ರೇಸ್ ಕೋರ್ಸ್ ರಸ್ತೆ ಇನ್ನುಮುಂದೆ ಡಾ ಎಂ ಎಚ್ ಅಂಬರೀಶ್ ರಸ್ತೆ; ಅಂಬಿ ಸ್ಮಾರಕ ಕೂಡ ಲೋಕಾರ್ಪಣೆ

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಓರ್ವರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ವಾರವಷ್ಟೇ ಒಪ್ಪಿಗೆ ಸೂಚಿಸಿದ್ದರು. ಅದರಂತೆ ಇಂದು ( ಮಾರ್ಚ್ 27 ) ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಡಾ ಎಂ ಎಚ್ ಅಂಬರೀಶ್ ( ಮಳವಳ್ಳಿ ಹುಚ್ಚಪ್ಪ ಅಂಬರೀಶ್ ) ಎಂದು ದೊಡ್ಡದಾಗಿ ಬರೆಯಲಾಗಿರುವ ಬೋರ್ಡನ್ನು ಕರ್ಟನ್ ಸರಿಸುವ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಸ್ತೆಯನ್ನು ಉದ್ಘಾಟಿಸಿದರು. ನೆರೆದಿದ್ದವರು ಅಂಬರೀಶ್ ಅವರಿಗೆ ಜೈಕಾರ ಕೂಗಿ ಈ ಕ್ಷಣವನ್ನು ಸಂಭ್ರಮಿಸಿದ್ದಾರೆ. ಮೌರ್ಯ ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ವರೆಗಿನ ರೇಸ್ ಕೋರ್ಸ್ ರಸ್ತೆ ಇಂದಿನಿಂದ ಡಾ ಎಂ ಎಚ್ ಅಂಬರೀಶ್ ರಸ್ತೆ ಎನಿಸಿಕೊಳ್ಳಲಿದೆ.

Karnataka CM Basavaraj Bommai inaugurates Ambareesh road and Ambareesh Smaraka

ಇನ್ನು ಅಂಬರೀಶ್ ರಸ್ತೆಯನ್ನು ಉದ್ಘಾಟಿಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅಂಬರೀಶ್ ಸ್ಮಾರಕವನ್ನೂ ಸಹ ಉದ್ಘಾಟಿಸಿದರು. ಅಂಬರೀಶ್ ಪುತ್ಥಳಿಯನ್ನು ರಿಮೋಟ್ ಕಂಟ್ರೋಲ್ ಕರ್ಟನ್ ಸರಿಸುವ ಮೂಲಕ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್, ರಾಕ್‌ಲೈನ್ ವೆಂಕಟೇಶ್ ಹಾಗೂ ಚಲನಚಿತ್ರ ಮಂಡಳಿಯ ಅಧ್ಯಕ್ಷರಾದ ಬಾಮಾ ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಅಂಬರೀಶ್ ಅವರನ್ನು ಹಾಡಿ ಹೊಗಳಿದರು. 'ಕರ್ನಾಟಕದ ರೆಬೆಲ್ ಸ್ಟಾರ್ ಎಲ್ಲರ ಮನಸ್ಸನ್ನು ಗೆದ್ದ ನೇರ ದಿಟ್ಟ ನಿರಂತರ ಶ್ರೀಮಾನ್ ಅಂಬರೀಶ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ. ಅಂಬರೀಶ್ ಅವರ ನೆನಪಿಗಾಗಿ ಇಂದು ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ಅವರ ಹೆಸರಿನಲ್ಲಿ ಸಂತೋಷದಿಂದ ನಾಮಕರಣ ಮಾಡಿದ್ದೇವೆ. ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲಾ ಅಭಿಮಾನಿಗಳ ಒತ್ತಾಸೆ ಮೇರೆಗೆ ಇಂದು ಅವರ ಹೆಸರನ್ನು ಇಟ್ಟಿದ್ದೇವೆ. ಹಲವು ಪ್ರತಿಭೆಯಿರುವ ಮೇರು ವ್ಯಕ್ತಿತ್ವ ಅವರದ್ದು. ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅವರಿಗಿತ್ತು ಎಂದರು.

ಇನ್ನೂ ಮುಂದುವರಿದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಂಬರೀಶ್ ರೀಲ್ ಹಾಗೂ ರಿಯಲ್ ಲೈಫ್ ಎರಡರಲ್ಲಿಯೂ ಒಂದೇ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರು, ಕ್ರೀಡೆಯಲ್ಲೂ ಆಸಕ್ತಿ ಹೊಂದಿದ್ದರು. ಕಾವೇರಿ ವಿಷಯ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು, ಅಧಿಕಾರವೇ ಅವರನ್ನು ಹುಡುಕಿಕೊಂಡು ಬರುತ್ತಿತ್ತು ಎಂದೂ ಸಹ ಹೇಳಿಕೆ ನೀಡಿದರು.

ಇನ್ನು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಪ್ರಮುಖ ಕಾರಣ ಚಲನಚಿತ್ರ ಮಂಡಳಿಯ ಅಧ್ಯಕ್ಷ ಬಾ ಮಾ ಹರೀಶ್ ಹಾಗೂ ತಂಡ. ಇವರು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡಬೇಕೆಂದು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿತ್ತು. ಈ ಮನವಿಗೆ ಇದೀಗ ರಾಜ್ಯ ಸರ್ಕಾರ ಈಗ ಸ್ಪಂದಿಸಿದ್ದು, ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

More from Filmibeat

English summary
Karnataka CM Basavaraj Bommai inaugurates Ambareesh road and Ambareesh Smaraka. Read on.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X