For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳು ಸಂಪೂರ್ಣ ಬಂದ್: ಸರ್ಕಾರ ಆದೇಶ

  |

  ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಿರುವ ಕಾರಣ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಲಿವೆ.

  ಚಿತ್ರಮಂದಿರಗಳು ಮಾತ್ರವಲ್ಲದೆ ರಂಗಮಂದಿರಗಳು, ಆಡಿಟೋರಿಯಮ್‌ಗಳು, ಮಾಲ್‌ಗಳು, ಮನೊರಂಜನಾತ್ಮಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹ ಬಂದ್ ಆಗಲಿವೆ.

  ಏಪ್ರಿಲ್ 3 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಪುನೀತ್ ರಾಜ್‌ಕುಮಾರ್ ಹಾಗೂ ಇತರ ಸಿನಿಮಾ ಸೆಲೆಬ್ರಿಟಿಗಳ ಮನವಿ ಮೇರೆಗೆ ನಿರ್ಬಂಧವನ್ನು ಸಡಿಲಿಸಿ ಮತ್ತೆ ಏಪ್ರಿಲ್ 7 ರಿಂದ 50% ಆಕ್ಯುಪೆನ್ಸಿ ಆದೇಶ ಮಾಡಲಾಯಿತು. ಇದೀಗ ಪೂರ್ಣವಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಬಿದ್ದಿದೆ.

  ಸರ್ಕಾರದ ಹೊಸ ಮಾರ್ಗಸೂಚಿಯು ಮೇ 4 ರವರೆಗೆ ಜಾರಿಯಲ್ಲಿರಲಿದೆ. ಮೇ 4 ರ ವೇಳೆಗೆ ಆಗಿನ ಪರಿಸ್ಥಿತಿಯ ಅನುಸಾರವಾಗಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಲಿದೆ.

  ಅಮೆಜಾನ್ ಪ್ರೈಮ್ ಗೆ ಬರ್ತಿದೆ ರಾಬರ್ಟ್ ಸಿನಿಮಾ | Filmibeat Kannada

  ಕನ್ನಡದ ಹಲವು ಸ್ಟಾರ್ ನಟರ ಸಿನಿಮಾಗಳು ಏಪ್ರಿಲ್‌ ತಿಂಗಳಲ್ಲಿ ಬಿಡುಗಡೆ ಆಗಲು ಅಣಿಯಾಗಿದ್ದವು. ಆದರೆ ಸರ್ಕಾರವು ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದ ಕಾರಣ ಸಿನಿಮಾ ಬಿಡುಗಡೆಯಿಂದ ಹಿಂದೆ ಸರಿದವು ಚಿತ್ರತಂಡಗಳು. ಇದೀಗ ಚಿತ್ರಮಂದಿರ ಪೂರ್ಣ ಬಂದ್ ಆಗಿದ್ದು, ಚಿತ್ರಮಂದಿರಗಳು ಮರಳಿ ತೆರೆಯುವವರೆಗೆ ಚಿತ್ರರಂಗಕ್ಕೆ ಕಾಯದೇ ವಿಧಿ ಇಲ್ಲದಾಗಿದೆ.

  English summary
  Due to surge in COVID 19 cases Karnataka government ordered to shut down theaters, Malls, Auditoriums.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X