twitter
    For Quick Alerts
    ALLOW NOTIFICATIONS  
    For Daily Alerts

    ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ನೀಡಿದ ಫಿಲ್ಮ್ ಚೇಂಬರ್

    |

    ಕನ್ನಡಿಗರಿಗೆ, ಕರ್ನಾಟಕ ರಾಜ್ಯಕ್ಕೆ ಯಾವುದೇ ರೀತಿಯ ಸಂಕಷ್ಟ ಬಂದಾಗ ಚಿತ್ರರಂಗ ಸದಾ ಜೊತೆಯಲ್ಲಿರುತ್ತೆ. ಸಿನಿಮಾ ನಟರು, ಅವರ ಅಭಿಮಾನಿಗಳ ಜೊತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೂ ನೆರೆ ಸಂತ್ರಸ್ಥರಿಗಾಗಿ ಪರಿಹಾರ ನೀಡಿದೆ.

    ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

    ಹೌದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಕರ್ನಾಟಕ ರಾಜ್ಯ ನೆರೆ ಸಂತ್ರಸ್ಥರಿಗೆ 25 ಲಕ್ಷ ಹಣ ಸಹಾಯ ಮಾಡಲಾಗಿದೆ.

    ಸಿಎಂ ಭೇಟಿ ಮಾಡಿ ನೆರೆ ಸಂತ್ರಸ್ಥರಿಗೆ 5 ಲಕ್ಷ ಚೆಕ್ ನೀಡಿದ ಪುನೀತ್ ಸಿಎಂ ಭೇಟಿ ಮಾಡಿ ನೆರೆ ಸಂತ್ರಸ್ಥರಿಗೆ 5 ಲಕ್ಷ ಚೆಕ್ ನೀಡಿದ ಪುನೀತ್

    ಈ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಇಂದು ಭೇಟಿ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮತ್ತು ಪದಾಧಿಕಾರಿಗಳು 25 ಲಕ್ಷ ಚೆಕ್ ಸಿಎಂಗೆ ಹಸ್ತಾಂತರಿಸಿದರು.

    Karnataka Film Chamber Donates 25 Lakhs To Cm Relief Fund

    ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'

    ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಸಾರಾ ಗೋವಿಂದು, ಚಿನ್ನೇಗೌಡ, ಥಾಮಸ್ ಡಿಸೋಜಾ ಹಾಜರಿದ್ದರು. ಇತ್ತೀಚಿಗಷ್ಟೆ ನಟ ಪುನೀತ್ ರಾಜ್ ಕುಮಾರ್ 5 ಲಕ್ಷ ರೂಪಾಯಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದರು. ನಟ ಉಪೇಂದ್ರ ಅವರು ಕೂಡ 5 ಲಕ್ಷ ದೇಣಿಗೆ ನೀಡಿದ್ದಾರೆ.

    ಕನ್ನಡ ನಟರು ಮಾತ್ರ ಕೆಲವು ಪರಭಾಷೆಯ ಕಲಾವಿದರು ಕರ್ನಾಟಕ ನೆರೆ ಸಂತ್ರಸ್ಥರಿಗೆ ನೆರವು ನೀಡಿದ್ದಾರೆ. ಸಂಪೂರ್ಣೇಶ್ ಬಾಬು 2 ಲಕ್ಷ ಹಾಗೂ ಸೂರ್ಯ, ಕಾರ್ತಿ ಸಹೋದರರು ಕೇರಳ ಮತ್ತು ಕರ್ನಾಟಕಕ್ಕೆ ಸೇರಿ 10 ಲಕ್ಷ ನೀಡಿದ್ದಾರೆ.

    English summary
    Film chamber donates 25 lakhs to chief minister relief fund karnataka for uttara karnataka and karavali karnataka flood.
    Monday, August 19, 2019, 18:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X