ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು

Recommended Video

Sye Raa Narasimha Reddy Movie: ದಾಖಲೆ ಮೊತ್ತಕ್ಕೆ ಮಾರಾಟವಾದ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು

'ಸೈರಾ ನರಸಿಂಹ ರೆಡ್ಡಿ' ಟಾಲಿವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಚಾಲಿವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದ ಗಮನ ಸೆಳೆದಿರುವ ಸಿನಿಮಾ. ಭಾರತೀಯ ಚಿತ್ರರಂಗದ ದೊಡ್ಡ ಕಲಾವಿದರು ಸೈರಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಕನ್ನಡ ಮಾಣಿಕ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈಗಾಗಲೆ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ತಯಾರಿಗಳನ್ನು ಮಾಡಿಕೊಳ್ಳುತ್ತಿರುವ ಸೈರಾ ಸಿನಿಮಾದಿಂದ ಒಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಸೈರಾ ಚಿತ್ರದ ಕರ್ನಾಟಕ ವಿತರಣೆಯ ಹಕ್ಕು ಕೋಟಿ ಕೋಟಿಗೆ ಬಿಕರಿಯಾಗಿರುವುದು ಅಚ್ಚರಿ ಮೂಡಿಸಿದೆ.

ತೆಲುಗು ಚಿತ್ರವಾದ್ರು ಕಿಚ್ಚ ಸುದೀಪ್ ಕಾಣಿಸಿಕೊಂಡಿರುವುದು ಕನ್ನಡ ಚಿತ್ರಾಭಿಮಾನಿಗಳಿಗೆ ವಿಶೇಷ. ಬಹುಕೋಟಿ ವೆಚ್ಚದ ಚಿತ್ರಕ್ಕೆ ಕರ್ನಾಟಕ ವಿರತಣೆ ಹಕ್ಕು ಈ ಮೊತ್ತಕ್ಕೆ ಮಾರಾಟವಾಗಿರುವುದು ನಿಜಕ್ಕು ಅಚ್ಚರಿಕರ ವಿಚಾರವಾಗಿದೆ. ಇದೇ ಮೊದಲ ಬಾರಿಗೆ ತೆಲುಗು ಚಿತ್ರವೊಂದಕ್ಕೆ ಈ ಮೊತ್ತದ ಬೆಲೆ ಕೊಟ್ಟು ಕೊಂಡುಕೊಂಡಿರುವುದು.

32 ಕೋಟಿಗೆ ಕರ್ನಾಟಕ ವಿತರಣೆ ಹಕ್ಕು

32 ಕೋಟಿಗೆ ಕರ್ನಾಟಕ ವಿತರಣೆ ಹಕ್ಕು

ಟಾಲಿವುಡ್ ನ ಮೆಘಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೋಟಿ ಕೋಟಿಗೆ ಬಿಕರಿಯಾಗಿದೆ. ಬರೋಬ್ಬರಿ 32ಕೋಟಿಗೆ 'ಸೈರಾ' ಚಿತ್ರದ ಕರ್ನಾಟಕ ವಿತರಣೆ ಹಕ್ಕು ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ತೆಲುಗು ಚಿತ್ರವೊಂದು ಈ ಮೊತ್ತಕ್ಕೆ ಬಿಕರಿಯಾಗಿರುವುದು ಇದೆ ಮೊದಲು.

ಕೈದಿ ಚಿತ್ರ 7.5 ಕೋಟಿ

ಕೈದಿ ಚಿತ್ರ 7.5 ಕೋಟಿ

ಚಿರಂಜೀವಿ ಅಭಿನಯದ 'ಕೈದಿ ನಂ. 150' ಚಿತ್ರ 7.5 ಕೋಟಿಗೆ ಕರ್ನಾಟಕದ ವಿತರಣೆ ಹಕ್ಕು ಮಾರಾಟವಾಗಿತ್ತು. ಕೈದಿ ಸಿನಿಮಾದ ನಂತರ ಚಿರಂಜೀವಿ ಅವರ 'ಸೈರಾ' ಚಿತ್ರ 32 ಕೋಟಿಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ವಿಶೇಷ ಅಂದ್ರೆ ದೀರಜ್ ಎಂಟರ್ ಪ್ರೈಸಸ್ ಅವರು ಸೈರಾ ಚಿತ್ರಕ್ಕೆ 32 ಕೋಟಿ ಕೊಟ್ಟು ವಿತರಣೆ ಹಕ್ಕು ಖರೀದಿ ಮಾಡಿದೆ.

ಅಕ್ಟೋಬರ್ ನಲ್ಲಿ ಸೈರಾ ತೆರೆಗೆ

ಅಕ್ಟೋಬರ್ ನಲ್ಲಿ ಸೈರಾ ತೆರೆಗೆ

ಟಾಲಿವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸೈರಾ ಆಕ್ಟೋಬರ್ 2 ಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೆ ಚಿತ್ರೀಕರಣ ಮುಗಿಸಿರುವ ಸೈರಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ಸುಧೀಂದರ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ. ರಾಮ್ ಚರಣ್ ಬಂಡವಾಳ ಹೂಡಿದ್ದಾರೆ. ಕಿಚ್ಚ ಸುದೀಪ್ ಅಭಿನಿಯಿಸಿರುವುದು ಕನ್ನಡಿಗರಿಗೆ ಈ ಸಿನಿಮಾ ಮತ್ತಷ್ಟು ವಿಶೇಷವಾಗಿದೆ.

ಚಿತ್ರದಲ್ಲಿದೆ ದೊಡ್ಡ ತಾರಾಬಳಗ

ಚಿತ್ರದಲ್ಲಿದೆ ದೊಡ್ಡ ತಾರಾಬಳಗ

ಚಿತ್ರದಲ್ಲಿ ದೊಡ್ಡ ತಾರಾಬಳಗವೆ. ಭಾರತೀಯ ಚಿತ್ರರಂಗದ ಖ್ಯಾತ ಕಲಾವಿದರು ಸೈರಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಗೋಸಾಯಿ ವೆಂಕಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವುಕು ರಾಜನಾಗಿ ಮಿಂಚಿದ್ದಾರೆ. ಇನ್ನು ವಿಜಯ್ ಸೇತುಪತಿ, ಜಗಪತಿ ಬಾಬು ಮತ್ತು ನಟಿಯರಾದ ತಮನ್ನಾ, ಅನುಷ್ಕಾ ಶೆಟ್ಟಿ ಮತ್ತು ನಯನತಾರಾ ಮಿಂಚಿದ್ದಾರೆ.

More from Filmibeat

English summary
Karnataka distribution rights of Telugu actor Chiranjeevi starrer Saira Narasimha Reddy film sold for 32 crore. Kannada actor Kiccha Sudeep playing important role in Sairat film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X