ರಾಜ್ಯ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿ ಸುದ್ದಿ ನೀಡಿದ ಯಡಿಯೂರಪ್ಪ

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಸಕ್ತ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದ್ದಾರೆ. ಯಡಿಯೂರಪ್ಪ ಬಜೆಟ್ ನಲ್ಲಿ ಚಿತ್ರರಂಗಕ್ಕೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಚಿತ್ರರಂಗದ ಬಹು ವರ್ಷದ ಕನಸಾಗಿದ್ದ ಫಿಲ್ಮ್ ಸಿಟಿಗೆ ಬಜೆಟ್ ನಲ್ಲಿ ಅನುದಾನ ಘೋಷಿಸಿದ್ದಾರೆ.

Recommended Video

ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಫಿಲ್ಮ್ ಸಿಟಿ | Karnataka Budget 2020 | Filmibeat Kannada

ಹೌದು, ಈ ಬಾರಿಯ ಬಜೆಟ್ ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ 500 ಕೋಟಿ ಅನುದಾನ ನೀಡಿದ್ದಾರೆ. ಬೆಂಗಳೂರಿನಲ್ಲಿಯೆ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರರಂಗದ ಅನೇಕ ವರ್ಷದ ಕನಸು ನನಸಾಗುವ ಸಮಯ ಹತ್ತಿರಬಂದಿದೆ. ಇನ್ನುಫಿಲ್ಮ್ ಸಿಟಿ ಎಲ್ಲಿ ನಿರ್ಮಾಣ ಆಗಬೇಕು ಎನ್ನುವ ಬಗ್ಗೆ ಸಾಕಷ್ಟು ಗೊಂದಲವಿತ್ತು.

ಸಿಎಂ ಬಳಿ ಮನವಿ ಮಾಡಿದ್ದ ಯಶ್

ಸಿಎಂ ಬಳಿ ಮನವಿ ಮಾಡಿದ್ದ ಯಶ್

ಇತ್ತೀಚಿಗೆ ರಾಕಿಂಗ್ ಯಶ್ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ವೇದಿಕೆಯಲ್ಲಿ ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. "ನಿಮ್ಮನ್ನು ಏನು ಕೇಳುವುದಿಲ್ಲ ನಮಗೆ ಒಂದು ಸ್ಟುಡಿಯೋ ನಿರ್ಮಿಸಿ ಕೊಡಿ ಎಂದಿರು. ನಾವು ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಅದ್ಯಾವುದೊ ಸಿಸ್ಟಮ್ ಗೆ ಹೊಂದಿಕೊಳ್ಳಬೇಕು. ಇಲ್ಲೆ ಸ್ಟುಡಿಯೋ ಕೊಡಿ ನಮಗೆ. ಟ್ಯಾಕ್ಸ್ ರೂಪದಲ್ಲಿ ಎಷ್ಟೋ ಪಾವಾಸ್ ಕೊಡುತ್ತೀವಿ ನಿಮಗೆ. ಇದರಿಂದ ಇಡೀ ಉದ್ಯಮ ಬೆಳೆಯುತ್ತೆ" ಎಂದಿದ್ದರು.

ಫಿಲ್ಮ್ ಸಿಟಿ ನಿರ್ಮಾಣಕ್ಕೆ ನಿಗಧಿಯಾದ ಜಾಗಗಳು

ಫಿಲ್ಮ್ ಸಿಟಿ ನಿರ್ಮಾಣಕ್ಕೆ ನಿಗಧಿಯಾದ ಜಾಗಗಳು

ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗಬೇಕು, ರಾಮನಗರದಲ್ಲಿ ಆಗಬೇಕು, ಹೆಸರಘಟ್ಟದಲ್ಲಿ ಆಗಬೇಕು ಎಂದು ಸಾಕಷ್ಟು ಚರ್ಚೆಯಾಗಿತ್ತು. ಆದರೀಗ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗುವುದು ಅಧಿಕೃತ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸರ್ಕಾರ ಬದಲಾದ ಹಾಗೆ ಜಾಗ ಬದಲಾವಣೆ

ಸರ್ಕಾರ ಬದಲಾದ ಹಾಗೆ ಜಾಗ ಬದಲಾವಣೆ

ಈ ಮೊದಲು ಅಂದರೆ 2018 ಸಿದ್ಧರಾಮಯ್ಯ ಸೇತೃತ್ವದ ಸರ್ಕಾರ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ಅಲ್ಲದೆ 100 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಆನಂತರ ಕುಮಾರಸ್ವಾಮಿ ಸರ್ಕಾರ ಫಿಲ್ಮ್ ಸಿಟಿಯನ್ನು ಮೈಸೂರಿನಿಂದ ರಾಮನಗರಕ್ಕೆ ಶಿಫ್ಟ್ ಮಾಡಿದ್ದರು. ಮೂರು ಸರ್ಕಾರದಲ್ಲಿಯೂ ಮೂರು ಕಡೆ ಜಾಗ ಬದಲಾಗಿತ್ತು.

ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ನಿರ್ಮಾಣ

ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ನಿರ್ಮಾಣ

ಬೆಂಗಳೂರಿನಲ್ಲಿ ನಿರ್ಮಾಣವಾಗುವುದು ಅಧಿಕೃತವೆಂದು ಹೇಳಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ವಾಗಲಿದೆಯಂತೆ. ಈ ಮೊದಲು ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ ಬೆಂಗಳೂರಿನ ಹೊರವಲಯ ಕನಕಪುರ ರಸ್ತೆಯಲ್ಲಿರುವ ರೋರಿಚ್ ಎಸ್ಟೇಟ್ ನಲ್ಲಿ ಜಾಗ ನೋಡಲಾಗಿತ್ತು.

ಎಲ್ಲಿ ನಿರ್ಮಾಣವಾಗಲಿದೆ ಫಿಲ್ಮ್ ಸಿಟಿ

ಎಲ್ಲಿ ನಿರ್ಮಾಣವಾಗಲಿದೆ ಫಿಲ್ಮ್ ಸಿಟಿ

ರೋರಿಚ್ ಎಸ್ಟೇಟ್ ಜಾಗವನ್ನು ಕಾರಣಾಂತರಗಳಿಂದ ನಿರ್ಮಾಣ ಕಾರ್ಯ ಕೈಬಿಡಲಾಗಿದೆ. ಆದರೀಗ ಯಾವ ಜಾಗ ಎನ್ನುವುದು ಇನ್ನು ಅಧಿಕೃತವಾಗಿಲ್ಲ. ಸಧ್ಯದಲ್ಲೇ ಚಿತ್ರನಗರಿಗೆ ಜಾಗ ನಿರ್ಧಾರವಾಗಲಿದೆ ಎಂದು ಈ ಹಿಂದೆಯೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದರು.

More from Filmibeat

English summary
Karnataka Budget 2020: CM Yediyurappa donated 500 crore for Film City in budget at Bangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X