For Quick Alerts
  ALLOW NOTIFICATIONS  
  For Daily Alerts

  ಫಲಿಸಲಿಲ್ಲ ದರ್ಶನ್ ಪ್ರಚಾರ: ಚಾಮುಂಡೇಶ್ವರಿಯಲ್ಲಿ ಸಿದ್ದು ಗೆಲ್ಲಲಿಲ್ಲ.!

  By Harshitha
  |
  ದರ್ಶನ್ ಮೊರೆ ಹೋದ ಸಿದ್ದುಗೆ ಸಿಕ್ಕಿದ್ದು ನಿರಾಶೆ | FIlmibeat Kannada

  ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ಹೈವೋಲ್ಟೇಜ್ ಕ್ಷೇತ್ರ ಅಂತಲೇ ಗುರುತಿಸಿಕೊಂಡಿದ್ದು ಮೈಸೂರಿನ 'ಚಾಮುಂಡೇಶ್ವರಿ'. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಹೆಸರಿನ ಈ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯ ರವರಿಗೆ ಪುನರ್ಜನ್ಮ ನೀಡಿತ್ತು.

  ಸಿದ್ದರಾಮಯ್ಯ ಜಾತ್ಯತೀತ ಜನತಾದಳ ತೊರೆದು, ಕಾಂಗ್ರೆಸ್ ಪಕ್ಷ ಸೇರಿದಾಗ 2006 ರ ಉಪಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದು ಇದೇ ಕ್ಷೇತ್ರದಲ್ಲಿ. ಅಂದು 'ಚಾಮುಂಡೇಶ್ವರಿ' ಕೃಪೆಯಿಂದ ಸಿದ್ದರಾಮಯ್ಯ ವಿಜಯ ಪತಾಕೆ ಹಾರಿಸಿದ್ದರು. ಇಂದು ಅದೇ ಮುಂದುವರಿಯಬಹುದು ಎಂಬುದು ಸಿದ್ದರಾಮಯ್ಯ ರವರ ಲೆಕ್ಕಾಚಾರ ಆಗಿತ್ತು. ಆದ್ರೆ, ಸಿದ್ದು ಲೆಕ್ಕ ಉಲ್ಟಾ ಆಗಿದೆ.

  ಮೈಸೂರು: ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ದರ್ಶನ್

  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡಿದ್ದಾರೆ. ಸಿದ್ದರಾಮಯ್ಯ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಿದರೂ, ಜೆಡಿಎಸ್ ನ ಜಿ.ಟಿ.ದೇವೇಗೌಡ ವಿರುದ್ಧ ಗೆಲ್ಲಲು ಸಾಧ್ಯ ಆಗಲಿಲ್ಲ. ಸಿದ್ದು ಪರವಾಗಿ 'ದಾಸ' ದರ್ಶನ್ ಮಾಡಿದ ಪ್ರಚಾರ ಫಲಿಸಲಿಲ್ಲ. ಮುಂದೆ ಓದಿರಿ....

  ಸಿದ್ದರಾಮಯ್ಯ ರನ್ನ ಗೆಲ್ಲಿಸಲು ದರ್ಶನ್ ಕೈಯಲ್ಲೂ ಸಾಧ್ಯ ಆಗಲಿಲ್ಲ.!

  ಸಿದ್ದರಾಮಯ್ಯ ರನ್ನ ಗೆಲ್ಲಿಸಲು ದರ್ಶನ್ ಕೈಯಲ್ಲೂ ಸಾಧ್ಯ ಆಗಲಿಲ್ಲ.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು. ಅದರಲ್ಲೂ ದರ್ಶನ್ ಗೆ ಮಾಸ್ ಫ್ಯಾನ್ಸ್ ಜಾಸ್ತಿ. ಹೇಳಿ ಕೇಳಿ ಮೈಸೂರು ದರ್ಶನ್ ರವರ ತವರೂರು. ಹೀಗಾಗಿ, ದರ್ಶನ್ ಮಾಸ್ ಇಮೇಜ್ ನ 'ಚಾಮುಂಡೇಶ್ವರಿ' ಕ್ಷೇತ್ರದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪ್ಲಾನ್ ಮಾಡಿತ್ತು. ಆದ್ರೆ, ಈ ಪ್ಲಾನ್ ವರ್ಕೌಟ್ ಆಗಲಿಲ್ಲ. ಸಿದ್ದರಾಮಯ್ಯ ಪರವಾಗಿ ದರ್ಶನ್ ಮತ ಬೇಡಿದರೂ, ಸಿದ್ದು ಗೆಲ್ಲಲೇ ಇಲ್ಲ.

  ಎಲ್ಲರ ಮುಂದೆ ತಲೆಬಾಗಿ, ಸಿದ್ದು ಪರ ನಟ ದರ್ಶನ್ ಮತ ಬೇಡಿದ್ದು ಹೀಗೆ...ಎಲ್ಲರ ಮುಂದೆ ತಲೆಬಾಗಿ, ಸಿದ್ದು ಪರ ನಟ ದರ್ಶನ್ ಮತ ಬೇಡಿದ್ದು ಹೀಗೆ...

