Don't Miss!
- News
ಹುಬ್ಬಳ್ಳಿ: ಆನ್ಲೈನ್ ಗೇಮ್ಸ್ನಲ್ಲಿ 11 ಕೋಟಿ ರೂ ಗೆದ್ದವನನ್ನೂ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Sports
ನ್ಯೂಜಿಲೆಂಡ್ ಕೇಂದ್ರೀಯ ಒಪ್ಪಂದದಿಂದ ಹೊರ ನಡೆದ ಟ್ರೆಂಟ್ ಬೌಲ್ಟ್! ಏಕೆ ಈ ನಿರ್ಧಾರ?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- Automobiles
ನಮ್ಮ ಬೆಂಗಳೂರಿನಲ್ಲಿ ಬ್ಯಾಟರಿ ವಿನಿಮಯ ಕೇಂದ್ರಕ್ಕೆ ಚಾಲನೆ ನೀಡಿದ ಹೋಂಡಾ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ರವಿ ಹಬ್ಬ', 'ಶಿವಣ್ಣ ಸಂಭ್ರಮ' ಮಾಡಲು ಫಿಲ್ಮ್ ಚೇಂಬರ್ ಯೋಜನೆ!
ನಟ ಪುನೀತ್ ರಾಜಕುಮಾರ್ ಅಗಲಿಕೆಯ ನಂತರ ಸಿನಿಮಾರಂಗದಲ್ಲಿ ಹಲವು ದಿನಗಳ ಕಾಲ ಸೂತಕದ ಛಾಯೆ ಆವರಿಸಿತ್ತು. ನಿಧಾನವಾಗಿ ಚಿತ್ರರಂಗದ ಎಲ್ಲಾ ಕೆಲಸಗಳು ಶುರುವಾಗಿದ್ದು, ದೊಡ್ಮನೆ ನಟರು ಕೂಡ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಆದರೆ ಇತ್ತೀಚಿಗೆ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರ ತಂದಿದ್ದ ವಿಚಾರ ಬಂದರೆ ಶಿವರಾಜ್ ಕುಮಾರ್ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರುವುದು. ಪುನೀತ್ ರಾಜಕುಮಾರ್ ಅಗಲಿಕೆಯ ಕಾರಣದಿಂದಾಗಿ ನಟ ಶಿವರಾಜ್ ಕುಮಾರ್ ತಮ್ಮ 60 ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡಿಲ್ಲ.
ಅಣ್ಣಾವ್ರ
ಮಕ್ಕಳ
ನಡುವೆ
ಆಸ್ತಿಗಾಗಿ
ಅಂದು
ನಡೆದಿದ್ದೇನು..?
ಶಿವಣ್ಣ
ಕೊಟ್ಟ
ಉತ್ತರ
ಇಲ್ಲಿದೆ!
ಈಗ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಆಚರಿಸಲು ಸಕಲ ತಯಾರಿ ನಡೆಸಲಾಗುತ್ತಿದೆ. ಶಿವರಾಜ್ ಕುಮಾರ್ ಹುಟ್ಟುಹಬ್ಬದ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಬ್ಬವನ್ನು ಕೂಡ ವಿಶೇಷವಾಗಿ ಆಚರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ...

ಶಿವಣ್ಣನ 60ನೇ ಹುಟ್ಟುಹಬ್ಬ!
ಪುನೀತ್ ರಾಜಕುಮಾರ್ ಅಗಲಿಕೆಯ ಕಾರಣದಿಂದ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಸಾಧ್ಯವಾಗಿಲ್ಲ. ಒಂದು ವೇಳೆ ಪುನೀತ್ ರಾಜ್ಕುಮಾರ್ ಇದ್ದಿದ್ದರೆ ಶಿವರಾಜಕುಮಾರ್ 60ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಅಪ್ಪು ಅಗಲಿಕೆಯ ನೋವಿನಲ್ಲಿ ಶಿವರಾಜಕುಮಾರ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಜುಲೈ 12 ರಂದು ಶಿವಣ್ಣ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಇದ್ದಲ್ಲಿಂದಲೇ ವಿಶ್ ಮಾಡಿದ್ದರು. ಪ್ರತಿ ಬಾರಿ ಶಿವರಾಜ್ ಕುಮಾರ್ ತಮ್ಮ ನೂರಾರು ಅಭಿಮಾನಿಗಳ ಜೊತೆಗೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು ಆದರೆ ಈ ಬಾರಿ ಅದು ಸಹಕಾರಗೊಂಡಿಲ್ಲ.
ಶಿವಣ್ಣನ
ಹುಟ್ಟುಹಬ್ಬಕ್ಕೆ
127ನೇ
ಸಿನಿಮಾದ
ಪೋಸ್ಟರ್
ಲಾಂಚ್

