Don't Miss!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- News Mangalsutra Row: ಸಾಧನೆ ಹೇಳಿ ಮತ ಕೇಳಲು ಮುಖವಿಲ್ಲದ ಪ್ರಧಾನಿ: ಕಾಂಗ್ರೆಸ್
- Sports RCB: ಯುಜ್ವೇಂದ್ರ ಚಹಾಲ್ ಮರಳಿ ಬರುವಂತೆ ಬೇಡಿಕೊಳ್ಳಿ; ಆರ್ಸಿಬಿಗೆ ಸಲಹೆ ನೀಡಿದ ರಾಬಿನ್ ಉತ್ತಪ್ಪ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೆ ಚಿತ್ರ ಪ್ರದರ್ಶನ ಶುರು : ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ
ಯು ಎಫ್ ಓ, ಕ್ಯೂಬ್ ಸಮಸ್ಯೆಗೆ ಈಗ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಪ್ರತಿ ವಾರದಂತೆ ಈ ಶುಕ್ರವಾರ ಸಹ ಹೊಸ ಸಿನಿಮಾಗಳು ಬಿಡುಗಡೆಯಾಗಲಿವೆ. ಯು ಎಫ್ ಓ ಮತ್ತು ಕ್ಯೂಬ್ ಸಂಸ್ಥೆಯ ವಿರುದ್ಧ ದಕ್ಷಿಣ ಭಾರತದ ಚಿತ್ರ ನಿರ್ಮಾಪಕರು ನಡೆಸುತ್ತಿದ್ದ ಹೋರಾಟಕ್ಕೆ ಸದ್ಯ ಬ್ರೇಕ್ ಬಿದ್ದಿದೆ. ಡಿಜಿಟಲ್ ಸರ್ವಿಸ್ ಪ್ರೊವೈಡರ್ಸ್ 15 ದಿನಗಳ ಕಾಲ ಕಾಲಾವಕಾಶ ನೀಡಿದ್ದು, ಸದ್ಯಕ್ಕೆ ಸಿನಿಮಾಗಳನ್ನು ಬಿಡುಗಡೆ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧಾರ ಮಾಡಿದೆ.
ಯುಎಫ್ ಓ ಮತ್ತು ಕ್ಯೂಬ್ ಸಮಸ್ಯೆಯಿಂದ ಕೆಲವು ಸಿನಿಮಾಗಳು ಬಿಡುಗಡೆ ಮುಂದಕ್ಕೆ ಹೋಗಿತ್ತು. ಈಗ ಅಂತಹ ಚಿತ್ರಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ನಟಿ ಪೂಜಾ ಗಾಂಧಿ ನಟನೆಯ '3' (ದಂಡುಪಾಳ್ಯ 3), ಹೊಸಬರ 'ಇದಂ ಪ್ರೇಮಂ ಜೀವನಂ' ಹಾಗೂ 'ನನ್ನಿಷ್ಟ' ಚಿತ್ರಗಳು ಈ ಶುಕ್ರವಾರ ಬಿಡುಗಡೆಯಾಗಲಿವೆ. ಚಿತ್ರ ನಿರ್ಮಾಪಕರಿಗೆ ತೊಂದರೆ ಆಗಬಾರದು ಎಂದು ಅವರ ಹಿತ ದೃಷ್ಟಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ ಈ ವಿಷಯವಾಗಿ ಇಂದು ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಸಾ.ರಾ.ಗೋವಿಂದು ಪತ್ರಿಕಾಗೋಷ್ಟಿ ಏರ್ಪಡಿಸಿದ್ದಾರೆ.
ಕರ್ನಾಟಕದಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ: ಸಾರಾ ಗೋವಿಂದು
ಏನಿದು ಯುಎಫ್ ಓ ಮತ್ತು ಕ್ಯೂಬ್ ಸಮಸ್ಯೆ?
ಯು.ಎಫ್.ಓ ಹಾಗೂ ಕ್ಯೂಬ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ಡಿಜಿಟಲ್ ಆಗಿ ಪ್ರದರ್ಶನ ಮಾಡುವ ಸಂಸ್ಥೆಗಳು. ಈ ಹಿಂದೆ ರೀಲ್ ಇದ್ದ ಕಾಲದಲ್ಲಿ ಪ್ರತಿ ಚಿತ್ರಮಂದಿರಕ್ಕೂ ಸಿನಿಮಾದ ಪ್ರಿಂಟ್ ಇರುವ ರೀಲ್ ತಲುಪಿಸಬೇಕಾಗಿತ್ತು. ಆದರೆ ಮಾರುಕಟ್ಟೆಗೆ ಯು.ಎಫ್.ಓ ಹಾಗೂ ಕ್ಯೂಬ್ ಬಂದ ಮೇಲೆ ಅದರಲ್ಲಿ ಸಿನಿಮಾ ಅಪ್ ಲೋಡ್ ಮಾಡಿದರೆ ನೇರವಾಗಿ ಚಿತ್ರಮಂದಿರದಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಬಹುದಾಗಿದೆ. ಇಲ್ಲಿಯವರೆಗೆ ಎಲ್ಲ ಸಿನಿಮಾಗಳು ಇದೇ ಪದ್ಧತಿಯನ್ನು ಅನುಸರಿಸುತ್ತಿದೆ.
ಮುಂದಿನವಾರ ತೆರೆ ಕಾಣಬೇಕಿದ್ದ ಸಿನಿಮಾಗಳಿಗೆ ತಡೆ
ಡಿಜಿಟಲ್ ಅಪ್ಲೋಡ್ಗೆ ಒಂದು ಥಿಯೇಟರ್ಗೆ ಯು.ಎಫ್.ಓ ಹಾಗೂ ಕ್ಯೂಬ್ ಸಂಸ್ಥೆಗಳು 2 ಸಾವಿರದವರೆಗೆ ಹಣ ಪಡೆಯುತ್ತಿದ್ದವು. ಆದರೆ ಈಗ ಈ ಎರಡು ಸಂಸ್ಥೆಗಳು ಮರ್ಜ್ ಆಗಿದ್ದು, ಒಂದು ಥಿಯೇಟರ್ಗೆ 15 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡುತ್ತಿದೆ. ಇದು ನಿರ್ಮಾಪಕರಿಗೆ ದೊಡ್ಡ ಹೊರೆ ಆಗುತ್ತದೆ ಎಂದು ಇದನ್ನು ಇಡೀ ದಕ್ಷಿಣ ಭಾರತದ ಚಿತ್ರರಂಗ ವಿರೋಧಿಸಿತ್ತು.