Karnataka Box Office: ರಾಜ್ಯದಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರಗಳು ಇಲ್ಲಿಯವರೆಗೆ ಮಾಡಿರುವ ಕಲೆಕ್ಷನ್ ವಿವರ
2023ರ ದ್ವಿತೀಯಾರ್ಧದ ಮೊದಲ ತಿಂಗಳಿನಲ್ಲಿ ಎಲ್ಲಾ ಚಿತ್ರರಂಗಗಳೂ ಸಹ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿವೆ. ಮೊದಲಾರ್ಧದಲ್ಲಿ ಹಿಟ್ ನೀಡಲಾಗದೇ ಹಿನ್ನಡೆ ಅನುಭವಿಸಿದ್ದ ಸ್ಯಾಂಡಲ್‌ವುಡ್ ಸಹ ದ್ವಿತೀಯಾರ್ಧ ಆರಂಭವಾಗುತ್ತಿದ್ದಂತೆ ಹಿಟ್ ಬಾರಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಹೌದು, ಈ ವರ್ಷ ಬಿಡುಗಡೆಗೊಂಡ ಕನ್ನಡದ ಯಾವ ಚಿತ್ರಗಳೂ ಸಹ ಸಾಧಿಸಲಾಗದಿದ್ದಷ್ಟು ದೊಡ್ಡ ಗೆಲುವನ್ನು ಜುಲೈ 21ರಂದು ಬಿಡುಗಡೆಗೊಂಡಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಸಾಧಿಸಿದೆ.
ಇನ್ನು ಜುಲೈ ತಿಂಗಳಿನಲ್ಲಿಯೇ ಬಿಡುಗಡೆಗೊಂಡ ಮತ್ತೆರಡು ಕನ್ನಡ ಚಿತ್ರಗಳಾದ ಕೌಸಲ್ಯಾ ಸುಪ್ರಜಾ ರಾಮ ಹಾಗೂ ಆಚಾರ್ ಅಂಡ್ ಕೋ ಚಿತ್ರಗಳೂ ಸಹ ಹಿಟ್ ಲಿಸ್ಟ್ ಸೇರಿವೆ. ಇನ್ನು ಜುಲೈ ತಿಂಗಳಿನಲ್ಲಿ ತೆಲುಗಿನಲ್ಲಿ ತೆರೆಗೆ ಬಂದ ಬೇಬಿ ಹಾಗೂ ಬ್ರೋ ಚಿತ್ರಗಳು ಒಳ್ಳೆಯ ಗಳಿಕೆ ಮಾಡಿದ್ದು, ತಮಿಳಿನ ಮಾವೀರನ್ ಹಾಗೂ ಬಾಲಿವುಡ್‌ನ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರಗಳೂ ಸಹ ಯಶಸ್ಸನ್ನು ಸಾಧಿಸಿವೆ.

ಅತ್ತ ಹಾಲಿವುಡ್‌ನ ಬೃಹತ್ ಚಿತ್ರಗಳಾದ ಆಪನ್‌ಹೈಮರ್ ಮತ್ತು ಬಾರ್ಬಿ ಸಹ ಒಳ್ಳೆಯ ಗಳಿಕೆ ಮಾಡಿ ಅಬ್ಬರಿಸುತ್ತಿವೆ. ಇನ್ನು ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಇರುವ ಕರ್ನಾಟಕದಲ್ಲಿಯೂ ಸಹ ಈ ಮೇಲಿನ ಎಲ್ಲಾ ಚಿತ್ರಗಳೂ ಭರ್ಜರಿ ಗಳಿಕೆಯನ್ನು ಮಾಡಿವೆ. ಸದ್ಯ ರಾಜ್ಯದಲ್ಲಿ ಯಾವೆಲ್ಲಾ ಚಿತ್ರಗಳು ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿವೆ ಹಾಗೂ ಅವುಗಳು ಎಷ್ಟು ಹಣವನ್ನು ಗಳಿಸಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಆಪನ್‌ಹೈಮರ್ - ₹21.4 ಕೋಟಿ (10 ದಿನಗಳು)
ಮಿಷನ್ ಇಂಪಾಸಿಬಲ್ - ₹16.4 ಕೋಟಿ (19 ದಿನಗಳು)
ಹಾಸ್ಟೆಲ್ ಹುಡುಗರು - ₹9.12 ಕೋಟಿ (10 ದಿನಗಳು)
BRO - ₹7.18 ಕೋಟಿ (3 ದಿನಗಳು)
ಬಾರ್ಬಿ - ₹7.01 ಕೋಟಿ (10 ದಿನಗಳು)
ಮಾವೀರನ್ - ₹4.82 ಕೋಟಿ (17 ದಿನಗಳು)
ಬೇಬಿ - ₹4.55 ಕೋಟಿ (17 ದಿನಗಳು)
ರಾಕಿ ಔರ್ ರಾಣಿ ಪ್ರೇಮ್ ಕಹಾನಿ - ₹3.63 ಕೋಟಿ (3 ದಿನಗಳು )
ಪೋರ್ ತೊಳಿಲ್ - ₹2.69 ಕೋಟಿ (52 ದಿನಗಳು)
ಆಚಾರ್ ಅಂಡ್ ಕೋ - ₹69 ಲಕ್ಷ (3 ದಿನಗಳು)
ಡಿಡಿ ರಿಟರ್ನ್ಸ್ - ₹48 ಲಕ್ಷ (3 ದಿನಗಳು)
ಲೆಟ್ಸ್ ಗೆಡ್ ಮ್ಯಾರೀಡ್ - ₹18 ಲಕ್ಷ (3 ದಿನಗಳು)


Click it and Unblock the Notifications











