Jailer: ಮೊದಲ ದಿನ 30, 14ನೇ ದಿನ 62 ಶೋ; ಜೈಲರ್ ಕನ್ನಡ ಡಬಿಂಗ್ ಗೆ ಭರ್ಜರಿ ರೆಸ್ಪಾನ್ಸ್!
ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಸಿನಿಮಾ ಸದ್ಯ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ.
ಸ್ವಾತಂತ್ರ ದಿನಾಚರಣೆಯ ರಜೆಯನ್ನು ಗುರಿಯನ್ನಾಗಿಸಿಕೊಂಡು ತೆರೆಗೆ ಬಂದ ಜೈಲರ್ ಮೊದಲ ದಿನವೇ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಹೌದು, ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಂಡಿತು. ಮೊದಲ ಪ್ರದರ್ಶನದ ಬಳಿಕ ಶುರುವಾದ ಈ ಜೈಲರ್ ಭಜನೆ ಸದ್ಯ ಚಿತ್ರ 14ನೇ ದಿನಕ್ಕೆ ಕಾಲಿಟ್ಟರೂ ಸಹ ಮುಂದುವರಿದಿದೆ.

ಇನ್ನು ಜೈಲರ್ ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಸಹ ಡಬ್ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಅಂದಹಾಗೆ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿಯೇ ವೀಕ್ಷಿಸುವ ಪ್ರತ್ಯೇಕ ಡಬಿಂಗ್ ಪ್ರೇಮಿಗಳ ಬಳಗವಿದೆ. ಆ ಬಳಗ ಡಬಿಂಗ್ ಚಿತ್ರಗಳನ್ನು ವೀಕ್ಷಿಸಿ ಡಬಿಂಗ್ ಬೆಂಬಲಿಸುತ್ತಾ ಇರುತ್ತಾರೆ ಅದೇ ರೀತಿ ಜೈಲರ್ ಚಿತ್ರಕ್ಕೂ ಸಹ ಡಬಿಂಗ್ ಪ್ರಿಯರ ಬೆಂಬಲ ದೊರೆತಿದೆ.
ಪರಿಣಾಮವಾಗಿ ಜೈಲರ್ ಕನ್ನಡಕ್ಕೆ ಇಲ್ಲಿಯವರೆಗೂ ಡಬ್ ಆದ ಚಿತ್ರಗಳ ಪೈಕಿ ಅತಿಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ದಾಖಲೆ ಬರೆದಿದೆ. ಇನ್ನು ಜೈಲರ್ ಮೊದಲ ದಿನ ಕನ್ನಡ ವರ್ಷನ್ ಗೆ ಪಡೆದುಕೊಂಡಿದ್ದ ಶೋ ಸಂಖ್ಯೆಗಳನ್ನು ನೋಡಿ ಕನ್ನಡ ಡಬಿಂಗ್ ಪ್ರಿಯರು ವಿತರಕರ ವಿರುದ್ಧ ಕಿಡಿಕಾರಿದ್ದರು. ಹೌದು, ಜೈಲರ್ ಕನ್ನಡ ವರ್ಷನ್ ಮೊದಲ ದಿನ ಬೆಂಗಳೂರಿನಲ್ಲಿ ಕೇವಲ 30 ಪ್ರದರ್ಶನಗಳನ್ನು ಪಡೆದುಕೊಂಡಿತ್ತು. ಅತ್ತ ಅದೇ ದಿನ ಜೈಲರ್ ತಮಿಳು ವರ್ಷನ್ ಬೆಂಗಳೂರಿನಲ್ಲಿ ಬರೋಬ್ಬರಿ 1091 ಪ್ರದರ್ಶನಗಳನ್ನು ಪಡೆದುಕೊಂಡಿತ್ತು.
ಆದರೆ ನಂತರದ ದಿನಗಳಲ್ಲಿ ಜೈಲರ್ ಕನ್ನಡ ವರ್ಷನ್ ಕ್ಲಿಕ್ ಆಗಿದ್ದು, ಹೆಚ್ಚು ಹೌಸ್ ಫುಲ್ ಆದ ಕಾರಣ ಶೋಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ ಕೇವಲ 30 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ಜೈಲರ್ ಕನ್ನಡ ವರ್ಷನ್ ಇಂದು ( ಆಗಸ್ಟ್ 23 ) ತನ್ನ 14ನೇ ದಿನ 62 ಪ್ರದರ್ಶನಗಳನ್ನು ಪಡೆದುಕೊಂಡಿದೆ.
ಸೈರಾ ದಾಖಲೆ ಮುರಿದ ಜೈಲರ್:
ಜೈಲರ್ ಕನ್ನಡ ವರ್ಷನ್ 11 ದಿನಗಳಲ್ಲಿ ಬರೋಬ್ಬರಿ 3.55 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಡಬಿಂಗ್ ಚಿತ್ರಗಳ ಪೈಕಿ ನೂತನ ದಾಖಲೆ ಬರೆದಿದೆ. ಹೌದು, 2019ರಲ್ಲಿ ಬಿಡುಗಡೆಯಾಗಿ ಕನ್ನಡಕ್ಕೂ ಡಬ್ ಆಗಿ ಒಟ್ಟಾರೆ 3.50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು ಹಿಂದಿಕ್ಕಿರುವ ಜೈಲರ್ ಇದೀಗ ಕರ್ನಾಟಕದಲ್ಲಿ ಅತಿಹೆಚ್ಚು ಗಳಿಸಿದ ಡಬಿಂಗ್ ಸಿನಿಮಾ ಎನಿಸಿಕೊಂಡಿದೆ.
ಜೈಲರ್ ಕನ್ನಡ ಡಬಿಂಗ್ ಕಲೆಕ್ಷನ್:
ದಿನ 1 - 24 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 2 - 20 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 3 - 33 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 4 - 43 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ (ಭಾನುವಾರ) ದಿನ 5 - 29 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 6 - 52 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ (ರಜಾದಿನ) ದಿನ 7 - 19 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 8 - 18 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 9 - 27 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 10 - 35 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ದಿನ 11 - 55 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ (ಭಾನುವಾರ)


Click it and Unblock the Notifications











