For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ' ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿ: ಸರ್ಕಾರಕ್ಕೆ ವಾಣಿಜ್ಯ ಮಂಡಳಿ ಮನವಿ

  |

  ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಗಂಧದ ಗುಡಿ' ಅಕ್ಟೋಬರ್ 28 ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ.

  ಇದು ಸಾಮಾನ್ಯ ಕಮರ್ಷಿಯಲ್ ಸಿನಿಮಾ ಅಲ್ಲದೆ, ಕರ್ನಾಟಕ ರಾಜ್ಯದ ಪ್ರಕೃತಿ ಸಂಪತ್ತು, ರಾಜ್ಯದ ಭವ್ಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿರುವ ಡಾಕ್ಯುಸಿನಿಮಾ ಆಗಿದೆ. ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಇದಾಗಿದ್ದು, ಡಾಕ್ಯು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್, ತಾವು-ತಾವಾಗಿಯೇ ಕಾಣಿಸಿಕೊಂಡಿದ್ದಾರೆ.

  ಈ ಸಿನಿಮಾದ ಬಳಿಕ ಪುನೀತ್ ರಾಜ್‌ಕುಮಾರ್ ಅನ್ನು ಇನ್ಯಾವುದೇ ಹೊಸ ಕತೆ, ಪಾತ್ರಗಳಲ್ಲಿ ತೆರೆಯ ಮೇಲೆ ನೋಡುವ ಅವಕಾಶ ಅಭಿಮಾನಿಗಳಿಗಿಲ್ಲ. ಆ ಕಾರಣ ಈ ಸಿನಿಮಾ ಹೆಚ್ಚು ಮಂದಿಯನ್ನು ತಲುಪಲಿ ಎಂಬ ಉದ್ದೇಶದಿಂದ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಬೇಕೆಂದು ಈಗಾಗಲೇ ಒತ್ತಾಯವಿದ್ದು, ಇದೀಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಸರ್ಕಾರವನ್ನು ಒತ್ತಾಯಿಸಿದೆ.

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರ

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರ

  ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್, ''ಪಿಆರ್‌ಕೆ ಪ್ರೊಡಕ್ಷನ್‌ನಿಂದ ಸ್ವತಃ ನಿರ್ಮಿಸಿ, ಪುನೀತ್ ರಾಜ್‌ಕುಮಾರ್ ಅಭಿಯಿಸಿರುವ 'ಗಂಧದ ಗುಡಿ' ಚಲನಚಿತ್ರವು ನಮ್ಮ ಕರ್ನಾಟಕ ನೈಸರ್ಗಿಕ ಪರಂಪರೆ ಮತ್ತು ಕರ್ನಾಟಕದ ಸೌಂದರ್ಯದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂಥಹಾ ಚಿತ್ರವಾಗಿದ್ದು ದಿವಂಗತ, ಪುನೀತ್ ರಾಜ್‌ಕುಮಾರ್ ಅವರ ಬೆಳ್ಳಿತೆರೆಯ ಅಂತಿಮ ಸಿನಿಮಾ ಆಗಿದೆ.

  ಪ್ರಧಾನ ಮಂತ್ರಿಗಳಿಂದಲೂ ಟ್ವೀಟ್

  ಪ್ರಧಾನ ಮಂತ್ರಿಗಳಿಂದಲೂ ಟ್ವೀಟ್

  ಜೊತೆಗೆ ನಿಜವಾದ ನಾಯಕನ ಪ್ರಯಾಣವನ್ನು ಚಿತ್ರವೆಂದರೆ ತಪ್ಪಾಗಲಾರದು. ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಈ ಚಿತ್ರದ ಟ್ರೈಲರ್ ಅನಾವರಣಗೊಂಡ ಸಂದರ್ಭದಲ್ಲಿ ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಪ್ರತಿಭೆಯನ್ನು ವ್ಯಕ್ತಿಗತ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಶುಭ ಹಾರೈಸಿರುತ್ತಾರೆ.

  ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಮನವಿ

  ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಮನವಿ

  ಆದ್ದರಿಂದ ತಾವು ದಯಮಾಡಿ ಪುನೀತ್ ರಾಜ್‌ಕುಮಾರ್ ಅವರ 'ಗಂಧದ ಗುಡಿ' ಕನ್ನಡ ಚಲನಚಿತ್ರಕ್ಕೆ ರಾಜ್ಯ ಸರ್ಕಾರದಿಂದ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಈ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಈ ಮೂಲಕ ತಮ್ಮಲ್ಲಿ ಸಿನಯ ಪ್ರಾರ್ಥನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾಮ ಹರೀಶ್ ಪತ್ರ ಬರೆದಿದ್ದಾರೆ. ಜೊತೆಗೆ ವಿಡಿಯೋ ಮೂಲಕವೂ ಮನವಿ ಸಲ್ಲಿಸಿದ್ದಾರೆ.

  ಸಿಎಂ ಅವರಿಂದ ಘೋಷಣೆ ಸಾಧ್ಯತೆ

  ಸಿಎಂ ಅವರಿಂದ ಘೋಷಣೆ ಸಾಧ್ಯತೆ

  'ಗಂಧದ ಗುಡಿ' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವು ಅಕ್ಟೋಬರ್ 21 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿಯೇ ಈ ವಿಷಯದ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಯೂ ಇದೆ. 'ಗಂಧದ ಗುಡಿ' ಡಾಕ್ಯುಸಿನಿಮಾವು ಅಕ್ಟೋಬರ್ 28 ರಂದು ರಾಜ್ಯದಾದ್ಯಂತ ಬಿಡುಗಡೆ ಆಗಲಿದೆ.

  English summary
  Karnataka Film Chamber Of Commerce Request CM Basavaraj Bommai To Announce Tax Exemption To Gandhada Gudi.
  Thursday, October 20, 2022, 19:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X