Karnataka Box Office: ಅಪ್ಪು 2, ಪ್ರಭಾಸ್ 2; ರಾಜ್ಯದಲ್ಲಿ ಯಾವ ನಟರ ಎಷ್ಟು ಚಿತ್ರಗಳು 60 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿವೆ?
ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಸದ್ಯ ಜೈಲರ್ ಸಿನಿಮಾದೇ ಅಬ್ಬರ. ಆಗಸ್ಟ್ 10ರಂದು ಬಿಡುಗಡೆಗೊಂಡ ಈ ಚಿತ್ರ ವಿಶ್ವದಾದ್ಯಂತ 550 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇನ್ನು ಜೈಲರ್ ಚಿತ್ರ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು, ಕೇರಳ ಹಾಗೂ ಉತ್ತರ ಭಾರತದಲ್ಲಿಯೂ ಸಹ ಬಿಡುಗಡೆಗೊಂಡಿದ್ದು, ನೇರವಾಗಿ ತಮಿಳು ಭಾಷೆಯಲ್ಲಿಯೂ ಬಿಡುಗಡೆಗೊಂಡಿದೆ ಹಾಗೂ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿಯೂ ಸಹ ತೆರೆ ಕಂಡಿದೆ.
ಸದ್ಯ ನಿನ್ನೆಗೆ ( ಆಗಸ್ಟ್ 22 ) ತನ್ನ 13 ದಿನಗಳ ಓಟವನ್ನು ಪೂರೈಸಿರುವ ಜೈಲರ್ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿಯೂ ಸಹ ಅದ್ಭುತ ಗಳಿಕೆ ಮಾಡಿದೆ. ಹೌದು, 13 ದಿನಗಳಲ್ಲಿ ಕರ್ನಾಟಕದಲ್ಲಿ 62.5 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಜೈಲರ್ ಈ ವರ್ಷ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅತಿಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಎಂಬ ದಾಖಲೆ ಬರೆದಿದೆ.

ಇನ್ನು ರಜನಿಕಾಂತ್ ಈ ಸಿನಿಮಾದ ಮೂಲಕ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಎರಡನೇ ಬಾರಿಗೆ 50 ಕೋಟಿ ಕ್ಲಬ್ ಸೇರಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ 60 ಕೋಟಿ ಗಳಿಸಿದ ಸಾಧನೆ ಮಾಡಿದ್ದಾರೆ. ಇನ್ನು ರಜನಿಕಾಂತ್ ನಟನೆಯ ಜೈಲರ್ ಚಿತ್ರಕ್ಕೂ ಮುನ್ನ ಎಲ್ಲಾ ಭಾಷೆಯ ಸಿನಿಮಾಗಳೂ ಸೇರಿದಂತೆ ಕೆಲವೇ ಚಿತ್ರಗಳು ಮಾತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 60 ಕೋಟಿಗೂ ಮೀರಿ ಗಳಿಕೆ ಮಾಡಿದ್ದು, ಆ ಚಿತ್ರಗಳು ಯಾವುವು ಹಾಗೂ ಯಾವ ನಟನ ಚಿತ್ರಗಳು ಹೆಚ್ಚು ಬಾರಿ ಈ ಸಾಧನೆ ಮಾಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಪ್ರಭಾಸ್ - 2 ಚಿತ್ರಗಳು - ಬಾಹುಬಲಿ ದ ಬೆಗಿನಿಂಗ್ ಹಾಗೂ ಬಾಹುಬಲಿ ದ ಕನ್ಕ್ಲೂಷನ್
2. ದರ್ಶನ್ - 2 - ಕುರುಕ್ಷೇತ್ರ ಹಾಗೂ ರಾಬರ್ಟ್
3. ಪುನೀತ್ ರಾಜ್ ಕುಮಾರ್ - 2 ಚಿತ್ರಗಳು - ರಾಜಕುಮಾರ ಹಾಗೂ ಜೇಮ್ಸ್
4. ಯಶ್ - 2 ಚಿತ್ರಗಳು - ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2
5. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ - 1
6. ರಕ್ಷಿತ್ ಶೆಟ್ಟಿ - 1 ಚಿತ್ರ - 777 ಚಾರ್ಲಿ
7. ಕಿಚ್ಚ ಸುದೀಪ್ - 1 ಚಿತ್ರ - ವಿಕ್ರಾಂತ್ ರೋಣ
8. ರಿಷಬ್ ಶೆಟ್ಟಿ - 1 ಚಿತ್ರ - ಕಾಂತಾರ
9. ರಜಿನಿಕಾಂತ್ - 1 ಚಿತ್ರ - ಜೈಲರ್


Click it and Unblock the Notifications











