Don't Miss!
- Education
Chamarajanagar WCD Recruitment 2021: 223 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ - Sports
ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ - Automobiles
ಕೇವಲ 2.7 ಸೆಕೆಂಡ್ನಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗ, ಹೊಸ ಫೆರಾರಿ ಕಾರು ಅನಾವರಣ - News
ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ - Lifestyle
ಈ ನೈಸರ್ಗಿಕ ವಿಷಯಗಳಿಂದ ನಿಮ್ಮ ಬ್ಲಾಕ್ ಹೆಡ್ಸ ನ್ನು ತೆಗೆದುಹಾಕಬಹುದು - Finance
ಚಿನ್ನದ ಬೆಲೆ ಇಳಿಕೆ: 3 ದಿನಗಳಲ್ಲಿ 1,000 ರೂಪಾಯಿ ಕುಸಿತ - Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ! - Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರಮಂದಿರಗಳು ಸಂಪೂರ್ಣ ಬಂದ್: ಸರ್ಕಾರ ಆದೇಶ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಆಗುತ್ತಿರುವ ಕಾರಣ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿ ಹೊರಡಿಸಿದ್ದು, ರಾಜ್ಯದಾದ್ಯಂತ ಚಿತ್ರಮಂದಿರಗಳು ಸಂಪೂರ್ಣ ಬಂದ್ ಆಗಲಿವೆ.
ಚಿತ್ರಮಂದಿರಗಳು ಮಾತ್ರವಲ್ಲದೆ ರಂಗಮಂದಿರಗಳು, ಆಡಿಟೋರಿಯಮ್ಗಳು, ಮಾಲ್ಗಳು, ಮನೊರಂಜನಾತ್ಮಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ಸಹ ಬಂದ್ ಆಗಲಿವೆ.
ಏಪ್ರಿಲ್ 3 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಚಿತ್ರಮಂದಿರಗಳಲ್ಲಿ 50% ಪ್ರೇಕ್ಷಕರಿಗಷ್ಟೆ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿತ್ತು. ಪುನೀತ್ ರಾಜ್ಕುಮಾರ್ ಹಾಗೂ ಇತರ ಸಿನಿಮಾ ಸೆಲೆಬ್ರಿಟಿಗಳ ಮನವಿ ಮೇರೆಗೆ ನಿರ್ಬಂಧವನ್ನು ಸಡಿಲಿಸಿ ಮತ್ತೆ ಏಪ್ರಿಲ್ 7 ರಿಂದ 50% ಆಕ್ಯುಪೆನ್ಸಿ ಆದೇಶ ಮಾಡಲಾಯಿತು. ಇದೀಗ ಪೂರ್ಣವಾಗಿ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಆದೇಶ ಹೊರಬಿದ್ದಿದೆ.
ಸರ್ಕಾರದ ಹೊಸ ಮಾರ್ಗಸೂಚಿಯು ಮೇ 4 ರವರೆಗೆ ಜಾರಿಯಲ್ಲಿರಲಿದೆ. ಮೇ 4 ರ ವೇಳೆಗೆ ಆಗಿನ ಪರಿಸ್ಥಿತಿಯ ಅನುಸಾರವಾಗಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಹೊರಡಿಸಲಿದೆ.
ಕನ್ನಡದ ಹಲವು ಸ್ಟಾರ್ ನಟರ ಸಿನಿಮಾಗಳು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲು ಅಣಿಯಾಗಿದ್ದವು. ಆದರೆ ಸರ್ಕಾರವು ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದ ಕಾರಣ ಸಿನಿಮಾ ಬಿಡುಗಡೆಯಿಂದ ಹಿಂದೆ ಸರಿದವು ಚಿತ್ರತಂಡಗಳು. ಇದೀಗ ಚಿತ್ರಮಂದಿರ ಪೂರ್ಣ ಬಂದ್ ಆಗಿದ್ದು, ಚಿತ್ರಮಂದಿರಗಳು ಮರಳಿ ತೆರೆಯುವವರೆಗೆ ಚಿತ್ರರಂಗಕ್ಕೆ ಕಾಯದೇ ವಿಧಿ ಇಲ್ಲದಾಗಿದೆ.


Click it and Unblock the Notifications






























