twitter
    For Quick Alerts
    ALLOW NOTIFICATIONS  
    For Daily Alerts

    Breaking: ಚಿತ್ರರಂಗದ ಒತ್ತಡಕ್ಕೆ ಮಣಿದ ಸರ್ಕಾರ, 100% ಸೀಟ್‌ ಭರ್ತಿಗೆ ಒಪ್ಪಿಗೆ

    |

    ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಮಾತ್ರ ಅವಕಾಶ ಮುಂದುವರಿಸಿದ್ದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆ ರಾಜ್ಯ ಸರ್ಕಾರ ತನ್ನ ನಿಲುವು ಬದಲಾಯಿಸಿಕೊಂಡಿದೆ. ಚಿತ್ರರಂಗದ ಹಿತದೃಷ್ಟಿ ಹಾಗೂ ಕಾರ್ಮಿಕರ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಫೆಬ್ರವರಿ 4ರಿಂದಲೇ 100 ಪರ್ಸೆಂಟ್ ಕಾರ್ಯನಿರ್ವಹಿಸಲು ಒಪ್ಪಿಗೆ ಸೂಚಿಸಿದೆ.

    Recommended Video

    ಜಸ್ಟ್ 28 ದಿನ ಅಷ್ಟೆ ಅವಕಾಶ | Filmibeat Kannada

    ಈ ವಿಚಾರವಾಗಿ ಇಂದು ಸಂಜೆ ವಿಧಾನಸೌದಲ್ಲಿ ಆರೋಗ್ಯ ಸಚಿವ ಡಾ ಸುಧಾಕರ್ ನೇತೃತ್ವದಲ್ಲಿ ಸಭೆ ಸೇರಲಾಗಿತ್ತು. ಈ ಸಭೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಹಿರಿಯ ನಟ ಶಿವರಾಜ್ ಕುಮಾರ್, ತಾರಾ ಅನುರಾಧಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

    'ಚಿತ್ರಮಂದಿರಕ್ಕೆ 100 ಪರ್ಸೆಂಟ್ ಅವಕಾಶ ಕೊಡಲಿ'- ಕೃಷಿ ಸಚಿವ ಬಿಸಿ ಪಾಟೀಲ್'ಚಿತ್ರಮಂದಿರಕ್ಕೆ 100 ಪರ್ಸೆಂಟ್ ಅವಕಾಶ ಕೊಡಲಿ'- ಕೃಷಿ ಸಚಿವ ಬಿಸಿ ಪಾಟೀಲ್

    ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಾ ಸುಧಾಕರ್ ''ಮುಂದಿನ ನಾಲ್ಕು ವಾರಗಳ ಕಾಲ ಚಿತ್ರಮಂದಿರಗಳಿಗೆ ಶೇಕಡಾ 100 ರಷ್ಟು ಅನುಮತಿ ನೀಡಲಾಗುತ್ತಿದೆ. ಒಂದು ವೇಳೆ ಚಿತ್ರಮಂದಿರಗಳಿಂದ ಕೊರೊನಾ ಸೋಂಕು ಹರಡಿದರೆ ಮತ್ತೆ ಈ ಆದೇಶ ವಾಪಸ್ ಪಡೆಯಲಾಗುವುದು'' ಎಂದು ಎಚ್ಚರಿಕೆ ನೀಡಿದ್ದಾರೆ.

    Karnataka Government allows to 100% Occupancy in Film Theatre

    'ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ': ಸಚಿವ ಡಾ ಸುಧಾಕರ್ ಪ್ರತಿಕ್ರಿಯೆ 'ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ': ಸಚಿವ ಡಾ ಸುಧಾಕರ್ ಪ್ರತಿಕ್ರಿಯೆ

    ಚಿತ್ರಮಂದಿರಗಳಲ್ಲಿ ಶೇಕಡಾ 100 ರಷ್ಟು ಅನುಮತಿ ನೀಡಿರುವ ಹಿನ್ನೆಲೆ ರಾಜ್ಯಸರ್ಕಾರದಿಂದ ನೂತನ ಮಾರ್ಗಸೂಚಿ ಪ್ರಕಟಿಸುವುದಾಗಿ ಸಚಿವ ಸುಧಾಕರ್ ತಿಳಿಸಿದ್ದಾರೆ.

    ಶಿವರಾಜ್ ಕುಮಾರ್ ಮಾತನಾಡಿ ''ಶೇಕಡಾ 50ರಷ್ಟು ಅವಕಾಶ ಏಕೆ ಎಂದು ಅವರು ಹೇಳಿದ್ರು. ಶೇಕಡಾ 100ರಷ್ಟು ನಾವು ಏಕೆ ಕೇಳುತ್ತಿದ್ದೇವೆ ಎಂದು ಹೇಳಿದ್ವಿ. ವಾದ-ಪ್ರತಿವಾದದ ಚರ್ಚೆ ಬಳಿಕ ಸರ್ಕಾರ ಶೇಕಡಾ 100ರಷ್ಟು ಸೀಟ್ ಭರ್ತಿಗೆ ಒಪ್ಪಿಗೆ ನೀಡಿದ್ದಾರೆ. ಮುಂದಿನ ದಿನದಲ್ಲಿ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ'' ಎಂದು ತಿಳಿಸಿದರು.

    ಈ ವೇಳೆ ಮಾತನಾಡಿದ ವಾರ್ತಾ ಸಚಿವ ಸಿಸಿ ಪಾಟೀಲ್ ''ನಾವು ಸಹ ಒಂದು ವರ್ಷದಿಂದ ಚಿತ್ರಮಂದಿರಕ್ಕೆ ಕಾಲಿಟ್ಟಿಲ್ಲ. ಅದೊಷ್ಟು ಬೇಗ ಶಿವರಾಜ್ ಕುಮಾರ್ ಚಿತ್ರ ಬರಲಿ. ನಾವು ಚಿತ್ರ ಮಂದಿರಕ್ಕೆ ಹೋಗಿ ಚಿತ್ರ ವೀಕ್ಷಣೆ ಮಾಡ್ತಿನಿ ಎಂದು ಚಿತ್ರೋದ್ಯಮಕ್ಕೆ ಶುಭ ಹಾರೈಸಿದರು.

    English summary
    Karnataka Government allows to 100% Occupancy in Film Theatre.
    Thursday, February 4, 2021, 9:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X