಾರತದ ರಾಕಿಂಗ್ ಸ್ಟಾರ್ ಎಂದು ಹೊಗಳಿದರು. ಯಶ್ ಮಾತನಾಡಿ ''ನಾವೀಗ ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಎಲ್ಲವನ್ನು ಜನರ ಮನೆ ಮುಂದೆ ತರಲು ಸರಕಾರಕ್ಕೂ ಕಷ್ಟಸಾಧ್ಯ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

  English summary
  KPCC leader M Lakshman alleged that Karnataka BJP government using Yash's fame to hide their failures.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X