For Quick Alerts
  ALLOW NOTIFICATIONS  
  For Daily Alerts

  ರಾಜ್ಯಾದ್ಯಂತ ಜುಲೈ 19ರಿಂದ ಚಿತ್ರಮಂದಿರ ಓಪನ್: ಷರತ್ತುಗಳು ಅನ್ವಯ

  |

  ರಾಜ್ಯಾದ್ಯಂತ ನಾಳೆಯಿಂದ ಚಿತ್ರಮಂದಿರಗಳು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ಸಹ ವಿಧಿಸಿದೆ.

  ರಾಜ್ಯಾದ್ಯಂತ ನಾಳೆಯಿಂದ ಚಿತ್ರಮಂದಿರಗಳು ತೆರೆಯಬಹುದಾದರೂ ಕೇವಲ 50% ಸೀಟು ಸಾಮರ್ಥ್ಯದೊಂದಿಗೆ ಮಾತ್ರವೇ ಚಿತ್ರಮಂದಿರಗಳು ಕಾರ್ಯ ನಿರ್ವಹಿಸಬೇಕಿದೆ. ಮಲ್ಟಿಫ್ಲೆಕ್ಸ್‌ಗಳಿಗೂ ಇದೇ ನಿಯಮ ಅನ್ವಯವಾಗಲಿದೆ.

  ಏಪ್ರಿಲ್ 20 ರಿಂದ ರಾಜ್ಯದ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ನೀಡಿತ್ತು. ಅಂದಿನಿಂದಲೂ ರಾಜ್ಯದ ಯಾವ ಚಿತ್ರಮಂದಿರವೂ ಕಾರ್ಯ ನಿರ್ವಹಿಸಿಲ್ಲ. ಈಗ ಬಹುತೇಕ ಮೂರು ತಿಂಗಳ ನಂತರ ಚಿತ್ರಮಂದಿರ ಬಾಗಿಲು ತೆರೆಯುತ್ತಿದೆ.

  ಆದರೆ ಶೇ 50% ಸೀಟು ಸಾಮರ್ಥ್ಯದೊಂದಿಗೆ ಮಾತ್ರವೇ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಜೊತೆಗೆ ಚಿತ್ರಮಂದಿರಗಳ ಸ್ವಚ್ಛತೆ, ಸ್ಯಾನಿಟೈಸೇಷನ್ ಇತರೆ ನಿಬಂಧನೆಗಳನ್ನು ಸರ್ಕಾರವು ಚಿತ್ರಮಂದಿರಗಳ ಮೇಲೆ ಹೇರಿದೆ. ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಇದು ಅಗತ್ಯವೂ ಆಗಿದೆ.

  ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಸಹ ಚಿತ್ರಮಂದಿರಗಳನ್ನು ತೆರೆಯಲು ಅಲ್ಲಿನ ಸರ್ಕಾರಗಳು ಅನುಮತಿ ನೀಡಿವೆ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಇನ್ನೂ ತೆರೆದಿಲ್ಲ.ರಾಜ್ಯದಲ್ಲಿ ಚಿತ್ರಮಂದಿರಗಳು ತೆರೆದಿವೆಯಾದರೂ ನಾಳೆಯೇ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನ. ಈ ಹಿಂದೆ ಲಾಕ್‌ಡೌನ್ ಆದಾಗ ಯಾವ ಸಿನಿಮಾಗಳು ಚಿತ್ರಮಂದಿರದಲ್ಲಿದ್ದವೊ ಅವು ಮಾತ್ರವೇ ಮತ್ತೆ ತೆರೆಗೆ ಬರಬಹುದು ಎನ್ನಲಾಗುತ್ತಿದೆ.

  ಪಂಚೆಯುಟ್ಟು ಮಳೆಯನ್ನು ಲೆಕ್ಕಿಸದೆ ಭತ್ತದ ಪೈರು ನಾಟಿ ಮಾಡಿದ ರಕ್ಷಿತ್ | Filmibeat Kannada

  ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವವರೆಗೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುವುದಿಲ್ಲ. ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 3', ಯಶ್ ನಟನೆಯ 'ಕೆಜಿಎಫ್ 2', ಸುದೀಪ್ ನಟನೆಯ 'ಕೋಟಿಗೊಬ್ಬ 3', ದುನಿಯಾ ವಿಜಯ್‌ರ 'ಸಲಗ', ರಕ್ಷಿತ್ ಶೆಟ್ಟಿಯ '777' ಇನ್ನೂ ಹಲವಾರು ಕನ್ನಡ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

  English summary
  Karnataka government allows to open theaters all over the state. Nut Only 50% occupancy is permitted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X