  ಸಿದ್ದರಾಮಯ್ಯ ಗೆ ಹ್ಯಾಟ್ಸ್ ಆಫ್ ಹೇಳಬೇಕು.!

  ಸಿದ್ದರಾಮಯ್ಯ ಗೆ ಹ್ಯಾಟ್ಸ್ ಆಫ್ ಹೇಳಬೇಕು.!

  ''ಎಲ್ಲರಿಗೂ ಕಷ್ಟ ಬರುತ್ತೆ. ಆದ್ರೆ, ನಾನು ಸಿದ್ದರಾಮಯ್ಯ ರವರಲ್ಲಿ ನೋಡಿದ ದೊಡ್ಡ ಗುಣ ಅಂದ್ರೆ, ರಾಕೇಶ್ ಸಿದ್ದರಾಮಯ್ಯ ತೀರಿಕೊಂಡರೂ, ಸಿದ್ದರಾಮಯ್ಯ ಧೃತಿಗೆಡಲಿಲ್ಲ. ಹತ್ತು ದಿನ ಮಾತ್ರ ದುಃಖದಲ್ಲಿ ಇದ್ದರು. ಬಳಿಕ ಮತ ಹಾಕಿರುವ ಜನತೆಗಾಗಿ ಬದುಕಲು ಮುಂದೆ ಬಂದು ಕೆಲಸ ಮಾಡಿದರು. ಇದಕ್ಕೆ ನಿಜವಾಗಲೂ ಸಿದ್ದರಾಮಯ್ಯ ಅವರಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಅಂತಹ ಧೈರ್ಯ ಯಾರಿಗೂ ಬರಲ್ಲ'' ಎಂದು ಸಿದ್ದರಾಮಯ್ಯ ಪರವಾಗಿ ರೋಡ್ ಶೋ ವೇಳೆ ದರ್ಶನ್ ಹೇಳಿದ್ದರು.

  ಡೇರ್ ಡೆವಿಲ್ ಸಿದ್ದರಾಮಯ್ಯ

  ಡೇರ್ ಡೆವಿಲ್ ಸಿದ್ದರಾಮಯ್ಯ

  ''ಡೇರ್ ಡೆವಿಲ್ ಆಗಿರುವ ಸಿದ್ದರಾಮಣ್ಣ ಅವರಿಗೆ 70 ವರ್ಷ. ಕೈಗೆ ಬಂದ ಮಗನನ್ನು ಕಳೆದುಕೊಂಡರೂ ಕೂಡ ಸಿದ್ದರಾಮಯ್ಯ ಕುಗ್ಗಲಿಲ್ಲ. ಹೀಗಾಗಿ ಮತ್ತೊಮ್ಮೆ ನಿಮಗೆ ಸೇವೆ ಮಾಡುವುದಕ್ಕೆ ಸಿದ್ದರಾಮಯ್ಯ ಅವರಿಗೆ ನಿಮ್ಮ ಅಮೂಲ್ಯವಾದ ಮತ ಹಾಕಿ, ಜಯಶೀಲರನ್ನಾಗಿ ಮಾಡಿ, ಬಹುಮತದಿಂದ ಗೆಲ್ಲಿಸಿ ಅಂತ ಎಲ್ಲರ ಬಳಿ ನಾನು ತಲೆಬಾಗಿ ಬೇಡಿಕೊಳ್ಳುತ್ತೇನೆ'' ಎಂದು ಹೇಳಿದ್ದರು ನಟ ದರ್ಶನ್.

  ಇಷ್ಟೆಲ್ಲ ಹೇಳಿದರೂ ಉಪಯೋಗ ಆಗಿಲ್ಲ.!

  ಇಷ್ಟೆಲ್ಲ ಹೇಳಿದರೂ ಉಪಯೋಗ ಆಗಿಲ್ಲ.!

  ಸಿದ್ದರಾಮಯ್ಯ ಪರವಾಗಿ ದರ್ಶನ್ ಇಷ್ಟೆಲ್ಲ ಹೇಳಿದರೂ, ಜೆಡಿಎಸ್ ಪ್ರತಿಭಟನೆ ನಡುವೆ ರೋಡ್ ಶೋ ನಡೆಸಿದರೂ, ಉಪಯೋಗ ಆಗಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಜಯಭೇರಿ ಬಾರಿಸಿದರು. ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ವರ್ಚಸ್ಸು, ದರ್ಶನ್ ಇಮೇಜ್ ಯಾವುದೂ ಕೆಲಸ ಮಾಡಲಿಲ್ಲ ಅನ್ನೋದು ಮಾತ್ರ ಸತ್ಯ.

  English summary
  Karnataka Election Results 2018: Even Challenging Star Darshan could not save Siddaramaiah in Chamundeshwari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X