ಶಿವರಾಜ್ ಕುಮಾರ್ ಹುಟ್ಟುಹಬ್ಬ ಆಚರಣೆ!
ಶಿವರಾಜ್ ಕುಮಾರ್ 60ನೇ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಣೆ ಮಾಡಬೇಕು ಎಂದು ಫಿಲಂ ಚೇಂಬರ್ ವತಿಯಿಂದ ಯೋಜನೆ ನಡೆದಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ದೊಡ್ಡದಾಗಿ ಹಬ್ಬದ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು, ಆಚರಣೆಗೆ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ಗಳನ್ನೆಲ್ಲಾ ಕರೆಯಬೇಕು. ಅಂಬಿ ಸಂಭ್ರಮ ಮಾಡಿದಂತೆ ಶಿವರಾಜ್ ಕುಮಾರ್ ಹುಟ್ಟು ಹಬ್ಬವನ್ನು ಆಚರಿಸಬೇಕು ಎಂದು ಫಿಲಂ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸಾರಥ್ಯದಲ್ಲಿ ಯೋಜನೆಯ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಯೋಜನೆಯ ರೂಪುರೇಷೆ ಕೂಡ ಸಿದ್ಧವಾಗಿದೆ.

ಶಿವಣ್ಣ ಸಂಭ್ರಮ, ರವಿ ಹಬ್ಬ!
ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನ ದೊಡ್ಡಮಟ್ಟದಲ್ಲಿ ಆಚರಣೆ ಮಾಡುವುದರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ. ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಇಬ್ಬರೂ ಕೂಡ ಸಮಕಾಲೀನವರು, ಸಮ ವಯಸ್ಸಿನವರೂ ಕೂಡ, ಜೊತೆಗೆ ಇಬ್ಬರೂ ಒಳ್ಳೆಯ ಸ್ನೇಹಿತರು. ಇವರಿಬ್ಬರು ಕನ್ನಡ ಸಿನಿಮಾ ರಂಗದ ದಿಗ್ಗಜರು. ಹಾಗಾಗಿ ಇವರಿಬ್ಬರ 60ನೇ ವಯಸ್ಸಿನ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಸೆಲೆಬ್ರೇಟ್ ಮಾಡಲು ತಯಾರಿ ನಡೆಸಲಾಗಿದೆ. ಆದರೆ ಇದಕ್ಕೆ ನಟ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಓಕೆ ಎನ್ನಬೇಕು ಅಷ್ಟೇ.

ವೇದ, ರವಿಬೋಪಣ್ಣ ಚಿತ್ರದಲ್ಲಿ ಬ್ಯುಸಿ!
ವೇದ, ರವಿ ಬೋಪಣ್ಣ ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಬ್ಯುಜಿಯಾಗಿದ್ದಾರೆ. ನಟ ಶಿವರಾಜ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ಕಿರುತೆರೆ ಕಾರ್ಯಕ್ರಮದಲ್ಲೂ ಕೂಡಾ ಭಾಗಿಯಾಗಿದ್ದಾರೆ. ಅಂತೆಯೇ ನಟ ರವಿಚಂದ್ರನ್ ಅವರ ನಿರ್ದೇಶನದ ರವಿ ಬೋಪಣ್ಣ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ ಚಿತ್ರದ ಜೊತೆಗೆ ರವಿಚಂದ್ರನ್ ಕಿರುತೆರೆ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿ ಮಿಂಚುತ್ತಿದ್ದಾರೆ. ಏನೋ ಈ ಜೋಡಿಯ 60ನೇ ವಯಸ್ಸಿನ ಸಂಭ್ರಮವನ್ನು ಒಂದೇ ವೇದಿಕೆ ಮೇಲೆ ನೋಡುವುದು ಅಭಿಮಾನಿಗಳಿಗೆ ದೊಡ್ಡ ಹಬ್ಬವೇ ಸರಿ. ಎಲ್ಲವೂ ಅಂತಿಮವಾದ ಬಳಿಕ ಕಾರ್ಯಕ್ರಮ ಯಾವಾಗ ಎನ್ನುವ ಬಗ್ಗೆ ದಿನಾಂಕವನ್ನು ಪ್ರಕಟ ಮಾಡಲಾಗುತ್ತದೆ.