ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಸಿಎಂ ಒಪ್ಪಿಗೆ; ಯಾವಾಗ ಕಾರ್ಯಕ್ರಮ?

Karnataka CM gives green signal to name Bengaluru Race Course road as Ambareesh Road

ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಓರ್ವರಾದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಇಡಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಈ ಹಿಂದೆ ನಾಯಂಡನಹಳ್ಳಿ - ಬನ್ನೇರುಘಟ್ಟ ರಸ್ತೆಗೆ ಅಂಬರೀಶ್ ಹೆಸರನ್ನು ಇಡಲು ಮಾತುಕತೆ ನಡೆದಿತ್ತು‌. ಆದರೆ ಈಗ ಆ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಹೆಸರನ್ನು ಇಟ್ಟಿರುವ ಕಾರಣ ಅಂಬರೀಶ್ ಅವರ ಹೆಸರನ್ನು ರೇಸ್ ಕೋರ್ಸ್ ರಸ್ತೆಗೆ ಇಡಲಾಗ್ತಿದೆ.

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡಬೇಕೆಂದು ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಮನವಿ ಮಾಡಿತ್ತು. ಈ ಮನವಿಗೆ ಇದೀಗ ರಾಜ್ಯ ಸರ್ಕಾರ ಈಗ ಸ್ಪಂದಿಸಿದ್ದು ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದೇ ತಿಂಗಳ ಆರನೇ ತಾರೀಖಿನಂದು ರೇಸ್ ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್ ಅಂಬರೀಶ್ ರಸ್ತೆ ನಾಮಫಲಕ ಮತ್ತು ಡಾ. ಅಂಬರೀಶ್ ಸ್ಮಾರಕ ಉದ್ಘಾಟನೆಗೆ ದಿನಾಂಕ ಹಾಗೂ ಸಮಯವನ್ನು ನಿಗದಿಪಡಿಸಲು ಕೋರಿ ಮನವಿಯನ್ನು ಬಾಮಾ ಹರೀಶ್ ಹಾಗೂ ತಂಡ ಸಲ್ಲಿಸಿದ್ದರು‌.

ಇನ್ನು ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಅವರ ಹೆಸರನ್ನು ಇಡುವ ಕಾರ್ಯಕ್ರಮ ಇದೇ ವಾರವೇ ನಡೆಯುವುದಾಗಿ ಬಾಮಾ ಹರೀಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

More from Filmibeat

English summary
Karnataka CM gives green signal to name Bengaluru Race Course road as Ambareesh Road
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X