''ಶ್ರೀಗಳು ಲಿಂಗೈಕ್ಯರಾದಾಗ ಮೋದಿ ಬರಬೇಕಿತ್ತು'' - ಸಾರಾ ಗೋವಿಂದು

ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ನುಡಿ ನಮನ ಕಾರ್ಯಕ್ರಮವನ್ನು ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಚಲನಚಿತ್ರ ವಾಣಿಜ್ಯ ಮಂಡಳಿ ಸಿಬ್ಬಂದಿ ಶ್ರೀಗಳ ಬಗ್ಗೆ ಮಾತನಾಡಿ ಗೌರವ ಸೂಚಿಸಿದರು.

ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋಂವಿದು, ಹಾಲಿ ಅಧ್ಯಕ್ಷ ಚಿನ್ನೆಗೌಡ, ಕಾರ್ಯದರ್ಶಿ ಭಾಮಾ ಹರೀಶ್ ಸೇರಿದಂತೆ ವಾಣಿಜ್ಯ ಮಂಡಳಿಯ ಎಲ್ಲ ಪದಾಧಿಕಾರಿಗಳು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಾ ಗೋವಿಂದು ''ಚುನಾವಣೆ ಸಮಯದಲ್ಲಿ ಶ್ರೀಗಳ ಬಳಿಗೆ ಎಲ್ಲರೂ ಹೋಗುತ್ತಿದ್ದರು. ಆದರೆ, ಇಂತಹ ಸಮಯದಲ್ಲಿ ಬರಬೇಕು. ಶ್ರೀಗಳು ಲಿಂಗೈಕ್ಯರಾದಾಗ ಪ್ರಧಾನಿ ಮೋದಿ ಅವರು ಬರಬೇಕಿತ್ತು. ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಗೃಹಮಂತ್ರಿಗಳು ಆಗಮಮಿಸಬೇಕಿತ್ತು'' ಎಂದು ಹೇಳಿದ್ದಾರೆ.

karnataka film chamber condolence to shivakumara swamiji death

''ಶ್ರೀಗಳಿಗೆ ಸರ್ಕಾರ ಭಾರತ ರತ್ನ ನೀಡದೆ ಇದ್ದರೂ ಪರವಾಗಿಲ್ಲ, ನಾವೇ ಅವರನ್ನು 'ಭಾರತ ರತ್ನ' ಎಂದು ಕರೆಯೋಣ'' ಎಂದಿದ್ದಾರೆ.

ಜೊತೆಗೆ ಸಿದ್ದಗಂಗಾ ಮಠಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ 5 ಲಕ್ಷ ರೂಪಾಯಿ ದೇಣಿಗೆ ನೀಡಲು ಸಹ ಚಿಂತನೆ ನಡೆಸಲಾಗಿದೆ.

More from Filmibeat

English summary
Karnataka film chamber expressed condolence to shivakumara swamiji death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X